Please assign a menu to the primary menu location under menu

State

ಮಹಿಳಾ ಉದ್ಯಮಶೀಲತ್ವದ ದಿನ: ಉದ್ಯಮಶೀಲತೆಯ ಅವಕಾಶಗಳ ಬಳಕೆಗೆ ವಾಧ್ವಾನಿ ಫೌಂಡೇಷನ್ ಕರೆ


ಬೆಂಗಳೂರು, ನವೆಂಬರ್ 18, 2021: ಜಾಗತಿಕ ಮಟ್ಟದ ಲಾಭರಹಿತ ಸಂಸ್ಥೆಯಾಗಿರುವ ವಾಧ್ವಾನಿ ಫೌಂಡೇಷನ್ ಮಹಿಳಾ ಉದ್ಯಮಶೀಲತ್ವದ ದಿನವನ್ನು ವಿಶೇಷವಾಗಿ ಆಚರಿಸುತ್ತಿದೆ. ಹೆಚ್ಚು ಹೆಚ್ಚು ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಮಹಿಳಾ ಉದ್ಯಮಿಗಳ ಅದಮ್ಯ ಚೈತನ್ಯವನ್ನು ಭಾರತದಲ್ಲಿ ಮುಂಚೂಣಿಗೆ ತರುವುದು, ಉದ್ಯಮಶೀಲ ಪರಿಸರ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಹೊಸ ಹೊಸ ಉದ್ಯಮಗಳನ್ನು ಆರಂಭಿಸುವ ಮೂಲಕ ತಮ್ಮ ಸಾಮಥ್ರ್ಯವನ್ನು ಅರಿತುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

• ಎಎಂಸಿಕಿನ್ಸೆ ಗ್ಲೋಬಲ್ ಇನ್‍ಸ್ಟಿಟ್ಯೂಟ್(ಎಂಜಿಐ) ವರದಿ ಪ್ರಕಾರ ಭಾರತವು 2025 ರ ವೇಳೆಗೆ ಲಿಂಗ ಸಮಾನತೆಯನ್ನು ಮುನ್ನಡೆಸುವ ಮೂಲಕ ತನ್ನ ಜಿಡಿಪಿಗೆ 770 ಶತಕೋಟಿ ಡಾಲರ್‍ಗಳನ್ನು ಸೇರಿಸುವ ಸಾಧ್ಯತೆಗಳಿವೆ.
• ಗೂಗಲ್ ಅಂಡ್ ಬ್ರೇನ್ & ಕಂಪನಿ ವರದಿ ಪ್ರಕಾರ, 13.5 ರಿಂದ 15.7 ಮಿಲಿಯನ್‍ನಷ್ಟು ಮಹಿಳಾ ಸ್ವಾಮ್ಯದ ಉದ್ಯಮಗಳು ದೇಶದ ಎಲ್ಲಾ ಉದ್ಯಮಗಳಲ್ಲಿ ಕೇವಲ 20% ರಷ್ಟು ಹೊಂದಿವೆ.
• ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ನ ಸಂಶೋಧನಾ ವರದಿ ಹೇಳುವಂತೆ, ಮಹಿಳಾ ಉದ್ಯಮಿಗಳ ಪರವಾಗಿ ಲಿಂಗ ಅಸಮತೋಲನವನ್ನು ಸುಧಾರಿಸುವುದು ಭಾರತದಲ್ಲಿನ ಜಿಡಿಪಿಯಲ್ಲಿ 6.8% ರಷ್ಟು ಲಾಭಕ್ಕೆ ಕಾರಣವಾಗಬಹುದು.

