Please assign a menu to the primary menu location under menu

Sports

ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ವಿರುದ್ಧ ಸಮರಕ್ಕೆ ಸಜ್ಜಾದ ಮಹಿಳಾ ಆಯೋಗ..!

ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ವಿರುದ್ಧ ಸಮರಕ್ಕೆ ಸಜ್ಜಾದ ಮಹಿಳಾ ಆಯೋಗ..!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿಯ ಪುತ್ರಿಗೆ ಆನ್​ಲೈನ್​​ನಲ್ಲಿ ಅತ್ಯಾಚಾರದ ಬೆದರಿಕೆಗಳನ್ನು ಹಾಕಲಾಗುತ್ತಿದೆ ಎಂಬ ವರದಿಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ದೆಹಲಿ ಮಹಿಳಾ ಆಯೋಗ ಮಾಹಿತಿ ನೀಡಿದೆ. ಈ ಸಂಬಂಧ ದೆಹಲಿ ಪೊಲೀಸರಿಗೆ ನೋಟಿಸ್​ ನೀಡಿದ ಆಯೋಗವು ಇದೊಂದು ಗಂಭೀರ ವಿಚಾರವಾಗಿದ್ದು ಶೀಘ್ರವೇ ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ಟ್ವಿಟರ್​ನಲ್ಲಿ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಯ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕುತ್ತಿರುವ ಆರೋಪಗಳ ಅಡಿಯಲ್ಲಿ ದೆಹಲಿ ಮಹಿಳಾ ಆಯೋಗವು ಪೊಲೀಸರಿಗೆ ನೋಟಿಸ್​ ಕಳುಹಿಸಿದೆ. ಚೇರ್​ ಪರ್ಸನ್​​ ಸ್ವಾತಿ ಮಾಲಿವಾಲ್​ ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು ಕೂಡಲೇ ತಪ್ಪಿತಸ್ಥರನ್ನು ಬಂಧಿಸುವಂತಾಗಬೇಕು ಎಂದು ಹೇಳಿದ್ದಾರೆ ಎಂದು ಆಯೋಗವು ಟ್ವೀಟ್​ ಮಾಡಿದೆ.

ಮಹಮ್ಮದ್​ ಶಮಿ ಪರ ವಹಿಸಿ ಮಾತನಾಡಿದ ಕಾರಣಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದ ಕಿಡಿಗೇಡಿ ಸಮೂಹ ಕೊಹ್ಲಿಯ 9 ತಿಂಗಳ ಮಗು ವಮಿಕಾ ಕೊಹ್ಲಿಗೆ ಟ್ವಿಟರ್​ನಲ್ಲಿ ಅತ್ಯಾಚಾರದ ಬೆದರಿಕೆಯನ್ನೊಡ್ಡಿತ್ತು.

 

 




Leave a Reply

error: Content is protected !!