Please assign a menu to the primary menu location under menu

international

ಪ್ರತಿ ದಿನ ಕನಿಷ್ಠ 7 ಗಂಟೆ ನಿದ್ರೆ ಮಾಡದೇ ಇದ್ರೆ ಕಾಡತ್ತೆ ಈ ಸಮಸ್ಯೆ

ಪ್ರತಿ ದಿನ ಕನಿಷ್ಠ 7 ಗಂಟೆ ನಿದ್ರೆ ಮಾಡದೇ ಇದ್ರೆ ಕಾಡತ್ತೆ ಈ ಸಮಸ್ಯೆ

ಸಮತೋಲಿತ ಆರೋಗ್ಯಕ್ಕಾಗಿ ನಿದ್ರೆಯ ಅಗತ್ಯವೇನೆಂದು ನಾವೀಗಾಗಲೇ ಬಹಳಷ್ಟು ಬಾರಿ ಓದಿ ತಿಳಿದಿರುತ್ತೇವೆ. ದೇಹದ ತೂಕ ಕಾಪಾಡಿಕೊಳ್ಳಲು ಕಠಿಣ ಪಥ್ಯಗಳನ್ನು ಪಾಲಿಸುವ ನಾವು ನಿದ್ರೆಯ ಬಗ್ಗೆ ಅಷ್ಟಾಗಿ ಗಮನ ನೀಡುವುದಿಲ್ಲ. Read more…

ಸಮತೋಲಿತ ಆರೋಗ್ಯಕ್ಕಾಗಿ ನಿದ್ರೆಯ ಅಗತ್ಯವೇನೆಂದು ನಾವೀಗಾಗಲೇ ಬಹಳಷ್ಟು ಬಾರಿ ಓದಿ ತಿಳಿದಿರುತ್ತೇವೆ.

ದೇಹದ ತೂಕ ಕಾಪಾಡಿಕೊಳ್ಳಲು ಕಠಿಣ ಪಥ್ಯಗಳನ್ನು ಪಾಲಿಸುವ ನಾವು ನಿದ್ರೆಯ ಬಗ್ಗೆ ಅಷ್ಟಾಗಿ ಗಮನ ನೀಡುವುದಿಲ್ಲ.

ದಿನವೊಂದರಲ್ಲಿ ಕನಿಷ್ಠ 7 ಗಂಟೆಗಳ ಕಾಲ ನಿದ್ರೆ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಉತ್ತಮವಾಗಿ, ಸಣ್ಣ ಪುಟ್ಟ ಜ್ವರ, ಕೆಮ್ಮುಗಳನ್ನು ಬಾರದಂತೆ ನೋಡಿಕೊಳ್ಳಬಹುದಾಗಿದೆ. ಜೊತೆಗೆ ಕೋವಿಡ್‌ನಿಂದಲೂ ನಮ್ಮನ್ನು ಕಾಪಾಡಿಕೊಳ್ಳಲು ನಿದ್ರೆಯ ಅಗತ್ಯವಿದೆ ಎಂದು ತಜ್ಞರು ತಿಳಿಸುತ್ತಾರೆ.

ಬ್ರಿಟನ್‌‌ನ ಸ್ಲೀಪ್ ಫೌಂಡೇಶನ್‌ನ ಅಧ್ಯಯನದ ಪ್ರಕಾರ ಮೇಲ್ಕಂಡ ವಿವರಗಳು ಕಂಡು ಬಂದಿವೆ.

“ದಿನವೊಂದರಲ್ಲಿ ಮೆದುಳು ನಂಜಿನ ಉತ್ಪಾದನೆ ಮಾಡಲಿದ್ದು, ಇವುಗಳು ಹೆಚ್ಚಾಗಿ ಸಂಗ್ರಹವಾದರೆ ಡೆಮೆಂಟಿಯಾ ಹಾಗೂ ಅಲ್ಜೀಮರ್‌ನಂಥ ನರಸಂಬಂಧಿ ರೋಗಗಳು ಬರುವ ಸಾಧ್ಯತೆ ಇರುತ್ತದೆ. ನಾವು ಸರಿಯಾಗಿ ನಿದ್ರಿಸಿದರೆ ಮೆದುಳು ಇಂಥ ನಂಜಿನ ಉತ್ಪಾದನೆ ಮಾಡುವುದಿಲ್ಲ. ಹಾಗೆ ಮಾಡಿದಲ್ಲಿ ಮೆದುಳಿನಿಂದ ಸೃಷ್ಟಿಯಾಗುವ ಸೆರೆಬ್ರಲ್ ದ್ರವವು ಮೆದುಳಿನಲ್ಲಿ ಸಂಗ್ರಹವಾಗಿರುವ ನಂಜನ್ನು ತೆಗೆದುಹಾಕುತ್ತದೆ,” ಎಂದು ದಿ ಟೆಲಿಗ್ರಾಫ್‌ಗೆ ಕೊಟ್ಟ ಹೇಳಿಕೆಯೊಂದರಲ್ಲಿ ’ಸ್ಲೀಫ್ ಫಾರ್‌ ಸಕ್ಸಸ್’ ಕೃತಿಯ ಸಹ ಬರಹಗಾರ್ತಿ ಡಾ. ರೆಬೆಕ್ಕಾ ರಾಬಿನ್ಸ್ ತಿಳಿಸಿದ್ದಾರೆ.

ನಿದ್ರೆಯಲ್ಲಿ ಕೇವಲ ಒಂದು ಗಂಟೆ ವ್ಯತ್ಯಾಸವಾದರೂ ನಮ್ಮ ದೇಹದ ಆಂತರಿಕ ಗಡಿಯಾರದ ಕಾರ್ಯವೈಖರಿ ಹಾಳಾಗುತ್ತದೆ ಎಂದು ತಿಳಿಸಿರುವ ರಾಬಿನ್ಸ್‌, ಬ್ರಿಟನ್‌ನ ಹಾಸಿಗೆ ತಯಾರಕರಾದ ಸೇವಿಯರ್‌ನ ಸಲಹೆಗಾರ್ತಿಯೂ ಹೌದು.

ನಿದ್ರೆಯಲ್ಲಿ ಒಂದೇ ಒಂದು ಗಂಟೆ ವ್ಯತ್ಯಾಸವಾದರೂ ಸಹ ದೇಹವನ್ನು ಹೊಸ ವಲಯಕ್ಕೆ ಕೊಂಡೊಯ್ಯುವ ಸಂಬಂಧ ಸೂಚನೆಗಳನ್ನು ಮೆದುಳು ನೀಡುವ ಕಾರಣ ಈ ವ್ಯತ್ಯಾಸ ಆಗಲಿದೆ ಎನ್ನುತ್ತಾರೆ ರಾಬಿನ್ಸ್‌.


Leave a Reply

error: Content is protected !!