Please assign a menu to the primary menu location under menu

National

ಇನ್ಸ್ಟಾ ಪೋಸ್ಟ್ ನಲ್ಲಿ ಸಾವಿನ ಮುನ್ಸೂಚನೆ​..? ಹೊರಡುವ ಸಮಯ ಬಂದಿದೆ ಎಂದವರು ಬಾರದ ಲೋಕಕ್ಕೆ…!

ಇನ್ಸ್ಟಾ ಪೋಸ್ಟ್ ನಲ್ಲಿ ಸಾವಿನ ಮುನ್ಸೂಚನೆ​..? ಹೊರಡುವ ಸಮಯ ಬಂದಿದೆ ಎಂದವರು ಬಾರದ ಲೋಕಕ್ಕೆ…!

2019ರಲ್ಲಿ ಮಿಸ್​ ಕೇರಳ ಕಿರೀಟ ಮುಡಿಗೇರಿಸಿಕೊಂಡಿದ್ದ 25 ವರ್ಷದ ಅನ್ಸಿ ಕಬೀರ್ ಕೊಚ್ಚಿಯಲ್ಲಿ ಸಂಭವಿಸಿದ​ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಜೊತೆಯಲ್ಲಿ ಇದೇ ಸ್ಪರ್ಧೆಯಲ್ಲಿ ರನ್ನರ್​ ಅಪ್​ ಸ್ಥಾನ ಪಡೆದಿದ್ದ 26 ವರ್ಷದ ಅಂಜನಾ ಶಾಜಾನ್​​ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ದುರಂತ ಸಂಭವಿಸಿದೆ.

ಸೋಮವಾರ ಮಧ್ಯರಾತ್ರಿ ವೇಳೆ ಕಾರು ನಿಯಂತ್ರಣ ತಪ್ಪಿದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ. ಇವರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಇನ್ನೊಂದು ವಿಚಿತ್ರ ವಿಚಾರ ಅಂದರೆ ಇದೇ ಅನ್ಸಿ ಕಬೀರ್​ ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಬಿಳಿ ಬಣ್ಣದ ವಸ್ತ್ರದಲ್ಲಿ ಹಸಿರು ರಾಶಿಯ ಮಧ್ಯೆ ನಿಂತ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದರು. ಈ ಫೋಟೋಗೆ ‘ಹೋಗುವ ಸಮಯ ಬಂದಿದೆ’(ಇಟ್ಸ್​ ಟೈಂ ಟು ಗೋ) ಎಂದು ಬರೆದುಕೊಂಡಿದ್ದರು. ಇದೀಗ ಅನ್ಸಿ ಬಾರದ ಲೋಕಕ್ಕೆ ತೆರಳಿದ್ದಾರೆ..!




Leave a Reply

error: Content is protected !!