Please assign a menu to the primary menu location under menu

Entertainment

ಸ್ಕೇಟಿಂಗ್ ನಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ ಯುವತಿ: ವಿಡಿಯೋ ವೈರಲ್

ಸ್ಕೇಟಿಂಗ್ ನಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ ಯುವತಿ: ವಿಡಿಯೋ ವೈರಲ್

ಪ್ರತಿಭಾವಂತ ಯುವತಿಯೊಬ್ಬಳು ಸ್ಕೇಟಿಂಗ್ ಮಾಡುತ್ತಾ ಸಾಂಪ್ರದಾಯಿಕ ರಾಜಸ್ಥಾನಿ ನೃತ್ಯ ಪ್ರದರ್ಶಿಸಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದೆ. ತೂಕ ಕಡಿಮೆ ಮಾಡುತ್ತೆ ಈ ಧಾನ್ಯ ವೃತ್ತಿಪರ ವೇಗದ ಸ್ಕೇಟರ್ Read more…

ಪ್ರತಿಭಾವಂತ ಯುವತಿಯೊಬ್ಬಳು ಸ್ಕೇಟಿಂಗ್ ಮಾಡುತ್ತಾ ಸಾಂಪ್ರದಾಯಿಕ ರಾಜಸ್ಥಾನಿ ನೃತ್ಯ ಪ್ರದರ್ಶಿಸಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದೆ.

ವೃತ್ತಿಪರ ವೇಗದ ಸ್ಕೇಟರ್ ಮತ್ತು ರೆಕಾರ್ಡ್-ಹೋಲ್ಡರ್ ಕೃಷ್ಣ ಕನ್ವರ್ ಗಹ್ಲೋಟ್ ಅವರು ಸಾಂಪ್ರದಾಯಿಕ ರಾಜಸ್ಥಾನಿ ಲೆಹೆಂಗಾ-ಚೋಲಿ ಧರಿಸಿದ್ದಾರೆ. ಜೊತೆಗೆ ಆಭರಣಗಳನ್ನು ಕೂಡ ಧರಿಸಿದ್ದಾರೆ. ಆದರೂ ಕೂಡ ಅವರು ರೋಲರ್‌ಬ್ಲೇಡ್‌ಗಳಲ್ಲಿ ಸಲೀಸಾಗಿ ನೃತ್ಯ ಮಾಡಿದ್ದಾರೆ.

ಉದಯಪುರದಲ್ಲಿ ಒಧಾನಿ 2021 ಎಂಬ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ಯುವತಿ ಡ್ಯಾನ್ಸ್ ಮಾಡಿದ್ದಾರೆ. ಆಯೋಜಕಿ ಟ್ವಿಂಕಲ್ ಬೈಸಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ಆಕೆಯ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.


Leave a Reply

error: Content is protected !!