Please assign a menu to the primary menu location under menu

Crime News

ಜೀವವಿಮೆ ಪಡೆಯಲು ನಡೆದಿತ್ತು ಬಹುದೊಡ್ಡ ಸಂಚು….! ಅಮಾಯಕನನ್ನು ಕೊಂದು ವಿಮೆ ಪಡೆಯಲು ಮುಂದಾದವರ ಹೆಡೆಮುರಿ ಕಟ್ಟಿದ ಖಾಕಿ

ಜೀವವಿಮೆ ಪಡೆಯಲು ನಡೆದಿತ್ತು ಬಹುದೊಡ್ಡ ಸಂಚು….! ಅಮಾಯಕನನ್ನು ಕೊಂದು ವಿಮೆ ಪಡೆಯಲು ಮುಂದಾದವರ ಹೆಡೆಮುರಿ ಕಟ್ಟಿದ ಖಾಕಿ

ನಾಗರಹಾವಿನಿಂದ ಕಚ್ಚಿಸಿಕೊಂಡು ವ್ಯಕ್ತಿಯೊಬ್ಬ ಸಾವಿನ ನಾಟಕವಾಡಲು ಯತ್ನಿಸಿದ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ಅಹಮದ್​ ನಗರದಲ್ಲಿ ನಡೆದಿದೆ. 54 ವರ್ಷದ ವ್ಯಕ್ತಿಯು 37.5 ಕೋಟಿ ರೂಪಾಯಿ ಮೌಲ್ಯದ ಜೀವವಿಮೆಯನ್ನು ಪಡೆಯುವ Read more…

ನಾಗರಹಾವಿನಿಂದ ಕಚ್ಚಿಸಿಕೊಂಡು ವ್ಯಕ್ತಿಯೊಬ್ಬ ಸಾವಿನ ನಾಟಕವಾಡಲು ಯತ್ನಿಸಿದ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ಅಹಮದ್​ ನಗರದಲ್ಲಿ ನಡೆದಿದೆ. 54 ವರ್ಷದ ವ್ಯಕ್ತಿಯು 37.5 ಕೋಟಿ ರೂಪಾಯಿ ಮೌಲ್ಯದ ಜೀವವಿಮೆಯನ್ನು ಪಡೆಯುವ ಸಲುವಾಗಿ ನಾಗರ ಹಾವನ್ನು ಸಾವಿನ ಅಸ್ತ್ರವನ್ನಾಗಿ ಬಳಸಲು ಯತ್ನಿಸಿದ್ದ ಎನ್ನಲಾಗಿದೆ.

ಅಮೆರಿಕದ ಜೀವವಿಮಾ ಕಂಪನಿಯೊಂದರಲ್ಲಿ 5 ಮಿಲಿಯನ್​ ಡಾಲರ್​ ಮೌಲ್ಯದ ವಿಮಾ ಪಾಲಿಸಿಯನ್ನು ಹೊಂದಿದ್ದ ಈ ವ್ಯಕ್ತಿ ನಾಗರ ಹಾವನ್ನು ಬಳಸಿ ಸಾವಿನ ನಾಟಕ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಆದರೆ ಜೀವ ವಿಮೆ ಕಂಪನಿಯು ಈ ಬಗ್ಗೆ ಪರಿಶೀಲನೆ ನಡೆಸಲು ತನಿಖಾಧಿಕಾರಿಯನ್ನು ಕಳುಹಿಸಿದ ವೇಳೆ ಸತ್ಯ ಬೆಳಕಿಗೆ ಬಂದಿದೆ.

ತನಿಖಾಧಿಕಾರಿ ವಿಚಾರಣೆ ನಡೆಸಿದ ವೇಳೆಯಲ್ಲಿ ಪ್ರಕರಣದ ಸಂಪೂರ್ಣ ಸತ್ಯಾಂಶ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು 54 ವರ್ಷದ ವ್ಯಕ್ತಿ ಹಾಗೂ ಆತನ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ. ಪ್ರಭಾಕರ್​ ಭೀಮಾಜಿ ವಾಘಚೌರೆ ಎಂಬಾತ ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದು, ಈ ವರ್ಷದ ಜನವರಿಯಲ್ಲಿ ಭಾರತಕ್ಕೆ ವಾಪಸ್ಸಾಗಿದ್ದರು ಎನ್ನಲಾಗಿದೆ.

