Please assign a menu to the primary menu location under menu

National

ವಯಸ್ಕರ ನಡುವೆ ಪರಸ್ಪರ ಸಮ್ಮತಿಯ ಸೆಕ್ಸ್ ಅಪರಾಧವಲ್ಲ, ಅನೈತಿಕ: ಹೈಕೋರ್ಟ್

ವಯಸ್ಕರ ನಡುವೆ ಪರಸ್ಪರ ಸಮ್ಮತಿಯ ಸೆಕ್ಸ್ ಅಪರಾಧವಲ್ಲ, ಅನೈತಿಕ: ಹೈಕೋರ್ಟ್

ಲಖ್ನೋ: ವಯಸ್ಕರ ನಡುವೆ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ನಡೆಯುವುದು ಅಪರಾಧವಲ್ಲ. ಆದರೆ, ಅನೈತಿಕ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು, ನಾಲ್ವರು ಆರೋಪಿಗಳಲ್ಲಿ ಒಬ್ಬ ತಾನು ಸಂತ್ರಸ್ತೆಯ ಗೆಳೆಯನಾಗಿದ್ದು, ಈ ಪ್ರಕರಣದಲ್ಲಿ ತನ್ನನ್ನು ಸಾಕ್ಷಿಯಾಗಿ ಪರಿಗಣಿಸಿ ಜಾಮೀನು ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯ ವಿಚಾರಣೆ ವೇಳೆಯಲ್ಲಿ ನ್ಯಾಯಾಲಯ ಸಮ್ಮತಿಯ ಸೆಕ್ಸ್ ಅಪರಾಧವಲ್ಲ, ಆದರೆ, ಅನೈತಿಕ ಎಂದು ಅಭಿಪ್ರಾಯಪಟ್ಟಿದೆ.

ಮಹಿಳೆಯ ಒಪ್ಪಿಗೆ ಪಡೆದು ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗದು. ಆದರೆ ಇದು ಅನೈತಿಕವಾಗಿದೆ. ದೇಶ, ಸಮಾಜ ಒಪ್ಪಿಕೊಂಡ ಮೌಲ್ಯಗಳಿಗೆ ವಿರುದ್ಧವಾಗಿದೆ. ಮಹಿಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭದಲ್ಲಿ ಆಕೆಯ ಗೌರವ ಕಾಪಾಡಬೇಕಿರುವುದು ಪ್ರಿಯಕರನ ಕರ್ತವ್ಯವಾಗಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಪ್ರಿಯಕರ ತನ್ನ ಕರ್ತವ್ಯ ಮರೆತು ನನ್ನ ಗೆಳೆಯರು ಗೆಳತಿಯ ಮೇಲೆ ದೌರ್ಜನ್ಯ ಎಸಗುವಾಗ ಮೂಕಸಾಕ್ಷಿಯಾಗಿ ನಿಲ್ಲುವುದು ಅತ್ಯಂತ ಶೋಚನೀಯ ಎಂದು ಛೀಮಾರಿ ಹಾಕಲಾಗಿದೆ.

ಹೊಲಿಗೆ ತರಬೇತಿ ಪಡೆಯಲು ಬರುತ್ತಿದ್ದ ಯುವತಿಯನ್ನು ಪರಿಚಯಿಸಿಕೊಂಡಿದ್ದ ರಾಜು ಎಂಬಾತ ನಿರ್ಜನ ಪ್ರದೇಶಕ್ಕೆ ತನ್ನ ಯುವತಿಯನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ್ದ. ಅಲ್ಲಿಗೇ ತನ್ನ ಸ್ನೇಹಿತರನ್ನು ಕೂಡ ಕರೆಸಿಕೊಂಡು ಯುವತಿಯನ್ನು ಥಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಬಗ್ಗೆ ಎಫ್ಐಆರ್ ದಾಖಲಾಗಿತ್ತು.


Leave a Reply

error: Content is protected !!