Please assign a menu to the primary menu location under menu

State

ಮತಾಂತರಗೊಂಡಿದ್ದರೆ ಬಹಿರಂಗಪಡಿಸಿ; ಸಂಖ್ಯೆ ಹೆಚ್ಚಿಸುವ ಇಂತಹ ವಿಧಾನ ಒಪ್ಪಲು ಸಾಧ್ಯವಿಲ್ಲ ಎಂದ ಆರ್.ಎಸ್.ಎಸ್

ಮತಾಂತರಗೊಂಡಿದ್ದರೆ ಬಹಿರಂಗಪಡಿಸಿ; ಸಂಖ್ಯೆ ಹೆಚ್ಚಿಸುವ ಇಂತಹ ವಿಧಾನ ಒಪ್ಪಲು ಸಾಧ್ಯವಿಲ್ಲ ಎಂದ ಆರ್.ಎಸ್.ಎಸ್

ಧಾರವಾಡ: ಧಾರ್ಮಿಕ ಮತಾಂತರ ನಿಲ್ಲಿಸಬೇಕು. ಒಂದು ವೇಳೆ ಮತಾಂತರಗೊಂಡಿದ್ದರೆ ಅದನ್ನು ಬಹಿರಂಗಪಡಿಸಿ ಎರಡೆರಡು ಲಾಭ ಪಡೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಆರ್.ಎಸ್.ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಹೊಸಬಾಳೆ ತಿಳಿಸಿದ್ದಾರೆ.

ಮೂರು ದಿನಗಳ ಆರ್.ಎಸ್.ಎಸ್ ಅಖಿಲ ಭಾರತೀಯ ಕಾರ್ಯಕರ್ತರ ಮಂಡಲ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಮತಾಂತರ ವಿರೋಧಿ ಕಾನೂನುಗಳನ್ನು ವಿರೋಧಿಸುವುದು ತೆರೆದ ರಹಸ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಅರುಣಾಚಲಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಮತಾಂತರ ವಿರೋಧಿ ಮಸೂದೆ ಅಂಗೀಕರಿಸಿದೆ. ಪ್ರಸ್ತುತ ಬಿಜೆಪಿ ಆಡಳಿತದ ಮೊದಲು ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಸಿಎಂ ವಿದರ್ಭ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡ ಮಸೂದೆ ಅಂಗಿಕರಿಸಿತ್ತು ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧರ್ಮ ಬದಲಿಸುವ ಸ್ವಾತಂತ್ರ್ಯವಿದೆ ಆದರೆ ಇಂದು ಬಲವಂತದ ಮತಾಂತರಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಯಾವುದೇ ವಿಧಾನಗಳಿಂದ ಸಂಕ್ಖ್ಯೆ ಹೆಚ್ಚಿಸಿಕೊಳ್ಳುವುದು ಮೋಸದ ವಿಚಾರವಾಗಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಉತ್ತರಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಮತಾಂತರ ವಿರೋಧಿಕಾನೂನುಗಳನ್ನು ಜಾರಿಗೆ ತಂದಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರ ಇದೇ ರೀತಿಯ ಮಸೂದೆಯನ್ನು ಪರಿಚಯಿಸಲು ಮುಂದಾಗಿದೆ. ಆದರೆ ಬೆಂಗಳೂರು ಆರ್ಚ್ ಬಿಷಪ್ ಅವರು ಈ ಮಸೂದೆ ಅನಗತ್ಯ ಎಂದು ಹೇಳಿದ್ದಾರೆ. ಇದು ರಾಜ್ಯದಲ್ಲಿ ಸಾಮರಸ್ಯ ಹಾಳುಮಾಡುತ್ತಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.


Leave a Reply

error: Content is protected !!