Please assign a menu to the primary menu location under menu

Technology

‘ಡ್ರೀಮ್‌ 11’ ಸ್ಥಗಿತ ನಿರ್ಧಾರಕ್ಕೆ ಖುಷಿಪಟ್ಟವರ ಸಂಖ್ಯೆಯೇ ಹೆಚ್ಚು!

ಬೆಂಗಳೂರು: ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ ‘ಡ್ರೀಮ್‌ 11’ ಕರ್ನಾಟಕದಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿದ್ದು, ಇದಕ್ಕೆ ಬೇಸರ ಪಟ್ಟವರ ಸಂಖ್ಯೆಗಿಂತ ಖುಷಿಪಟ್ಟವರ ಸಂಖ್ಯೆಯೇ ಹೆಚ್ಚು ಎನ್ನುತ್ತದೆ ವರದಿ.
ಕಂಪನಿಯ ಸಂಸ್ಥಾಪಕರ ಮೇಲೆ 2 ದಿನದ ಹಿಂದೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ, ‘ಡ್ರೀಮ್‌ 11’ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ. #ಡ್ರೀಮ್11ಸ್ಥಗಿತ ಅಡಿಯಲ್ಲಿ ಸಾಮಾಜಿಕ ಜಾಲತಾಣ ‘ಕೂ’ ನಲ್ಲಿ ಪ್ರತ್ರಿಕ್ರಿಯಿಸಿರುವ ಅನೇಕ ಜನರು ಇದೊಂದು ಉತ್ತಮ ನಿರ್ಧಾರ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ರಕ್ತಬೀಜಾಸುರನಂತೆ, ಜೂಜು ಸಾಯುವುದು ಸುಲಭವಲ್ಲ ಇನ್ನೊಂದು, ಮತ್ತೊಂದು, ಮಗದೊಂದು ರೂಪ ತಳೆದು ಬಂದೇ ಬರುತ್ತದೆ, ರಕ್ತ ರುಚಿಯ ಸವಿದ ಕಾಡು ಮೃಗ ಊರಿಗೆ ನುಗ್ಗಿದಂತೆ! ಕಣ್ಣೊರೆಸುವ ತಂತ್ರ, ಹುಶಾರಾಗಿರಬೇಕಷ್ಟೆ!’ ಎಂದು ಮಂಜುನಾಥ್ ಪಾಪಣ್ಣ ಎಂಬವರು ‘ಕೂ’ ಮಾಡಿದ್ದಾರೆ.

‘ಆನ್ ಲೈನ್ ಜೂಜಿನ ಜಾಹೀರಾತು ಮಾಡುವವರ ಮೇಲೆ ಹೋರಾಟಗಾರರು ಮುರಕೊಂಡು ಬೀಳೋರು, ಅವರ ಉದ್ದೇಶವೂ ಸರಿಯಾಗಿತ್ತು. ಈಗ ಸರ್ಕಾರದ ಈ ನಿರ್ಧಾರ ಭೇಷ್ ಎನ್ನಿಸಿಕೊಳ್ಳುವಂತಿದೆ’ ಎಂದು ಸುನಿಲ್ ಎನ್ನುವರು ಹೇಳಿದ್ದಾರೆ.

‘ಮಹಾಭಾರತಕ್ಕೆ ಕಾರಣವು ಜೂಜು ಎಷ್ಟೋ ಜನರ ಜೀವನ ಹಾಳಾಗುವುದಕ್ಕೆ ಕಾರಣ ಜೂಜು. ಸರ್ಕಾರ ಆನ್ ಲೈನ್ ಜೂಜು ನಿಷೇದ ಮಾಡಿರುವುದು ಒಳ್ಳೆಯ ವಿಚಾರ. ನನ್ನ ಸ್ನೇಹಿತನನ್ನು ಈ ಜೂಜಿನಿಂದ ಕಳೆದುಕೊಂಡಿದ್ದೇನೆ. ಆದ್ದರಿಂದ ಈ ನಿರ್ಧಾರ ತುಂಬಾ ಖುಷಿ ತಂದಿದೆ. ಇದು ಇನ್ನಷ್ಟೇ ತರಹದ ಜೂಜಿನ ಮೇಲೆ ಇದು ಅನ್ವಯವಾಗಲಿ’ ಎಂದು ಕಾರ್ತಿಕ್ ಎನ್ನುವವರು ಆಶಯ ವ್ಯಕ್ತಪಡಿಸಿದ್ದಾರೆ.

‘ಇಂತಹ ಗೇಮ್ ಆಪ್ ಗಳನ್ನು ಭಾರತದಾದ್ಯಂತ ನಿಷೇಧಿಸಬೇಕು ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ವ್ಯವಸ್ಥೆಯನ್ನು ಕುಂಠಿತಗೊಳಿಸುತ್ತವೆ. ಇವು ಲಾಭದ ಉದ್ದೇಶಕ್ಕಾಗಿ ಸ್ಥಾಪನೆಗೊಂಡವು. ಲಕ್ಷಾಂತರ ಜನರಿಂದ ಬೆಟ್ಟಿಂಗ್ ಹಣ ಸೇರಿಸಿ ಅತಿ ಹೆಚ್ಚು ಅಂಕ ಪಡೆದವರಿಗೆ ಶೇಕಡ10 ರಿಂದ 40 ರಷ್ಟು ನೀಡಿ ಇನ್ನುಳಿದ ಶೇ 60 ರಷ್ಟು ಹಣವನ್ನು ಈ ಜೂಜು ಗೇಮಿಂಗ್ ಸಂಸ್ಥೆಗಳು ಬಾಚಿ ಕೊಳ್ಳುತ್ತವೆ. ಇದೊಂದು ವ್ಯಸನಕಾರಿಯೂ ಆಗಿ ಹಣ ಕಳೆದುಕೊಳ್ಳುವುದು ನಿಶ್ಚಿತ’ ಸಂಪತ್ ಕೂ ಮಾಡಿದ್ದಾರೆ.
‘ಕರ್ನಾಟಕದಲ್ಲಿ ತನ್ನ ಕಾರ್ಯಾಚರಣೆಯನ್ನು ಫ್ಯಾಂಟಸಿ ಗೇಮ್ ಸಂಸ್ಥೆ ಡ್ರೀಮ್ 11 ಸ್ಥಗಿತಗೊಳಿಸಿದೆ. ಮುಂಬೈ ಮೂಲದ ಡ್ರೀಮ್‌ 11 ಸಂಸ್ಥೆ ಕರ್ನಾಟಕದಲ್ಲಿ ಜಾರಿಯಾಗಿರುವ ಆನ್‌ಲೈನ್‌ ಜೂಜು ನಿಷೇಧ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಅನ್ನೋ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಡ್ರೀಮ್‌ 11 ಕನ್ನಡಿಗರಿಗೆ ನಿರ್ಬಂಧ ವಿಧಿಸಿದೆ. ಕರ್ನಾಟಕದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರುವ ಬಳಕೆದಾರರು ಡ್ರೀಮ್ 11 ನಲ್ಲಿ ನಗದು ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಮೇಘಶ್ರೀ.

Leave a Reply

error: Content is protected !!