LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ’; ಲಿಖಿತ್-ಮಂಜ ವಿರುದ್ಧ ಆಸಿಯಾ ಗರಂ

ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿನ ಸ್ಪರ್ಧಿಗಳ ನಡುವಿನ ಜಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸೀಸನ್‌ನಲ್ಲಿ ಕಿಚ್ಚನ ಚಪ್ಪಾಳೆ ಪಡೆದುಕೊಂಡ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಸಿಯಾ ಫಿರ್ದೋಸ್‌, ಇದೀಗ ಲಿಖಿತ್ ಮತ್ತು ಮಾಡರ್ನ್ ಮಹಾಕವಿ ಮಂಜ ವಿರುದ್ಧ ಸಿಟ್ಟಾಗಿದ್ದಾರೆ.

ಬಿಗ್‌ಬಾಸ್ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಆಸಿಯಾ ಇಬ್ಬರ ವಿರುದ್ಧವೂ ಗರಂ ಆಗಿರುವ ದೃಶ್ಯಗಳು ಕಂಡುಬಂದಿವೆ. ಮಾತಿನ ಚಕಮಕಿಯ ವೇಳೆ, “ನಾನು ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ” ಎಂದು ಆಸಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸಿಯಾ ಕೋಪಕ್ಕೆ ಕಾರಣವೇನು?

ಈ ಜಗಳಕ್ಕೆ ಲಿಖಿತ್ ಕಾರಣ ಎನ್ನಲಾಗಿದೆ. ಮನೆಯ ಪ್ರಧಾನ ಬಾಗಿಲ ಬಳಿ ನಿಂತಿದ್ದ ಲಿಖಿತ್, ಡೈನಿಂಗ್ ಹಾಲ್‌ನಲ್ಲಿ ಕುಳಿತಿದ್ದ ಆಸಿಯಾರನ್ನು ಅಣುಕಿಸಿ ವ್ಯಂಗ್ಯ ಮಾಡುತ್ತಿದ್ದರು.

ಲಿಖಿತ್‌ ಹೀಗೆ ಪದೇಪದೇ ಅಣುಕಿಸುತ್ತಿದ್ದನ್ನು ಗಮನಿಸಿದ ಆಸಿಯಾ, ಅಲ್ಲಿಂದಲೇ “ಮಂಗನ ಥರ ಕಾಣ್ತೀಯ” ಎಂದು ತಿರುಗೇಟು ನೀಡಿದ್ದಾರೆ.

ಆದರೂ ಲಿಖಿತ್ ಸುಮ್ಮನಾಗದೆ ಅದೇ ರೀತಿ ವರ್ತನೆ ಮುಂದುವರಿಸಿದಾಗ ಆಸಿಯಾ ಕುಳಿತಿದ್ದ ಜಾಗದಿಂದ ಎದ್ದು ಅವರ ಬಳಿ ಹೋಗಿದ್ದಾರೆ. ಈ ವೇಳೆ “ಮುಚ್ಕೊಂಡ್ ಇದ್ರೆ ಸರಿ ಇವಾಗ” ಎಂದು ಲಿಖಿತ್‌ಗೆ ಎಚ್ಚರಿಕೆ ನೀಡಿದ್ದಾರೆ.

ಮಂಜನ ಮೇಲೂ ಆಸಿಯಾ ಗರಂ

ಈ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾಡರ್ನ್ ಮಹಾಕವಿ ಮಂಜ ಜೈಲಿನಲ್ಲಿದ್ದರು. ಅಲ್ಲಿಂದಲೇ ಮಂಜ ಸೀಟಿ ಹೊಡೆದು ಲಿಖಿತ್‌ಗೆ ಬೆಂಬಲ ಸೂಚಿಸುವ ರೀತಿಯಲ್ಲಿ ವರ್ತಿಸಿದ್ದಾರೆ.

