Please assign a menu to the primary menu location under menu

international

ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ ಕಂಡು ಬೆಚ್ಚಿಬಿದ್ದ ವೈದ್ಯ

ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ ಕಂಡು ಬೆಚ್ಚಿಬಿದ್ದ ವೈದ್ಯ

ಮಹಿಳೆಯೊಬ್ಬರ ಕಿವಿಯಲ್ಲಿ ಆಗಿದ್ದ ಬ್ಲಾಕೇಜ್‌ಗೆ ಜೀವಂತ ಜೇಡವೊಂದು ಕಾರಣ ಎಂದು ತಿಳಿದ ವೈದ್ಯರು ಶಾಕ್ ಆಗಿದ್ದಾರೆ. ಚೀನಾದ ದಕ್ಷಿಣದಲ್ಲಿರುವ ಹುನಾನ್ ಪ್ರಾಂತ್ಯದ ಜ಼ೂಜ಼ೂ ಎಂಬ ಪ್ರದೇಶದ ಯೀ ಹೆಸರಿನ Read more…

ಮಹಿಳೆಯೊಬ್ಬರ ಕಿವಿಯಲ್ಲಿ ಆಗಿದ್ದ ಬ್ಲಾಕೇಜ್‌ಗೆ ಜೀವಂತ ಜೇಡವೊಂದು ಕಾರಣ ಎಂದು ತಿಳಿದ ವೈದ್ಯರು ಶಾಕ್ ಆಗಿದ್ದಾರೆ.

ಚೀನಾದ ದಕ್ಷಿಣದಲ್ಲಿರುವ ಹುನಾನ್ ಪ್ರಾಂತ್ಯದ ಜ಼ೂಜ಼ೂ ಎಂಬ ಪ್ರದೇಶದ ಯೀ ಹೆಸರಿನ ಮಹಿಳೆಯೊಬ್ಬರು ತಮ್ಮ ಕಿವಿಯಲ್ಲಿ ವಿಚಿತ್ರ ಶಬ್ದದೊಂದಿಗೆ ಭಾರೀ ಕಿರಿಕಿರಿ ಅನುಭವವಾದ ಕಾರಣ ಕಡಿತ ಹೆಚ್ಚಾಗಿ ವೈದ್ಯರ ಬಳಿ ತೆರಳಿದ್ದಾರೆ.

ಮಹಿಳೆಯ ಕಿವಿ ಪರೀಕ್ಷಿಸಿದ ವೈದ್ಯರಿಗೆ ಆಕೆಯ ಕಿವಿಯ ಟಿಂಪೇನಿಕ್ ಮೆಂಬ್ರೇನ್‌ನಲ್ಲಿ ಜೇಡವೊಂದು ಹೊರಳಾಡುತ್ತಿರುವುದು ಕಂಡು ಬಂದಿದೆ. ಆಕೆಯ ಕಿವಿಯೊಳಗೆ ಮೈಕ್ರೋ ಕ್ಯಾಮೆರಾವೊಂದನ್ನು ಹಾಕಿದಾಗ ಆ ಜೇಡವು ಕ್ಯಾಮೆರಾ ಲೆನ್ಸ್‌ನತ್ತ ಬಂದು ಇನ್ನಷ್ಟು ದೊಡ್ಡದಾಗಿ ಕಂಡಿದೆ.

ಮಹಿಳೆಯ ಕಿವಿಯಲ್ಲಿ ಒಂದು ರಾತ್ರಿ ಕಳೆದ ಜೇಡವನ್ನು ಎಲೆಕ್ಟ್ರಿಕ್  ಓಟೋಸ್ಕೋಪ್ ಬಳಸಿಕೊಂಡು ಹೊರತೆಗೆಯಲು ವೈದ್ಯರು ಸಫಲರಾಗಿದ್ದಾರೆ.


Leave a Reply

error: Content is protected !!