Please assign a menu to the primary menu location under menu

Entertainment

‘ಮಾನಿಕೆ ಮಾಗೆ ಹಿತೆ’ ಹಾಡಿನ ಮೂಲಕ ಸುದ್ದಿಯಾಗ್ತಿದ್ದಾಳೆ ಈ ಪುಟ್ಟ ಪೋರಿ….!

‘ಮಾನಿಕೆ ಮಾಗೆ ಹಿತೆ’ ಹಾಡಿನ ಮೂಲಕ ಸುದ್ದಿಯಾಗ್ತಿದ್ದಾಳೆ ಈ ಪುಟ್ಟ ಪೋರಿ….!

ಶ್ರೀಲಂಕಾ ಮೂಲದ ಗಾಯಕಿ ಯೋಹನಿ ದಿಲೋಕಾ ಡಿ ಸಿಲ್ವಾ ಹಾಡಿದ ಮಾನಿಕೆ ಮಾಗೆ ಹಿತೆ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಾಡು ಕೇವಲ ಶ್ರೀಲಂಕಾ ಮಾತ್ರವಲ್ಲದೇ Read more…

ರೀಲಂಕಾ ಮೂಲದ ಗಾಯಕಿ ಯೋಹನಿ ದಿಲೋಕಾ ಡಿ ಸಿಲ್ವಾ ಹಾಡಿದ ಮಾನಿಕೆ ಮಾಗೆ ಹಿತೆ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಾಡು ಕೇವಲ ಶ್ರೀಲಂಕಾ ಮಾತ್ರವಲ್ಲದೇ ಭಾರತದಲ್ಲೂ ಕೂಡ ಈ ಹಾಡು ಅಪಾರ ಪ್ರೀತಿ ಗಳಿಸಿತ್ತು. ಇದಾದ ಬಳಿಕ ಸಾಕಷ್ಟು ಜನರು ಈ ಹಾಡನ್ನು ಯೋಹನಿರಂತೆಯೇ ಹಾಡಲು ಯತ್ನಿಸಿದ್ದರೂ ಕೂಡ. ಇದೀಗ ಪುಟ್ಟ ಬಾಲಕಿಯೊಬ್ಬಳು ಇದೇ ಹಾಡನ್ನು ಹಾಡಲು ಯತ್ನಿಸಿದ್ದು ಈ ಮುದ್ದಾದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹಾಟ್​ ಕೇಕ್​ನಂತೆ ಸೇಲ್​ ಆಗ್ತಿದೆ.

ಈ ವಿಡಿಯೋದಲ್ಲಿ ಮಾನಿಕೆ ಮಾಗೆ ಹಿತೆ ಹಾಡನ್ನು ಹಾಡ್ತಿರೋ ಈ ಮುದ್ದಾದ ಬಾಲಕಿಯ ಹೆಸರು ಅಲಾಯಾ. ಬ್ಲೂಟೂತ್​ ಸ್ಪೀಕರ್​ನಲ್ಲಿ ಮಾನಿಕೆ ಹಾಡು ಪ್ಲೇ ಆಗ್ತಾ ಇದ್ರೆ ಕೈಯಲ್ಲಿ ಗೊಂಬೆಗಳನ್ನು ಹಿಡಿದುಕೊಂಡಿರುವ ಅಲಾಯಾ ಮುದ್ದು ಮುದ್ದಾಗಿ ತೊದಲುತ್ತಾ ಈ ಹಾಡನ್ನು ಹಾಡಿದ್ದಾಳೆ.

ಈ ಮುದ್ದಾದ ವಿಡಿಯೋವನ್ನು ಅಲಾಯಾ ತಾಯಿ ಲಿಸಾ ಆನ್ ನಿಮಲಚಂದ್ರ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

https://www.instagram.com/p/CVJ9FBFBEFj/?utm_source=ig_web_copy_link


Leave a Reply

error: Content is protected !!