ಮಂಡ್ಯ: ವಿದ್ಯಾರ್ಥಿನಿಯೊಬ್ಬಳು ಮದುವೆ ದಿನವೇ ಪರೀಕ್ಷೆ ಬರೆದು ಮಾದರಿಯಾಗಿದ್ದಾಳೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಎಸ್.ಟಿ.ಜಿ.ಕಾಲೇಜಿನ ಪದವಿ ಪರೀಕ್ಷೆ ಬರೆದಿದ್ದಾಳೆ.
ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮದ ಐಶ್ವರ್ಯ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಈಕೆಯ ಮದುವೇ ದಿನವೇ ಪ್ರಥಮ ವರ್ಷದ ಪದವಿ ಪರೀಕ್ಷೆ ಕೂಡ ನಿಗದಿಯಾಗಿತ್ತು.
ಹೀಗಾಗಿ, ಮಾಂಗಲ್ಯದಾರಣೆ ಆದ ಮರುಕ್ಷಣವೇ ಬಂದು ಪದವಿ ಪರೀಕ್ಷೆ ಬರೆದಿದ್ದಾಳೆ.ಐಶ್ವರ್ಯ ಪರೀಕ್ಷೆ ಬರೆಯಲು ಪೋಷಕರು ಕಾಲೇಜು ಆಡಳಿತ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.