Please assign a menu to the primary menu location under menu

State

ಶಿವಮೊಗ್ಗ ಜನತೆಯ ಜೊತೆ ಹೀಗಿತ್ತು ‘ಪವರ್​ ಸ್ಟಾರ್​’ ಸಂಬಂಧ

ಶಿವಮೊಗ್ಗ ಜನತೆಯ ಜೊತೆ ಹೀಗಿತ್ತು ‘ಪವರ್​ ಸ್ಟಾರ್​’ ಸಂಬಂಧ

ಕಳೆದ ತಿಂಗಳಷ್ಟೇ ಶಿವಮೊಗ್ಗಕ್ಕೆ ಶೂಟಿಂಗ್​​​ಗೆ ಆಗಮಿಸಿದ್ದ ಪುನೀತ್​​ ರಾಜ್​​ಕುಮಾರ್​​ ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಡ್ಯಾಕುಮೆಂಟರಿ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದರು. ಸಕ್ರೆಬೈಲು ಆನೆ ಬಿಡಾರದ ಕ್ರಾಲ್​​ನಲ್ಲಿ ಶೂಟಿಂಗ್​ ನಡೆದಿತ್ತು.

ಶೂಟಿಂಗ್​ ಮಧ್ಯದಲ್ಲೇ ಬಿಡುವು ಮಾಡಿಕೊಂಡಿದ್ದ ಪವರ್​ ಸ್ಟಾರ್​ ಪುನೀತ್​ ಅಭಿಮಾನಿಗಳೊಂದಿಗೆ ಕೆಲ ಕಾಲ ಕಳೆದಿದ್ದರು. ಅಪ್ಪು ಸಕ್ರೆಬೈಲಿಗೆ ಆಗಮಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ದಾಂಗುಡಿ ಇಟ್ಟಿದ್ದ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದಿದ್ದರು.

ಸಂಜೆ ವೇಳೆಗೆ ಶೂಟಿಂಗ್​ ಮುಗಿಸಿದ್ದ ಪುನೀತ್​ ತುಂಗಾ ಜಲಾಶಯ ವೀಕ್ಷಣೆಗೆ ತೆರಳಿದ್ದರು. ಪುನೀತ್​​ ರಾಜ್​ಕುಮಾರ್​​ರ ಅನೇಕ ಸಿನಿಮಾಗಳ ಶೂಟಿಂಗ್​​​ ಶಿವಮೊಗ್ಗ ಜಿಲ್ಲೆಯಲ್ಲೇ ನಡೆದಿದ್ದವು. ಶಿವಮೊಗ್ಗ ಜಿಲ್ಲೆಯಲ್ಲಿ ಸಂಬಂಧಿಗಳನ್ನೂ ಹೊಂದಿದ್ದ ಪುನೀತ್​​ ರಾಜ್​ಕುಮಾರ್​ ಅದರ ಜೊತೆಯಲ್ಲಿ ಈ ಭಾಗದ ಜನತೆಯೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.

ನಟ ಪುನೀತ್​ ರಾಜ್​ಕುಮಾರ್​​ ಅಂತ್ಯಕ್ರಿಯೆ ಕುರಿತಂತೆ ಇನ್ನೂ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಅಮೆರಿಕದಿಂದ ಮಗಳ ಆಗಮನಕ್ಕಾಗಿ ಕುಟುಂಬ ಕಾಯುತ್ತಿದೆ. ಸಧ್ಯಕ್ಕಿರುವ ಮಾಹಿತಿಯ ಪ್ರಕಾರ ಫಾರ್ಮ್​ ಹೌಸ್​ನಲ್ಲಿ ಅಪ್ಪು ಅಂತ್ಯಕ್ರಿಯೆ ನಡೆಸಲು ಚರ್ಚೆ ನಡೆದಿದದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕುಟುಂಬಸ್ಥರಿಂದ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ.


Leave a Reply

error: Content is protected !!