Please assign a menu to the primary menu location under menu

National

BIG NEWS: ಸ್ಥೂಲಕಾಯ ಚಿಕಿತ್ಸೆಗೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ‘ರೋಬೋಟ್’​ ತಂತ್ರಜ್ಞಾನ ಬಳಕೆ

BIG NEWS: ಸ್ಥೂಲಕಾಯ ಚಿಕಿತ್ಸೆಗೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ‘ರೋಬೋಟ್’​ ತಂತ್ರಜ್ಞಾನ ಬಳಕೆ

ಆಸ್ಪತ್ರೆಗಳಲ್ಲಿ ಆಪರೇಷನ್​ ಮಾಡೋದು ಅಂದರೆ ಅದಕ್ಕೆ ಅದರದ್ದೇ ಆದ ಕೊಠಡಿ ಹಾಗೂ ನುರಿತ ವೈದ್ಯರು ಮತ್ತು ಸಲಕರಣೆಗಳ ಅವಶ್ಯಕತೆ ಇರುತ್ತದೆ. ಆದರೆ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅತ್ಯಂತ ವಿಶಿಷ್ಠ Read more…

ಆಸ್ಪತ್ರೆಗಳಲ್ಲಿ ಆಪರೇಷನ್​ ಮಾಡೋದು ಅಂದರೆ ಅದಕ್ಕೆ ಅದರದ್ದೇ ಆದ ಕೊಠಡಿ ಹಾಗೂ ನುರಿತ ವೈದ್ಯರು ಮತ್ತು ಸಲಕರಣೆಗಳ ಅವಶ್ಯಕತೆ ಇರುತ್ತದೆ. ಆದರೆ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅತ್ಯಂತ ವಿಶಿಷ್ಠ ಮಾದರಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ಪೂರೈಸಲಾಗಿದೆ.

ಇಬ್ಬರು ಸ್ಥೂಲಕಾಯದ ರೋಗಿಗಳಿಗೆ ರೋಬೋಟ್​ ಮಾರ್ಗದರ್ಶನದಂತೆ ಕೆಲಸ ಮಾಡುವ ವಿಶಿಷ್ಟ ಸಾಧನವನ್ನು ಬಳಸಿ ತೂಕ ಇಳಿಕೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನೊಂದು ವಿಶೇಷ ಅಂದರೆ ಈ ಶಸ್ತ್ರಚಿಕಿತ್ಸೆಯನ್ನು ಲೈವ್​​ ಆಗಿ ನಡೆಸಲಾಗಿದೆ..!

ಅಂದಹಾಗೆ ಇದು ಭಾರತದ ಮೊಟ್ಟ ಮೊದಲ ತೂಕ ಇಳಿಕೆಯ ಲೈವ್​​ ರೋಬೋಟ್​ ಮಾರ್ಗದರ್ಶನದ ಬ್ಯಾರಿಯಾಟ್ರಿಕ್​​ ಸರ್ಜರಿಯಾಗಿದೆ ಎಂದು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಸ್ಥೂಲಕಾಯ ವಿರೋಧಿ ಅಭಿಯಾನದ ಭಾಗವಾಗಿ ಸ್ಲೀವ್​ ಗ್ಯಾಸ್ಟ್ರೆಕ್ಟಮಿಯ ರೋಬೋಟಿಕ್​ ಬ್ಯಾರಿಯಾಟ್ರಿಕ್​ ಸರ್ಜರಿಯ ವೇಳೆಯಲ್ಲಿ ಈ ತಂತ್ರಜ್ಞಾನದ ಬಳಕೆಯನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

224 ಕೆಜಿ ತೂಕ ಹೊಂದಿದ್ದ 30 ವರ್ಷದ ಪುರುಷ ಹಾಗೂ 133.4 ಕೆಜಿ ತೂಕ ಹೊಂದಿದ್ದ 37 ವರ್ಷದ ಮಹಿಳೆ ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅತಿಯಾದ ತೂಕದಿಂದಾಗಿ ಇವರಿಬ್ಬರು ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಮಧುಮೇಹ, ಕೀಲು ನೋವಿನಂತಹ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಈ ಲೈವ್​ ಸರ್ಜರಿಯಲ್ಲಿ ಬ್ರಿಟನ್​, ಜರ್ಮನಿ, ಫ್ರಾನ್ಸ್​, ಸ್ಪೇನ್​, ಇಟಲಿ, ಅಮೆರಿಕ, ಮೆಕ್ಸಿಕೋ, ಟರ್ಕಿ ಹಾಗೂ ರಷ್ಯಾದ ವಿವಿಧ ಉನ್ನತ ಸರ್ಜನ್​ಗಳು ಭಾಗಿಯಾಗಿದ್ದರು.


Leave a Reply

error: Content is protected !!