ಈ ಬಗ್ಗೆ ಮಾತನಾಡಿದ ವಾಧ್ವಾನಿ ಫೌಂಡೇಷನ್-ಭಾರತ/ಎಸ್‍ಇ ಏಷ್ಯಾದ ಚೀಫ್ ಆಪರೇಟಿಂಗ್ ಆಫೀಸರ್ ಸಂಜಯ್ ಶಾ ಅವರು, “ಭಾರತದಲ್ಲಿನ ಮಹಿಳಾ ಉದ್ಯಮಿಗಳು ಗಾಜಿನ ಕವಚಟಗಳನ್ನು ಒಡೆಯುತ್ತಿದ್ದಾರೆ ಮತ್ತು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಅಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಆದಾಗ್ಯೂ, ಅವರು ಕಡಿಮೆ ಮತ್ತು ದೂರ ಮತ್ತು ಹತ್ತಿರದ ನಡುವೆ ಇದ್ದಾರೆ. ಮಹಿಳಾ ಉದ್ಯಮಶೀಲತೆಯನ್ನು ಸಶಕ್ತಗೊಳಿಸುವುದು ಮತ್ತು ಪ್ರೋತ್ಸಾಹಿಸುವುದರಿಂದ ಭಾರತದ ಜಿಡಿಪಿಗೆ ಅವರಿಂದ 18% ರಷ್ಟು ಕೊಡುಗೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಂತೆ ಮಾಡುತ್ತದೆ ಹಾಗೂ ಅವರ ಸಾಮಾಜಿಕ-ಆರ್ಥಿಕ ಸ್ವಾತಂತ್ರ್ಯವನ್ನು ವೇಗಗೊಳಿಸುತ್ತದೆ. ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಗಳು ತಮ್ಮ ಸುತ್ತಲಿನ ಅನೇಕ ಮಾದರಿ ಉದ್ಯಮಿಗಳಿಂದ ಸ್ಫೂರ್ತಿ ಪಡೆಯಬೇಕು ಮತ್ತು ತಮ್ಮ ಉದ್ಯಮಶೀಲತೆಯ ಕನಸುಗಳಿಗೆ ಆಕಾರ ನೀಡಲು ಕೆಲವು ಮೂಲಭೂತ ತತ್ತ್ವಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದೇ ರೀತಿ, ನಿರ್ಣಾಯಕವಾದ ಆರಂಭಿಕ ಅವಧಿಯಲ್ಲಿ ಮುನ್ನಡೆಯಲು ಮಾರ್ಗದರ್ಶಕ ಅಥವಾ ವ್ಯಾಪಾರದ ತರಬೇತುದಾರರನ್ನು ಹುಡುಕುವುದನ್ನು ಅನುಸರಿಸಬೇಕು. ನೀವು ಉದ್ಯಮಶೀಲತೆಯತ್ತ ಮುನ್ನಡೆಯಲು ಬಯಸದಿದ್ದರೂ ಸಹ ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಹಿಳಾ ಒಡೆತನದ ವ್ಯವಹಾರಗಳಿಗೆ ಬೆಂಬಲವನ್ನು ತೋರಿಸುವ ಮೂಲಕ ನೀವು ಮಹಿಳಾ ಉದ್ಯಮಶೀಲತಾ ದಿನವನ್ನು ಆಚರಿಸಬಹುದಾಗಿದೆ’’ ಎಂದು ತಿಳಿಸಿದರು.

ಸರಿಯಾದ ಹೆಜ್ಜೆಯಲ್ಲಿ ಸ್ಟಾರ್ಟಪ್ ಅನ್ನು ಆರಂಭಿಸಲು ಬಯಸುವ ಮಹಿಳಾ ಉದ್ಯಮಿಗಳಿಗೆ ಇಲ್ಲಿ ಕೆಲವು ಸಲಹೆಗಳಿವೆ:-

