Please assign a menu to the primary menu location under menu

State

ವಾಟಾಳ್ ಕನ್ನಡದ ಅಭಿಮಾನ ಮತ್ತು ಸ್ವಾಭಿಮಾನದ ಸಂಗಮ : ಮುಖ್ಯಮಂತ್ರಿ

ವಾಟಾಳ್ ಕನ್ನಡದ ಅಭಿಮಾನ ಮತ್ತು ಸ್ವಾಭಿಮಾನದ ಸಂಗಮ : ಮುಖ್ಯಮಂತ್ರಿ

ಬೆಂಗಳೂರು : ”ಕನ್ನಡದ ಅಭಿಮಾನ ಮತ್ತು ಸ್ವಾಭಿಮಾನ ಇವೆರಡರ ಸಂಗಮ ಎಲ್ಲಾದರೂ ಆಗಿದ್ದರೆ ಅದು ವಾಟಾಳ್ ನಾಗರಾಜ್ ಅವರಿಂದ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ” ವಾಟಾಳ್ ನಾಗರಾಜ್ ಕರ್ನಾಟಕ ಏಕೀಕರಣ ಹತ್ತಿರದಿಂದ ನೋಡಿದ್ದಾರೆ. ಸ್ವಾತಂತ್ರ್ಯ ನಂತರ ಕರ್ನಾಟಕ ಹರಿದು ಹಂಚಿಹೋಗಿತ್ತು.ಹಳೆ ಕರ್ನಾಟಕ, ಹೊಸ ಕರ್ನಾಟಕ ಸೇರಿ 1950ರಲ್ಲಿ ಏಕೀಕರಣವಾಯ್ತು. ವಾಟಳ್ ನಾಗರಾಜ್ ಅವರಿಗೆ ಕನ್ನಡದ ಬಗ್ಗೆ ಅಪಾರ ಗೌರವ ಇತ್ತು.ಏಕೀಕರಣಕ್ಕೆ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ಕುವೆಂಪು ಅವರ ಕೊಡುಗೆ ಇದೆ.”ಎಂದರು.

”ಕನ್ನಡ ನಾಡಿನಲ್ಲಿ ಸ್ವಾಭಿಮಾನ, ಅಭಿಮಾನ ಅನ್ನೋ ಗುಣಧರ್ಮ ತುಂಬದಿದ್ದರೆ ಕಷ್ಟ ಅಂತ ಅರಿತರು. ಹೀಗಾಗಿ ಅಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹೋರಾಟ ಶುರು ಮಾಡಿದರು. ಬೆಂಗಳೂರಿನಲ್ಲಿ ಹೋರಾಟ ಆರಂಭಿಸಿ ಚಾಲನೆ ಕೊಟ್ಟವರು ವಾಟಾಳ್.1962ರಲ್ಲಿ ಆರಂಭವಾಗಿ, ಅಂದಿನಿಂದ ಇಂದಿನವರೆಗೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕರ್ನಾಟಕ ಅನ್ನುವ ಹೆಸರು 1972ರ ನಂತರ ಬಂದಿದ್ದು.ಅದಕ್ಕೂ ಮೊದಲೇ ಕರ್ನಾಟಕ ರಾಜ್ಯೋತ್ಸವ ಅಂತ ಮಾಡುತ್ತಲೇ ಬಂದಿದ್ದಾರೆ. ಕನ್ನಡದ ಧ್ವನಿ, ಸ್ವಾಭಿಮಾನ, ಹೋರಾಟದ ಬದುಕಿನ ಪ್ರತೀಕ ವಾಟಾಳ್ ನಾಗರಾಜ್.” ಎಂದರು.

”ಅವರ ಕಾರ್ಯಚಟುವಟಿಕೆ, ಉತ್ಸಾಹ ನಮಗಿಂತ ಸಣ್ಣವರ ರೀತಿಯಲ್ಲಿ ಮಾಡುತ್ತಿದ್ದಾರೆ” ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ರಾಜ್ಯೋತ್ಸವದ ಸುಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹಾಡಿ ಹೊಗಳಿದ್ದಾರೆ.


Leave a Reply

error: Content is protected !!