LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರಿನ ಬಾಲದೇವರಹಟ್ಟಿಯಲ್ಲಿ ಮೌಢ್ಯಕ್ಕೆ ಬ್ರೇಕ್: ಬಾಣಂತಿ-ಮಗು ಮನೆ ಪ್ರವೇಶ, ವಸತಿ ಸಚಿವರಿಂದ ಸೂರು ಭಾಗ್ಯ!

ಚಿತ್ರದುರ್ಗ: ಸಂಪ್ರದಾಯದ ಹೆಸರಿನಲ್ಲಿ ಬಾಣಂತಿ ಹಾಗೂ ಹಸುಗೂಸನ್ನು ಊರಾಚೆಯ ಜಮೀನಿನಲ್ಲಿ ಪ್ರತ್ಯೇಕವಾಗಿರಿಸುತ್ತಿದ್ದ ಆಚರಣೆಗೆ ಬ್ರೇಕ್ ಹಾಕಿರುವ ಅಧಿಕಾರಿಗಳ ತಂಡ, ಗ್ರಾಮಸ್ಥರ ಮನವೊಲಿಸಿ ಇಬ್ಬರನ್ನೂ ಸುರಕ್ಷಿತವಾಗಿ ಮನೆಯೊಳಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ, ಪತ್ರಿಕಾ ವರದಿಗಳಿಗೆ ತಕ್ಷಣವೇ ಸ್ಪಂದಿಸಿರುವ ರಾಜ್ಯ ವಸತಿ ಸಚಿವರು ಸಂತ್ರಸ್ತ ಕುಟುಂಬಕ್ಕೆ ‘ರಾಜೀವ್ ಗಾಂಧಿ ಆವಾಸ್ ಯೋಜನೆ’ಯಡಿ ಮನೆ ಮಂಜೂರು ಮಾಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದಿಂಡಾವರ ಸಮೀಪದ ಬಾಲದೇವರಹಟ್ಟಿಯಲ್ಲಿ ಈ ಮಾನವೀಯ ಹಾಗೂ ಸಕಾರಾತ್ಮಕ ಬದಲಾವಣೆ ನಡೆದಿದ್ದು, ಕೇವಲ ಒಂದೇ ತಿಂಗಳ ಅವಧಿಯಲ್ಲಿ ಇಂತಹ ಎರಡನೇ ಪ್ರಕರಣ ಬೆಳಕಿಗೆ ಬಂದಿರುವುದು ಸಮುದಾಯದಲ್ಲಿ ಮೂಡುತ್ತಿರುವ ಜಾಗೃತಿಗೆ ಸಾಕ್ಷಿಯಾಗಿದೆ.

ಗ್ರಾಮಸ್ಥರ ಮನವೊಲಿಸಿ ಮನೆ ಪ್ರವೇಶ ಮಾಡಿಸಿದ ಅಧಿಕಾರಿಗಳು

ಕಾಡುಗೊಲ್ಲ ಸಮುದಾಯದ ಪ್ರಾಚೀನ ಆಚರಣೆಯ ಹಿನ್ನೆಲೆಯಲ್ಲಿ ಗ್ರಾಮದ ಮನು ಎಂಬುವವರ ಪತ್ನಿ ಹಾಗೂ ನವಜಾತ ಶಿಶುವನ್ನು ಊರಿನ ಹೊರಗಿನ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಪುಟ್ಟ ಗುಡಿಸಲಿನಲ್ಲಿ ಇರಿಸಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ACDPO) ಸುಧೀರ್ ಪಟಕೆ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ಧಾವಿಸಿತು. ಪೋಷಕರು ಹಾಗೂ ಸಮುದಾಯದ ಮುಖಂಡರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿ, ವೈಜ್ಞಾನಿಕ ಅರಿವು ಮತ್ತು ನವಜಾತ ಶಿಶುವಿನ ಆರೋಗ್ಯದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಅಧಿಕಾರಿಗಳ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ ಗ್ರಾಮಸ್ಥರು, ಬಾಣಂತಿ ಹಾಗೂ ಮಗುವನ್ನು ಸಾಂಪ್ರದಾಯಿಕ ಕಟ್ಟುಪಾಡುಗಳಿಂದ ಮುಕ್ತಗೊಳಿಸಿ ಸಡಗರದಿಂದ ಮನೆ ಪ್ರವೇಶ ಮಾಡಿಸಿದರು.

ಬಡತನದ ಬೇಗೆ: ವಸತಿ ಸಚಿವರಿಂದ ತಕ್ಷಣವೇ ಮಹತ್ವದ ಆದೇಶ 

ಗುಡಿಸಲಿನಿಂದ ಮನೆ ಪ್ರವೇಶವಾದರೂ, ಆ ಕುಟುಂಬಕ್ಕೆ ಸ್ವಂತ ಸೂರು ಇಲ್ಲದಿರುವುದು ಹಾಗೂ ತೀವ್ರ ಬಡತನದಲ್ಲಿ ದಿನದೂಡುತ್ತಿರುವುದು ಬೆಳಕಿಗೆ ಬಂದಿತ್ತು. ವಾಸಿಸಲು ಯೋಗ್ಯವಾದ ಮನೆಯಿಲ್ಲದೆ ಗುಡಿಸಲನ್ನೇ ಆಶ್ರಯಿಸಿರುವ ಬಾಣಂತಿ-ಮಗುವಿನ ದುಸ್ಥಿತಿಯ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ರಾಜ್ಯ ವಸತಿ ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ.

