Please assign a menu to the primary menu location under menu

Sports

ಟಿ20 ವಿಶ್ವಕಪ್ ನಮಗೆ ಒಳ್ಳೆಯ ಪಾಠ ಕಳಿಸಿತು : ಕೆ.ಎಲ್ ರಾಹುಲ್


ನಮೀಬಿಯಾ ವಿರುದ್ಧ ಗೆಲ್ಲುವ ಮೂಲಕ ತನ್ನ ಅಂತಿಮ ಪಂದ್ಯವನ್ನು ಮುಗಿಸಿ ಭಾರತ ತಂಡವು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.

ಈ ಬಾರಿಯ ವಿಶ್ವಕಪ್ ಪಂದ್ಯದ ಬಗ್ಗೆ ಮಾತನಾಡಿರುವ ಕ್ರಿಕೆಟಿಗ ಕೆ.ಎಲ್ ರಾಹುಲ್ ಇಲ್ಲಿ ನಾವು ಸಾಕಷ್ಟು ಕಲಿತಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಕೂ ಮಾಡಿರುವ ಕ್ರಿಕೆಟಿಗ ಕೆ. ಎಲ್ . ರಾಹುಲ್ ‘ನಮಗೆ ಇದೊಂದು ಆದರ್ಶವಾದ ವಿಶ್ವಕಪ್‌ ಆಗಿರಲಿಲ್ಲ, ಆದರೆ ನಾವು ಕಲಿತೆವು ಮತ್ತು ಬೆಳೆದೆವು. ಪ್ರೀತಿ ಮತ್ತು ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನಾವು ಕ್ರಿಕೆಟ್ ಪಟುಗಳಾಗಿ ಬೆಳೆಯಲು ಸಹಾಯ ಮಾಡಿದ ನಮ್ಮ ಕೋಚ್‌ಗಳಿಗೆ ಕೃತಜ್ಞತೆಗಳು. ತಂಡವನ್ನು ಮುನ್ನಡೆಸಿದ ಮತ್ತು ನಮಗೆ ಎಲ್ಲ ರೀತಿಯ ಬೆಂಬಲ ನೀಡಿದ @virat.kohli ಅವರಿಗೆ ನಮ್ಮ ಅನಂತ ಕೃತಜ್ಞತೆಗಳು. 🇮🇳🙏’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


Leave a Reply

error: Content is protected !!