
ನೆಲಮಂಗಲ: ಬಿಹಾರ ಮೂಲದ 16 ವರ್ಷದ ಬಾಲಕಿ ತನ್ನ ಸ್ನೇಹಿತೆಯ ಮನೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅಪಹರಣ ಮಾಡಲಾಗಿತ್ತು. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಅಡ್ರೆಸ್ ಕೇಳುವ ನೆಪದಲ್ಲಿ ಬಾಲಕಿಯನ್ನು ಅಪಹರಿಸಲಾಗಿತ್ತು. ಸದ್ಯ ಪ್ರಕರಣ ತನಿಖೆ ಮುಗಿದು ಹೊಸ ತಿರುವು ಪಡೆದುಕೊಂಡಿದ್ದು ಬಾಲಕಿ ಪೋಷಕರನ್ನು ಸೇರಿದ್ದಾಳೆ. ಆದ್ರೆ ಈ ಕಿಡ್ನಾಪ್ ಹಿಂದಿನ ಸತ್ಯ ಅರಿತು ಪೊಲೀಸರೇ ದಂಗಾಗಿದ್ದಾರೆ ಓರ್ವ ಮಹಿಳೆಯನ್ನೊಳಗೊಂಡ ಮೂರು ಮಂದಿ ರಾತ್ರಿ 11.23 ಸಮಯದಲ್ಲಿ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದರು ಎಂದು ಮೊದಲು ತಿಳಿದು ಬಂದಿತ್ತು.