Please assign a menu to the primary menu location under menu

National

ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ; ಅ. 30ರಂದು ಮತದಾನ

ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ; ಅ. 30ರಂದು ಮತದಾನ

ನವದೆಹಲಿ: ಕರ್ನಾಟಕದ ಸಿಂದಗಿ, ಹಾನಗಲ್‌ ವಿಧಾನಸಭೆಗಳ ಉಪಚುನಾವಣೆ ಸೇರಿದಂತೆ ದೇಶದ ಮೂರು ಲೋಕಸಭೆ ಹಾಗೂ 30 ವಿಧಾನಸಭೆ ಉಪ-ಚುನಾವಣೆಗಳಿಗಾಗಿ ಅ. 30ರಂದು ಮತದಾನ ನಡೆಯಲಿದೆ.

ಕೇಂದ್ರ ಚುನಾವಣಾ ಆಯೋಗದ ನಿಯಮಗಳನುಸಾರ, ಬುಧವಾರದಂದು (ಅ. 27) ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಈ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ- ಕಾಂಗ್ರೆಸ್‌ ಪ್ರಮುಖ ರಣಕಲಿಗಳಾಗಿವೆ.

ಕೇಂದ್ರಾಡಳಿತ ಪ್ರದೇಶವಾದ ದ್ರಾದ್ರಾ ಮತ್ತು ನಗರ್‌ಹವೇಲಿ, ಹಿಮಾಚಲ ಪ್ರದೇಶದ ಮಂಡಿ, ಮಧ್ಯಪ್ರದೇಶದ ಖಾಂದವಾ ಲೋಕಸಭಾ ಕ್ಷೇತ್ರಗಳಲ್ಲಿ ಉಪ- ಚುನಾವಣೆ ನಡೆದರೆ, ಅಸ್ಸಾಂನ ಐದು, ಪಶ್ಚಿಮ ಬಂಗಾಳದ ನಾಲ್ಕು, ಮಧ್ಯಪ್ರದೇಶ- ಹಿಮಾಚಲ ಪ್ರದೇಶ- ಮೇಘಾಲಯದ ತಲಾ ಮೂರು, ಬಿಹಾರ-ಕರ್ನಾಟಕ- ರಾಜಸ್ಥಾನದಲ್ಲಿ ತಲಾ ಎರಡು ಹಾಗೂ ಆಂಧ್ರಪ್ರದೇಶ-ಹರ್ಯಾಣ-ಮಹಾರಾಷ್ಟ್ರ- ಮಿಜೋರಂ-ನಾಗಾಲ್ಯಾಂಡ್‌- ತೆಲಂಗಾಣದ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ಅ. 30ರಂದು ಮತದಾನ ನಡೆಯಲಿದೆ.

ನ. 2ರಂದು ಮತ ಎಣಿಕೆ ನಡೆಯಲಿದೆ.


Leave a Reply

error: Content is protected !!