Please assign a menu to the primary menu location under menu

State

60ರ ವಯಸ್ಸಿನಲ್ಲಿ ಸರಕಾರ ನಮ್ಮನ್ನು ಗುರುತಿಸಿತಲ್ಲ: ಪ್ರಾಣೇಶ್ ಸಂತಸ

60ರ ವಯಸ್ಸಿನಲ್ಲಿ ಸರಕಾರ ನಮ್ಮನ್ನು ಗುರುತಿಸಿತಲ್ಲ: ಪ್ರಾಣೇಶ್ ಸಂತಸ

ಕೊಪ್ಪಳ: ಹಾಸ್ಯಕ್ಕೆ ಹೆಸರಾದ ಗಂಗಾವತಿ ಪ್ರಾಣೇಶ್ ಅವರಿಗೆ ರಾಜ್ಯ ಸರಕಾರ 2020-21ನೇ ಸಾಲಿನ ಸಂಕೀರ್ಣ ಕ್ಷೇತ್ರದಡಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸೇವೆಗೆ ಸರಕಾರ ಮನ್ನಣೆ ನೀಡಿದ್ದಕ್ಕೆ ಹಾಸ್ಯ ದಿಗ್ಗಜ ಪ್ರಾಣೇಶ ಅವರು 60ರ ವಯಸ್ಸಿನಲ್ಲಿ ಸರಕಾರ ನಮ್ಮನ್ನು ಗುರುತಿಸಿತಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಾಣೇಶ್ ಅವರು ಮೂಲತಃ ಗಂಗಾವತಿ ನಿವಾಸಿ. ಬಿ.ವೆಂಕೋಬಾಚಾರ, ಸತ್ಯವತಿಬಾಯಿ ಅವರ ದಂಪತಿಯ ಮಗನಾಗಿ 08-09-1961ರಲ್ಲಿ ಜನಿಸಿದರು. ಯಲಬುರ್ಗಾ, ಗಂಗಾವತಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಮಾತೋಶ್ರಿಯವರಿಂದ ಸಾಹಿತ್ಯಾಭಿರುಚಿ ಬೆಳೆಸಿಕೊಂಡ ಇವರು 1982ರಲ್ಲಿ ತಮ್ಮ ಸಾಹಿತ್ಯ ಸೇವೆ ಆರಂಭಿಸಿ, 1994ರಿಂದ ಹಾಸ್ಯ ಸಂಜೆಯ ಮೂಲಕ ಎಲ್ಲರ ಗಮನ ಸೆಳೆದಿದರು.

ಉತ್ತರ ಕರ್ನಾಟಕ ಶೈಲಿಯ ಭಾಷಣ, ಹಾಸ್ಯ ಮಾಡುವ ಮೂಲಕ ಕಲಬುರಗಿ ಆಕಾಶವಾಣಿಯಿಂದ ಆರಂಭವಾದ ಇವರ ’ಹಾಸ್ಯ ಸಂಜೆ’ ವಿವಿಧ ಚಾನಲ್‌ಗಳಲ್ಲೂ ವಿಸ್ತರಿಸಿತು. ”ವೀಕೆಂಡ್ ವಿತ್ ರಮೇಶ್” ವಿಶೇಷ ಸಾಧಕರ ಕಾರ್ಯಕ್ರಮದಲ್ಲೂ ಕೋಟ್ಯಂತರ ಜನರು ಇವರ ಜೀವನಸಾಧನೆ ವೀಕ್ಷಿಸಿದ್ದಾರೆ.

450 ಕ್ಕೂಊರುಸುತ್ತಾಟ,3ಸಾವಿರಕ್ಕೂ ಹೆಚ್ಚುಕಾರ್ಯಕ್ರಮ, ಹೊರನಾಡು,11ಕ್ಕೂ ಹೆಚ್ಚು ದೇಶಗಳನ್ನು ಸುತ್ತಾಡಿ ಹಾಸ್ಯ ಕಾರ್ಯಕ್ರಮ ಕೊಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಇವರಿಗೆ ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಸನ್ಮಾನಿಸಿವೆ. ೩೦ಕ್ಕೂ ಹೆಚ್ಚು ನಾಗರಿಕ ಪ್ರಶಸ್ತಿ ಲಭಿಸಿವೆ. ಹಾಸ್ಯದ ಜೊತೆಗೆ ೭ ಪುಸ್ತಕಗಳನ್ನು ಹೊರ ತಂದಿರುವ ಪ್ರಾಣೇಶ ಅವರು ೨೫ಕ್ಕೂ ಹೆಚ್ಚು ಸಿಡಿಗಳನ್ನು ಹೊರ ಬಂದಿವೆ.

ಮುಸ್ಸಂಜೆ ಮಾತು ಸಿನಿಮಾದಲ್ಲೂ ನಟಿಸಿ ಎಲ್ಲರ ಮನೆ ಮಾತಾಗಿದ್ದಾರೆ. ದುಬೈ, ಅಬುದಾಬಿ, ಖತಾರ್, ಆಸ್ಟ್ರೇಲಿಯಾ, ಸಿಡ್ನಿ, ಮೆಲ್ಬೋರ್ನ್, ಸಿಂಗಪೂರ್, ಹಾಂಕಾಂಗ್, ಲಂಡನ್ 11 ದೇಶಗಳಲ್ಲಿ ಸುತ್ತಾಡಿ ಹಾಸ್ಯ ಕಾರ್ಯಕ್ರಮ ನಡೆಸಿ ಎಲ್ಲರ ಮೊಗದಲ್ಲಿ ನಗೆಯನ್ನ ಮೂಡಿಸಿದ್ದಾರೆ. ಅಮೆರಿಕಾದ ಅಕ್ಕ ಸಂಸ್ಥೆಯಡಿ 11 ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ವಿಶ್ವದ ಗಮನ ಸೆಳೆದವರು.

”ಸರಕಾರ ನಮ್ಮ ಸೇವೆಗೆ ಕೊನೆಗೆ 60 ರ ವಯಸ್ಸಿನಲ್ಲಾದರೂ ಗುರುತಿಸಿದೆಯಲ್ಲ ಎನ್ನುವ ಸಂತೋಷವಿದೆ. ಸರ್ಕಾರವು ನಮ್ಮನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ತುಂಬ ಖುಷಿ ತಂದಿದೆ” ಎಂದು ತಮ್ಮ ಮನದಾಳದ ಮಾತನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.


Leave a Reply

error: Content is protected !!