ಇದರಿಂದ ಮತ್ತಷ್ಟು ಕೋಪಗೊಂಡ ಆಸಿಯಾ, ಮಂಜನಿಗೂ “ಮುಚ್ಕೊಂಡ್ ಕೂತ್ಕೊಳ್ಳೊಲೋ” ಎಂದು ಗದರಿಸಿದ್ದಾರೆ. ಬಳಿಕ ಮಂಜನನ್ನು ಅಳುಮುಂಜಿ ಎಂದು ರೇಗಿಸುತ್ತಾ ತಮ್ಮ ಆಕ್ರೋಶ ಮುಂದುವರಿಸಿದ್ದಾರೆ.

‘ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ’

ಲಿಖಿತ್ ಮತ್ತು ಮಂಜ ಇಬ್ಬರ ವರ್ತನೆಯಿಂದ ಕೋಪಗೊಂಡ ಆಸಿಯಾ, ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ “ನಾನು ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ” ಎಂದು ಹೇಳಿದ್ದಾರೆ.

ಈ ಮಾತಿನೊಂದಿಗೆ ಆಸಿಯಾ ಇಬ್ಬರ ವಿರುದ್ಧವೂ ತಮ್ಮ ಆಕ್ರೋಶವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಜಗಳದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಮುಂದಿನ ಸಂಚಿಕೆಯಲ್ಲಿ ಈ ವಿಚಾರ ಯಾವ ಹಂತಕ್ಕೆ ಹೋಗಲಿದೆ ಎಂಬ ಕುತೂಹಲ ಮೂಡಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ವಿನಾಯಿತಿ ಯೋಜನೆ ವಿಸ್ತರಣೆ65 ಕೋಟಿ ಅವ್ಯವಹಾರ ಪ್ರಕರಣ: ಬಾಲಿವುಡ್ ನಟ ಡಿನೊ ಮೊರಿಯಾ ಅರೆಸ್ಟ್BIG NEWS: ರಾಜ್ಯದಲ್ಲಿ 4.49 ಕೋಟಿ ಮತದಾರರು; ಸುಳ್ಳು ಮಾಹಿತಿ ನೀಡಿದ್ರೆ ಕೇಸ್!‘ಫ್ಲೈದುಬೈ’ ವಿಮಾನ ಘಟನೆ ‘ಭಯೋತ್ಪಾದಕ ಕೃತ್ಯ’ ಎಂದು ಘೋಷಿಸಿದ ಯುಎಇ: ಪೈಲಟ್ ಸ್ಮಿತ್ ಮಚ್ಚಾರ್ ಕಾರ್ಯಕ್ಕೆ ಶ್ಲಾಘನೆಸರ್ಕಾರಿ ಬಸ್ ಏರಿ ಕಂಡಕ್ಟರ್ ಆದ ಸಿಎಂ ; ಉಚಿತ ಟಿಕೆಟ್ ನೀಡಿ ಸಾರ್ವಜನಿಕರ ಜೊತೆ ಸಂವಾದ | Videoಬ್ರಹ್ಮಪುತ್ರ ಕಣಿವೆಯಲ್ಲಿ ಕಾವೇರಿದ ರಾಜಕೀಯ ಕಾಳಗ: ‘ಬಕಾಸುರ’ ಮತ್ತು ‘ಬಿರಿಯಾನಿ’ ವಾಕ್ಸಮರಏಷ್ಯನ್ ಗೇಮ್ಸ್ ನಲ್ಲಿ ಇತಿಹಾಸ ಸೃಷ್ಟಿಸಿದ ಮಹಿಳಾ ಹಾಕಿ ತಂಡ: 44 ವರ್ಷಗಳ ನಂತರ ಚಿನ್ನದ ಪದಕBREAKING: ತುರ್ತು ಕಡತ ಒಂದೇ ದಿನದಲ್ಲಿ ವಿಲೇವಾರಿ ಕಡ್ಡಾಯ: ರಾಜ್ಯ ಸರ್ಕಾರ ಆದೇಶಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ವೆಟ್ರಿ ಪಯಣಂ ಯೋಜನೆಗೆ ಚಾಲನೆ ನೀಡಿದ ಸಿಎಂ ವಿಜಯ್ಉಡುಪಿಯಲ್ಲಿ ಬೀಡಾಡಿ ಹಸು ಅಪಹರಣ ಪ್ರಕರಣ: ಪ್ರಮುಖ ಆರೋಪಿ ಸೆರೆ, ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