1. ಆರಂಭಿಕ ಪ್ರಯಾಣದ ಉದ್ದೇಶವನ್ನು ನಿರ್ಣಾಯಕವಾಗಿ ಒದಗಿಸುವ ಸರಿಯಾದ ಮಾರ್ಗದರ್ಶಕರಿಗೆ ಪ್ರವೇಶವನ್ನು ಪಡೆಯಿರಿ- ಈ ಕಲ್ಪನಿಯಿಂದ ಕಾರ್ಯರೂಪಕ್ಕೆ ತನ್ನಿ.
2. ಸರಿಯಾದ ಜಾಲಗಳನ್ನು ಪಡೆದುಕೊಳ್ಳಿ: ಹಂತ ಹಂತದ ಕಲಿಕೆ, ವ್ಯಾಪಾರ-ವರ್ಧಿಸುವ ಸಂಪರ್ಕಗಳು ಮತ್ತು ಅನುಭವ-ಹಂಚಿಕೆಯನ್ನು ಒದಗಿಸುವ ಸರಿಯಾದ ಜಾಲವನ್ನು ಹೊಂದಿರಿ.
3. ಯಾವುದೇ ಸ್ಲಿಪ್-ಅಪ್‍ಗಳ ವಿರುದ್ಧ ಖಚಿತಪಡಿಸಿಕೊಳ್ಳಲು ವ್ಯಾಪಾರ ಕಾರ್ಯಾಚರಣೆಗಳ ಮೇಲೆ ಹದ್ದಿನ ಕಣ್ಣಿಡಬಲ್ಲಂತಹ ವಿಶ್ವಾಸಾರ್ಹ ಪಾಲುದಾರರನ್ನು ಪಡೆಯಿರಿ.
4. ಕಲಿಕೆ ಮತ್ತು ಅಪ್‍ಸ್ಕಿಲ್ಲಿಂಗ್‍ನಲ್ಲಿ ಹೂಡಿಕೆ ಮಾಡಿ: ವ್ಯಾಪಾರದ ಪಟ್ಟುಗಳನ್ನು ಕಲಿಯುವುದು, ಪ್ರಸ್ತುತ ಟ್ರೆಂಡ್‍ಗಳು ಮತ್ತು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಹಾಗೂ ಡೊಮೇನ್/ಸೆಕ್ಟರ್ ಅಗತ್ಯಗಳಿಗೆ ಅನುಗುಣವಾಗಿ ಉನ್ನತ ಕೌಶಲ್ಯವು ಬಲವಾದ ವ್ಯಾಪಾರದ ಮೂಲಭೂತ ಅಂಶಗಳನ್ನು ಸ್ಥಾಪಿಸುವಲ್ಲಿ ಸಾಧ್ಯವಾಗುತ್ತದೆ.
5. ಬೆಂಬಲದ ವ್ಯವಸ್ಥೆಯನ್ನು ನಿರ್ಮಾಣ ಮಾಡಿ: ವಾಣಿಜ್ಯೋದ್ಯಮವು ಏಕಾಂಗಿಯಾಗಿ ಮುನ್ನಡೆಯಬಹುದು. ಇದು ಪುರುಷ ಮತ್ತು ಮಹಿಳೆಯರಿಗೆ ಅನ್ವಯವಾಗುತ್ತದೆ. ಆದ್ದರಿಂದ, ಮಹಿಳೆಯರು ತಮ್ಮ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಮನೆಯಲ್ಲಿ ಮತ್ತು ಹೊರಗಿನ ಸಹಕಾರ ಹಾಗು ಪ್ರೋತ್ಸಾಹವು ನಿರ್ಣಾಯಕವಾಗಿರುತ್ತದೆ.

ಭಾರತದಲ್ಲಿ ಮಹಿಳಾ ಉದ್ಯಮಿಗಳು ಕ್ಷಿಪ್ರವಾಗಿ ಮುನ್ನಲೆಗೆ ಬರಲು ಇದು ಸಕಾಲವಾಗಿದೆ. ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಿಗಳು ವಿಕಸನಗೊಂಡಿರುವ ಅಂತರ್ಗತವಾದ ಪರಿಸರ ವ್ಯವಸ್ಥೆ ಮತ್ತು ಅನುಕೂಲಕರವಾದ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಅವಕಾಶವನ್ನು ಬಳಸಿಕೊಳ್ಳಬೇಕು.


Leave a Reply

error: Content is protected !!