LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

1 ವರ್ಷದ FDಗೆ ₹5 ಲಕ್ಷ ಹೂಡಿಕೆ ಮಾಡ್ತೀರಾ? ಯಾವ ಬ್ಯಾಂಕ್ ಹೆಚ್ಚು ರಿಟರ್ನ್ಸ್ ಕೊಡುತ್ತದೆ ನೋಡಿ

ಅಚಾನಕ್ಕಾಗಿ ನಿಮ್ಮ ಕೈಗೆ ದೊಡ್ಡ ಮೊತ್ತದ ಹಣ ಬಂದಿದೆಯಾ? ಸದ್ಯಕ್ಕೆ ಆ ಹಣದ ತುರ್ತು ಅಗತ್ಯ ನಿಮಗಿಲ್ಲದಿದ್ದರೆ ಅದನ್ನ ಸರಿಯಾದ ಜಾಗದಲ್ಲಿ ಹೂಡಿಕೆ (Investment) ಮಾಡುವುದು ಅತ್ಯಂತ ಬುದ್ಧಿವಂತಿಕೆಯ ಲಕ್ಷಣ. ನೀವು ಯಾವುದೇ ರೀತಿಯ ಮಾರುಕಟ್ಟೆಯ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದಿದ್ದರೆ, ಬ್ಯಾಂಕುಗಳ ಫಿಕ್ಸ್ಡ್ ಡೆಪಾಸಿಟ್ ಅಥವಾ ಎಫ್‌ಡಿ ನಿಮಗೆ ಬೆಸ್ಟ್ ಆಪ್ಷನ್ ಆಗಬಹುದು.

ಏಕೆಂದರೆ ಇಲ್ಲಿ ಮಾರುಕಟ್ಟೆಯ ಏರಿಳಿತಗಳ ಭಯ ಇರಲ್ಲ, ನಿಮ್ಮ ಕಷ್ಟದ ದುಡ್ಡು ಬ್ಯಾಂಕಿನಲ್ಲಿ ನೂರಕ್ಕೆ ನೂರು ಸೇಫ್ ಆಗಿ ಇರುತ್ತೆ ಮತ್ತು ಮೊದಲೇ ನಿಗದಿಪಡಿಸಿದಂತೆ ಪಕ್ಕಾ ಬಡ್ಡಿ ಲಾಭ ಕೂಡ ಕೈ ಸೇರುತ್ತದೆ. ನಿಮ್ಮ ಬಳಿ ಇರೋ ಹಣವನ್ನು ಎಫ್‌ಡಿ ಮಾಡುವ ಮುನ್ನ ವಿವಿಧ ಬ್ಯಾಂಕುಗಳ ಇಂದಿನ ಬಡ್ಡಿದರ ಮತ್ತು ಒಂದು ವರ್ಷದ ನಂತರ ನಿಮಗೆ ಸಿಗಲಿರುವ ಲಾಭ ಎಷ್ಟು ಎಂದು ತಿಳಿದುಕೊಳ್ಳನ

ಕೇವಲ 0.10% ವ್ಯತ್ಯಾಸವೂ ದೊಡ್ಡ ಪರಿಣಾಮ ಬೀರುತ್ತೆ

ನಿಮ್ಮ ಬಳಿ ಇರುವ ₹5 ಲಕ್ಷ ರೂಪಾಯಿಗಳನ್ನು ಕೇವಲ ಒಂದು ವರ್ಷದ ಅವಧಿಗೆ ಸುರಕ್ಷಿತವಾಗಿ ಇಡಲು ಪ್ಲಾನ್ ಮಾಡುತ್ತಿದ್ದರೆ, ಹೂಡಿಕೆ ಮಾಡುವ ಮುನ್ನ ಬೇರೆ ಬೇರೆ ಬ್ಯಾಂಕುಗಳ ಬಡ್ಡಿದರಗಳನ್ನು (Interest Rates) ಹೋಲಿಕೆ ಮಾಡಿ ನೋಡುವುದು ಅತ್ಯಗತ್ಯ. ಏಕೆಂದರೆ ಬಡ್ಡಿದರದಲ್ಲಿ ಕಂಡುಬರುವ ಕೇವಲ ಶೇ. 0.10 ರಷ್ಟು ಸಣ್ಣ ವ್ಯತ್ಯಾಸವೂ ಸಹ ನಿಮ್ಮ ಮೆಚ್ಯೂರಿಟಿ ಅವಧಿ ಮುಗಿದ ನಂತರ ಕೈಗೆ ಸಿಗುವ ಒಟ್ಟು ಲಾಭದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ 7 ದಿನಗಳಿಂದ ಹಿಡಿದು 10 ವರ್ಷಗಳ ಅವಧಿಯವರೆಗೆ ಎಫ್‌ಡಿ ಇಡಲು ಅವಕಾಶವಿದ್ದು, ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ.ದೇಶದ ಪ್ರಮುಖ ಸರ್ಕಾರಿ, ಖಾಸಗಿ ಹಾಗೂ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳ ಒಂದು ವರ್ಷದ ಅವಧಿಯ ಎಫ್‌ಡಿ ಬಡ್ಡಿದರಗಳ ಸಂಪೂರ್ಣ ಹೋಲಿಕೆ ಇಲ್ಲಿದೆ:

ಸರ್ಕಾರಿ ಬ್ಯಾಂಕುಗಳು (Public Sector Banks)


ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 1 ವರ್ಷದ ಎಫ್‌ಡಿ ಮೇಲೆ ಸಿಗುವ ಬಡ್ಡಿದರಗಳು:

