Please assign a menu to the primary menu location under menu

National

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ನವದೆಹಲಿ: ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಿಕ್ಕ ಅತ್ಯಂತ ಯಶಸ್ವಿ ಆಡಳಿತಗಾರರೆಂದರೆ ಪ್ರಧಾನಿ ನರೇಂದ್ರ ಮೋದಿ. ಹೀಗೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ನವದೆಹಲಿಯಲ್ಲಿ ಪ್ರಧಾನಿಯವರ 20 ವರ್ಷದ ರಾಜಕೀಯ ಜೀವನದ ಕುರಿತಾಗಿ ಏರ್ಪಡಿಸಲಾಗಿದ್ದ ಸಮ್ಮೇಳನವೊಂದರಲ್ಲಿ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ.

“2014ರಲ್ಲಿ ಮನಮೋಹನ್‌ ಸಿಂಗ್‌ ಅವರ ಸರ್ಕಾರವಿದ್ದಾಗ ನೀತಿ ಗ್ರಹಣದ ಸಮಸ್ಯೆ ಇತ್ತು. ಸಂಸತ್ತಿನ ಪ್ರತಿಯೊಬ್ಬರೂ ತಮ್ಮನ್ನು ತಾವೇ ಪ್ರಧಾನಿಯೆಂದುಕೊಂಡಿದ್ದರು.

ರಾಷ್ಟ್ರೀಯ ಸುರಕ್ಷಾ ನೀತಿಯೂ ಇರಲಿಲ್ಲ. ಮೋದಿಯವರು ಪ್ರಧಾನಿಯಾದ ನಂತರ ದೇಶಕ್ಕೆ ಗೌರವ ಸಿಕ್ಕಿದೆ. ಬಡತನ ನಿರ್ಮೂಲನೆ, ಆರ್ಥಿಕ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನಿಯಮಗಳ ವಿಚಾರದಲ್ಲಿ ಭಾರತವನ್ನು ವಿಭಿನ್ನ ಪಥಕ್ಕೆ ಮೋದಿಯವರು ಕೊಂಡೊಯ್ದಿದ್ದಾರೆ’ ಎಂದು ಅಮಿತ್‌ ಶಾ ನುಡಿದಿದ್ದಾರೆ.


Leave a Reply

error: Content is protected !!