ಪ್ರಭಾಕರ್​ ಜನವರಿ ತಿಂಗಳಿನಿಂದ ಮಹಾರಾಷ್ಟ್ರದ ಅಹಮದ್​ನಗರದ ರಾಜೂರ್​ ಗ್ರಾಮದಲ್ಲಿ ನೆಲೆಸಿದ್ದರು. ವಾಘಚೋರೆ ನಕಲಿ ಮರಣ ಪ್ರಮಾಣ ಪತ್ರವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಿಂದ ಪೊಲೀಸ್​ ಠಾಣೆ ಅಧಿಕಾರಿಗಳು ಪಡೆದಿದ್ದಾರೆ.

ಪ್ರಭಾಕರ್ ಮೃತದೇಹವನ್ನು ಆತನ ಅಳಿಯ ಹಾಗೂ ಇನ್ನೊಬ್ಬ ವ್ಯಕ್ತಿ ಗುರುತಿಸಿದ್ದರು. ಮರಣ ಪ್ರಮಾಣಪತ್ರದಲ್ಲಿ ನಾಗರ ಹಾವು ಕಚ್ಚಿ ಪ್ರಭಾಕರ್​ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಪ್ರಭಾಕರ್​ದ್ದು ಎನ್ನಲಾದ ಮೃತದೇಹವನ್ನು ಅಳಿಯನಿಗೆ ಹಸ್ತಾಂತರಿಸಲಾಗಿತ್ತು.

ಆದರೆ ಪೊಲೀಸ್​ ತನಿಖೆ ವೇಳೆಯಲ್ಲಿ ಪ್ರಭಾಕರ್​ ಅಳಿಯ ಎನ್ನಲಾದ ಪ್ರವೀಣ್​ ಕೋವಿಡ್​ 19ನಿಂದ ಮೃತಪಟ್ಟಿದ್ದ ಎಂಬ ವರದಿ ಬೆಳಕಿಗೆ ಬಂದ ಬಳಿಕ ಪ್ರಕರಣ ಬಹುದೊಡ್ಡ ತಿರುವು ಪಡೆದಿದೆ. ಆರೋಪಿಯ ಕಾಲ್​ ರೆಕಾರ್ಡ್​ಗಳನ್ನು ಪರಿಶೀಲನೆ ಮಾಡಿದ ವೇಳೆಯಲ್ಲಿ ಆತ ಸತ್ತಿಲ್ಲ ಬದುಕಿದ್ದಾನೆ ಎಂದು ತಿಳಿದುಬಂದಿದೆ. ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಎಸ್​ಪಿ ಮನೋಜ್ ಪಾಟೀಲ್, ಈ ಜೀವವಿಮೆ ಪಡೆಯುವ ಸಲುವಾಗಿ ವಾಘಚೌರೆ ಹಾಗೂ ಆತನ ಸಹಚರರು ಬಹುದೊಡ್ಡ ಸಂಚನ್ನೇ ರೂಪಿಸಿದ್ದರು. ಹಾವು ಆಡಿಸುವವನಿಂದ ವಾಘಚೌರೆ ಹಾವು ಖರೀದಿಸಿದ್ದ. ಬಳಿಕ ವಾಘಚೌರೆಯಂತೆಯೇ ಕಾಣುವಂತ ವ್ಯಕ್ತಿಯೊಬ್ಬನನ್ನು ಹುಡುಕಿದ್ದರು. ಬಳಿಕ ನಾಗರಹಾವನ್ನು ಕಚ್ಚಿಸಿ ಆತನ ಕೊಲೆ ಮಾಡಲಾಯ್ತು. ಬಳಿಕ ವಾಘಚೌರೆಯೇ ಪ್ರವೀಣ್​​​ನಂತೆ ಪೋಸ್​ ಕೊಟ್ಟು ಹಾವು ಕಚ್ಚಿ ಸತ್ತಿದ್ದು ತನ್ನ ಮಾವ ಎಂದು ಹೇಳಿದ್ದರು.

ಹಾವು ಕಚ್ಚಿಸಿಕೊಂಡು ಸಾವನ್ನಪ್ಪಿದ ವ್ಯಕ್ತಿಯನ್ನು ನವನಾಥ್​ ಯಶವಂತ್​​ ಆನಪ್​ ಎಂದು ಗುರುತಿಸಲಾಗಿದೆ. 50 ವರ್ಷದ ವ್ಯಕ್ತಿಯು ಇದೇ ಏರಿಯಾದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಮಾತನಾಡಿದ ಪೊಲೀಸರು, ಪ್ರಕರಣ ಸಂಬಂಧ ವಾಘಚೋರೆ ಹಾಗೂ ಆತನ ನಾಲ್ವರು ಸಹಚರನನ್ನು ಬಂಧಿಸಲಾಗಿದೆ. ತನ್ನ ಸಹಚರರಿಗೆ ವಾಘಚೌರೆ 35 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದ ಎನ್ನಲಾಗಿದೆ.


Leave a Reply

error: Content is protected !!