Please assign a menu to the primary menu location under menu

National

ಗೋವಾ: ನರಕಾಸುರನ ದಹನಕ್ಕೆ ಭರ್ಜರಿ ಸಿದ್ದತೆ

ಗೋವಾ: ನರಕಾಸುರನ ದಹನಕ್ಕೆ ಭರ್ಜರಿ ಸಿದ್ದತೆ

ಪಣಜಿ: ಗೋವಾ ರಾಜ್ಯಾದ್ಯಂತ ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದಂದು ಬೆಳಗಿನ ಜಾವ ನರಕಾಸುರನ ದಹನ ಮಾಡುವ ಪದ್ಧತಿ ರಾಜ್ಯದಲ್ಲಿ ಹಿಂದಿನಿಂದಲೂ ನಡೆದುಬಂದಿದೆ.

ರಾಜ್ಯಾದ್ಯಂತ ಗಲ್ಲಿಗಳಲ್ಲಿ ನರಕಾಸುರನ ಪ್ರತಿಮೆ ಸಿದ್ಧಪಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ವಿವಿದೆಡೆ ನರಕಾಸುವ ಸ್ಫರ್ಧೆಯನ್ನೂ ಆಯೋಜಿಸಲಾಗಿದೆ. ದೀಪಾವಳಿ ಹಬ್ಬದ ಮುನ್ನಾದಿನ ಅಂದರೆ ನರಕ ಚತುರ್ದಶಿಯಂದು ರಾತ್ರಿಯಿಡೀ ರಾಜ್ಯಾದ್ಯಂತ ನರಕಾಸುರನ ಪ್ರದರ್ಶನ ನಡೆಯಲಿದ್ದು, ಮರುದಿನ ಅಂದರೆ ಹಬ್ಬದ ದಿನ ಬೆಳಗಿನ ಜಾವ ನರಕಾಸುರನ ದಹನ ಮಾಡಿ ಅಭ್ಯಂಗ ಸ್ನಾನ ಮಾಡಿ ಹಬ್ಬದ ಆಚರಣೆ ನಡೆಸುವ ಪದ್ಧತಿ ನಡೆದುಬಂದಿದೆ.

ರಾಜ್ಯಾದ್ಯಂತ ನರಕಾಸುರ ಪ್ರತಿಮೆ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, ನರಕಾಸುರನ ದಹನಕ್ಕೆ ಇನ್ನು ಎರಡೇ ದಿನ ಬಾಕಿ ಉಳಿದಿದೆ.


Leave a Reply

error: Content is protected !!