ದಿನಾಂಕ 14.10.2026 ರಂದು ವಸತಿ ಸಚಿವರ ಆಪ್ತ ಕಾರ್ಯದರ್ಶಿಗಳು ಹಿರಿಯೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಇಒ) ಅಧಿಕೃತ ಟಿಪ್ಪಣಿ ರವಾನಿಸಿದ್ದಾರೆ. ಬಾಲದೇವರಹಟ್ಟಿಯ ಬಾಣಂತಿ ಮತ್ತು ಮಗುವಿನ ಕುಟುಂಬಕ್ಕೆ ರಾಜೀವ್ ಗಾಂಧಿ ಆವಾಸ್ ಯೋಜನೆಯ ಯಾವುದೇ ಸೂಕ್ತ ಯೋಜನೆಯಡಿ ತಕ್ಷಣವೇ ಸುಸಜ್ಜಿತ ಮನೆಯನ್ನು ಮಂಜೂರು ಮಾಡಿ, ಅದರ ವರದಿಯನ್ನು ಸಚಿವರ ಅವಗಾಹನೆಗೆ ಸಲ್ಲಿಸುವಂತೆ ಆದೇಶದಲ್ಲಿ ಸ್ಪಷ್ಟವಾಗಿ ನಿರ್ದೇಶಿಸಿದ್ದಾರೆ.

ಸ್ಥಳೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ರಾಜೇಶ್ವರಿ, ಸಖಿ ಕೇಂದ್ರದ ಗೀತಾ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬ್ಬಂದಿಯ ಜಾಗೃತಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಸರ್ಕಾರದ ತ್ವರಿತ ಸ್ಪಂದನೆಯಿಂದಾಗಿ ಸಂತ್ರಸ್ತ ಬಾಣಂತಿ ಕುಟುಂಬಕ್ಕೆ ಶೀಘ್ರದಲ್ಲೇ ಶಾಶ್ವತ ಸೂರು ಸಿಗುವಂತಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...

news_1791986990_0_666.webp

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತದಲ್ಲಿ CJP ಪ್ರತಿಭಟನೆಗೆ ಅಮೆರಿಕದಿಂದ ಹಣಕಾಸು ನೆರವು ? ಗಾಯಕಿ ಮೇರಿ ಮಿಲ್ಬೆನ್‌ ಗಂಭೀರ ಆರೋಪ!ರಷ್ಯಾ ಸೇನೆಗೆ ಸೇರಿದ ಭಾರತೀಯರೆಷ್ಟು? ಎಷ್ಟು ಮಂದಿ ಸಾವು, ಎಷ್ಟು ಜನ ನಾಪತ್ತೆ? ಸುಪ್ರೀಂಕೋರ್ಟ್‌ಗೆ ಕೇಂದ್ರದ ಮಾಹಿತಿಮನೆಯ ಹಿತ್ತಲಲ್ಲಿ ಬೃಹತ್ ಹೆಬ್ಬಾವು ಪತ್ತೆ | WATCH VIDEOಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ15,000 ಲಂಚ ಪಡೆಯುತ್ತಿದ್ದಾಗಲೇ ಹೆಸ್ಕಾಂ ಅಧಿಕಾರಿ, ಗುತ್ತಿಗೆದಾರ ಲೋಕಾಯುಕ್ತ ಬಲೆಗೆBREAKING: ಜೆಡಿಎಸ್ ಸೋಶಿಯಲ್ ಮೀಡಿಯಾ ತಂಡದ ಯುವಕ ಪೊಲೀಸರು ವಶಕ್ಕೆ: HDK ಕಿಡಿಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಸಿಬ್ಬಂದಿಗೆ ಸಿಬಿಐ ಎಸ್ಪಿ ಆನಂದಕೃಷ್ಣನ್ ಅವರಿಂದ ವಿಶೇಷ ಉಪನ್ಯಾಸಬೆಂಗಳೂರಲ್ಲಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ರಿಯಾಕ್ಟರ್ ಸ್ಫೋಟ: ಮೂವರು ಕಾರ್ಮಿಕರಿಗೆ ಗಂಭೀರ ಗಾಯ, ಓರ್ವನ ಸ್ಥಿತಿಮಧು ಬಂಗಾರಪ್ಪ ಅವರ ಪ್ರಯತ್ನಕ್ಕೆ ಫಲ: ಇಡೀ ಶಿವಮೊಗ್ಗ ಜಿಲ್ಲೆ ಬರಪೀಡಿತ ಘೋಷಣೆಕಬ್ಬು ಬೆಳೆಗಾರರ ಬೇಡಿಕೆ ಪರಿಶೀಲನೆಗೆ ಕೇಂದ್ರದ ಮಹತ್ವದ ಕ್ರಮ: ರಮೇಶ್ ಚಂದ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