ನವದೆಹಲಿ, : ಕಳೆದ ವಾರ ಸತತ ಆರು ದಿನಗಳ ಕಾಲ ಇಳಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ಸೋಮವಾರ ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ದಿಢೀರ್ ಏರಿಕೆ ಕಂಡುಬಂದಿದ್ದು, ಆಭರಣ ಖರೀದಿದಾರರಿಗೆ ಕೊಂಚ ನಿರಾಸೆಯಾಗಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX)ನಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ಕಂಡಿವೆ. ಆದರೆ, ವಿದೇಶಿ ಮಾರುಕಟ್ಟೆಗಳಲ್ಲಿ ಬಹುತೇಕ ಕಡೆ ಬೆಲೆಗಳು ಸ್ಥಿರವಾಗಿದ್ದು, ಕೆಲವೆಡೆ ಅಲ್ಪ ಏರಿಳಿತ ದಾಖಲಾಗಿದೆ.
ಸೋಮವಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು ₹1,480 ಹೆಚ್ಚಳವಾಗಿದೆ. ಕಳೆದ ವಾರ ನಿರಂತರವಾಗಿ ಬೆಲೆ ಕುಸಿದಿದ್ದರಿಂದ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸಲು ಯೋಜಿಸಿದ್ದವರಿಗೆ ಕೊಂಚ ಅನುಕೂಲವಾಗಿತ್ತು. ಆದರೆ, ಇದೀಗ ದರ ಮತ್ತೆ ಏರಿಕೆಯಾಗಿರುವುದರಿಂದ ಆಭರಣ ಖರೀದಿಗೆ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ.
ದೇಶದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ನವೆಂಬರ್ 23ರ ದರದ ಪ್ರಕಾರ, ಭಾರತದಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹1,16,000 ಇದೆ. ಇನ್ನು 24 ಕ್ಯಾರಟ್‌ನ ಶುದ್ಧ ಚಿನ್ನದ 10 ಗ್ರಾಂ ಬೆಲೆ ₹1,26,560 ಆಗಿದೆ.
ಚಿನ್ನದ ವಿಧ 1 ಗ್ರಾಂ ಬೆಲೆ 10 ಗ್ರಾಂ ಬೆಲೆ
24 ಕ್ಯಾರಟ್ ₹12,656 ₹1,26,560
22 ಕ್ಯಾರಟ್ ₹11,600 ₹1,16,000
18 ಕ್ಯಾರಟ್ ₹9,491 ₹94,910
ಬೆಳ್ಳಿ ಬೆಲೆ ಎಷ್ಟಿದೆ?
ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ದಾಖಲಾಗಿಲ್ಲ. ದೇಶದಲ್ಲಿ ಪ್ರಸ್ತುತ 1 ಗ್ರಾಂ ಬೆಳ್ಳಿ ಬೆಲೆ ₹175 ಇದ್ದು, 100 ಗ್ರಾಂ ಬೆಳ್ಳಿಯ ದರ ₹17,500 ಆಗಿದೆ.
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ
ರಾಜಧಾನಿ ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗಿದೆ. ಪ್ರಸ್ತುತ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹1,16,000 ಹಾಗೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹1,26,560 ಇದೆ. ಬೆಳ್ಳಿಯ ಬೆಲೆ 100 ಗ್ರಾಂಗೆ ₹17,500 ಆಗಿದೆ.ತಮಿಳುನಾಡು ಮತ್ತು ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಬೆಳ್ಳಿಯ ದರ 100 ಗ್ರಾಂಗೆ ₹17,500ರಷ್ಟಿದೆ.ಇಲ್ಲಿ ನೀಡಿರುವುದು ಮಾರುಕಟ್ಟೆಯ ಸೂಚಕ ಬೆಲೆಗಳು. ಆಭರಣ ಖರೀದಿಸುವಾಗ ಜಿಎಸ್‌ಟಿ, ಮೇಕಿಂಗ್ ಚಾರ್ಜ್‌ಗಳು ಮತ್ತು ಇತರೆ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸಬಹುದು.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,26,560
ನಾಗ್ಪುರ ₹1,26,560
ಮುಂಬೈ ₹1,26,560
ಚೆನ್ನೈ ₹1,26,560
ಕೋಲ್ಕತ್ತಾ ₹1,26,560
ಪಾಟ್ನಾ ₹1,26,610
ಸೂರತ್ ₹1,26,610
ಚಂಡೀಗಢ ₹1,26,710
ಲಕ್ನೋ ₹1,26,710