National News

ವರಮಹಾಲಕ್ಷ್ಮಿ ಹಬ್ಬಜೋರು; ದುಪ್ಪಟ್ಟಾದ ಹೂವು,ಹಣ್ಣು, ಪೂಜೆ ಸಾಮಾನು

ವರಮಹಾಲಕ್ಷ್ಮಿ ಹಬ್ಬಜೋರು; ದುಪ್ಪಟ್ಟಾದ ಹೂವು,ಹಣ್ಣು, ಪೂಜೆ ಸಾಮಾನು

ಬೆಂಗಳೂರು:  ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಕೆಆರ್ ಪುರಂ ಮಾರ್ಕೆಟಿನಲ್ಲಿ ಹೂವು, ಹಣ್ಣು, ಕಾಯಿ ಮುಂತಾದ ಪೂಜೆಗಿಡುವ ವಸ್ತುಗಳ ಬೆಲೆ ದ್ವಿಗುಣವಾಗಿದ್ದರೂ ಮಾರಾಟ ಮತ್ತು ಖರೀದಿ ಜೋರು ಜೋರಾಗಿಯೇ ನಡೆಯುತ್ತಿದೆ..

ಪ್ರತೀ ವರ್ಷದಂತೆ ಶ್ರಾವಣ ಮಾಸದಲ್ಲಿ ಆಚರಿಸುವ ವರಮಹಾಲಕ್ಷ್ಮಿ ಈ ವರ್ಷವೂ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸಲು, ಹಣ್ಣು ಕೋಡುಕೊಳ್ಳಲು ಗ್ರಾಹಕರು ಗುಂಪು ಗುಂಪಾಗಿ ಮಾರ್ಕೆಟ್ಗೆ ದಾವಿಸುತ್ತಿದ್ದಿದ್ದು ಕಂಡು ಬಂದಿತು. ಹಬ್ಬದ ಪ್ರಯುಕ್ತವಾಗಿ ಹೂವೂ ಹಣ್ಣು ಬೆಲೆ ಗಗನಕ್ಕೇರಿದೆ. ಹಬ್ಬ ಆಚರಣೆಗಾಗಿ ಗ್ರಾಹಕರು ಕೊಂಡುಕೊಳ್ಳಲೇಬೇಕಾದ ಅನಿವಾರ್ಯತೆ ಕಂಡುಬಂದಿತು. ಮಳೆ ಬರದ ಕಾರಣ ಕೆಲವುಕಡೆ ಹಣ್ಣು ಹೂವೂ ಬೆಳೆಯದೇ ಇರುವುದರಿಂದ ಬೆಲೆ ಏರಿಕೆಗೆ ಒಂದು ಕಾರಣವಾಗಿದೆ ಎನ್ನುವುದು ಕೆಲವು ಮಾರಾಟಗಾರರ ಅಬಿಪ್ರಾಯವಾಗಿದೆ.

ಮಾರ್ಕೆಟ್ನಲ್ಲಿ ಮಾರಾಟಗಾರರು ತಾತ್ಕಾಲಿಕವಾಗಿ ರಸ್ತೆಯಲ್ಲಿ ಹೂವು, ಹಣ್ಣು ಇಟ್ಟು ಮಾರುತ್ತಿದ್ದುರಿಂದ ಜನದಟ್ಟಣೆ ಹೆಚ್ಚಾಗಿ ಕಂಡುಬಂದಿತು, ಮತ್ತು ವಾಹಣ ಸವಾರರಿಗೆ ಟ್ರಾಫಿಕ್ ಜಾಮ್ ಆಗಿ ಕಿರಿಕಿಯುಂಟಾಗಿತ್ತು, ಟ್ರಾಫಿಕ್ ಪೊಲೀಸರು ಟ್ರಾಫಿಕ್ ತೆರವುಗುಳಿಸುವಲ್ಲಿ ಹೈರಾಣಾದರು.

 

ವರದಿಗಾರರು

ಮಂಜುನಾಥ.ಲಕ್ಕಿಮರ(ವಿಜಯನಗರ)

Disclaimer: This Story is auto-aggregated by a Syndicated Feed and has not been Created or Edited By City Big News Staff.