Technology News

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಮಾಲಕ್ಷ್ಮಿ ಹಬ್ಬ ಫುಲ್ ಜೋರು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಮಾಲಕ್ಷ್ಮಿ ಹಬ್ಬ ಫುಲ್ ಜೋರು

ಮೈಸೂರು: ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯದ್ಯಂತ ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಜನರು ಪೂಜಾ ಸಾಮಗ್ರಿಗಳ ಖರೀದಿಸಲು ಮುಂದಾಗುತ್ತಿದ್ದು ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಕೆ ಆರ್ ಮಾರ್ಕೆಟ್ ನಷ್ಟೇ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ದೇವರಾಜ ಮಾರ್ಕೆಟ್ ಫೇಮಸ್.

ಮೈಸೂರಿನ ದೇವರಾಜ ಮಾರ್ಕೆಟ್ ನಲ್ಲಿ ಗುರುವಾರ ವ್ಯಾಪಾರ ಹೇಗಿತ್ತು ಅಂತ ಗೊತ್ತಿಲ್ಲ, ಆದರೆ ಇವತ್ತು ಅಲ್ಲಿ ಜನ ಜಾತ್ರೆ. ನಿನ್ನೆ ಕೆಲಸದ ದಿನವಾಗಿದ್ದರಿಂದ ಪ್ರಾಯಶಃ ಹೆಚ್ಚು ಜನ ಖರೀದಿಗಳಿಗೆ ಬಂದಿರಲಿಕ್ಕಿಲ್ಲ. ಇವತ್ತು ಪೂರ್ತಿ ಮೈಸೂರು ಜನ  ದೇವರಾಜ ಮಾರ್ಕೆಟ್ ನಲ್ಲಿ ಘೇರಾಯಿಸಿರುವ ಹಾಗೆ ಭಾಸವಾಗುತ್ತಿದೆ.

ಹೂವು, ಹಣ್ಣು ಮತ್ತು ತರಕಾರಿ ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಬೆಂಗಳೂರಲ್ಲಂತೆ ಮೈಸೂರಲ್ಲೂ ಎಲ್ಲ ವಸ್ತುಗಳು ದುಬಾರಿ. ಖರೀದಿಗೆ ಬಂದಿರುವ ಜನ ಚೌಕಾಶಿ ಮಾಡುತ್ತಿರುವುದನ್ನು ನೋಡಬಹುದು. ಗ್ರಾಹಕರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಬಾರ್ಗೇನಿಂಗ್ ಮಾಡುತ್ತಾರೆ ಅಂತ ವ್ಯಾಪಾರಿಗಳಿಗೂ ಗೊತ್ತು. ಅದನ್ನು ಸರಿದೂಗಿಸುವ ಹಾಗೆಯೇ ಅವರು ದರ ಹೇಳಿರುತ್ತಾರೆ.!

Disclaimer: This Story is auto-aggregated by a Syndicated Feed and has not been Created or Edited By City Big News Staff.