ಬ್ಯಾಂಕ್ ಆಫ್ ಇಂಡಿಯಾ (BOI): 6.50% ವಾರ್ಷಿಕ ಬಡ್ಡಿ

ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB): 6.50% ವಾರ್ಷಿಕ ಬಡ್ಡಿ

ಬ್ಯಾಂಕ್ ಆಫ್ ಮಹಾರಾಷ್ಟ್ರ: 6.40% ವಾರ್ಷಿಕ ಬಡ್ಡಿ

ಕೆನರಾ ಬ್ಯಾಂಕ್ / SBI / PNB / BOB: 6.25% ವಾರ್ಷಿಕ ಬಡ್ಡಿ

ಖಾಸಗಿ ಬ್ಯಾಂಕುಗಳು (Private Banks)

ಸರ್ಕಾರಿ ಬ್ಯಾಂಕುಗಳಿಗಿಂತ ಸ್ವಲ್ಪ ಹೆಚ್ಚಿನ ಲಾಭ ನೀಡುವ ಪ್ರಮುಖ ಖಾಸಗಿ ಬ್ಯಾಂಕುಗಳು:

ಎಸ್‌ಬಿಎಂ ಬ್ಯಾಂಕ್ ಇಂಡಿಯಾ (SBM): 7.10% ವಾರ್ಷಿಕ ಬಡ್ಡಿ

ಬಂಧನ್ ಬ್ಯಾಂಕ್ / ಆರ್‌ಬಿಎಲ್ (RBL): 7.00% ವಾರ್ಷಿಕ ಬಡ್ಡಿ

ಡಿಸಿಬಿ ಬ್ಯಾಂಕ್ (DCB): 6.90% ವಾರ್ಷಿಕ ಬಡ್ಡಿ

ಜಮ್ಮು ಅಂಡ್ ಕಾಶ್ಮೀರ ಬ್ಯಾಂಕ್ / ತಮಿಳುನಾಡು ಮರ್ಕೆಂಟೈಲ್: 6.80% ವಾರ್ಷಿಕ ಬಡ್ಡಿ

ಇಂಡಸ್ ಇಂಡ್ ಬ್ಯಾಂಕ್ (IndusInd): 6.75% ವಾರ್ಷಿಕ ಬಡ್ಡಿ

ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು (Small Finance Banks)

ಎಲ್ಲಕ್ಕಿಂತ ಗರಿಷ್ಠ ಮಟ್ಟದ ಬಡ್ಡಿ ಆದಾಯ ನೀಡುವ ಬ್ಯಾಂಕುಗಳು:

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.25% ವಾರ್ಷಿಕ ಬಡ್ಡಿ

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.25% ವಾರ್ಷಿಕ ಬಡ್ಡಿ

ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.10% ವಾರ್ಷಿಕ ಬಡ್ಡಿ

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.00% ವಾರ್ಷಿಕ ಬಡ್ಡಿ

ಗ್ರಾಹಕರು ಗಮನಿಸಬೇಕಾದ ಒಂದು ಅತ್ಯಂತ ಮುಖ್ಯವಾದ ಆರ್ಥಿಕ ಸೂತ್ರ (Financial Rule) ಇದೆ. ಕೇವಲ ಮಾರುಕಟ್ಟೆಯಲ್ಲಿ ಯಾವ ಬ್ಯಾಂಕ್ ಅತಿ ಹೆಚ್ಚು ಬಡ್ಡಿ ನೀಡುತ್ತದೆ ಎಂಬುದನ್ನು ಮಾತ್ರ ನೋಡಿ ತರಾತುರಿಯಲ್ಲಿ ಹಣವನ್ನು ಡೆಪಾಸಿಟ್ ಇಡಬೇಡಿ. ಹೂಡಿಕೆ ಮಾಡುವ ಮುನ್ನ ಆಯಾ ಬ್ಯಾಂಕಿನ ವಿಶ್ವಾಸಾರ್ಹತೆ, ಮಾರುಕಟ್ಟೆಯ ಇತಿಹಾಸ ಮತ್ತು ಅದರ ಆರ್ಥಿಕ ಸ್ಥಿರತೆ ಎಷ್ಟರಮಟ್ಟಿಗೆ ಗಟ್ಟಿಯಾಗಿದೆ ಎಂಬುದನ್ನು ಪಕ್ಕಾ ಕನ್ಫರ್ಮ್ ಮಾಡಿಕೊಳ್ಳುವುದು ನಿಮ್ಮ ಹಣದ ಸುರಕ್ಷತೆಗೆ ಅತ್ಯಂತ ಒಳ್ಳೆಯದು

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
Investment Tips : ತಿಂಗಳಿಗೆ ₹12,500 ಉಳಿತಾಯ ಮಾಡಿದರೆ ಸಾಕು ; 24 ವರ್ಷಗಳಲ್ಲಿ ₹1 ಕೋಟಿ ಗಳಿಸಬಹುದು.!ಸತತ 3 ಪಂದ್ಯದಲ್ಲೂ ಫ್ಲಾಪ್: ಯಪ್ಪಾ ಸಾಕ್ರಪ್ಪ.. ಆತನನ್ನು ಹೊರಹಾಕಿ ವೈಭವ್ ಸೂರ್ಯವಂಶಿ ಕಣಕ್ಕಿಳಿಸಿ ಎಂದು ಕಿಡಿಕಾರಿದ ನೆಟ್ಟಿಗರು!Indian Railway Rules : ರಾತ್ರಿ ವೇಳೆ ಟಿಕೆಟ್ ಇಲ್ಲದಿದ್ರೂ ಮಹಿಳೆಯರನ್ನು ರೈಲಿನಿಂದ ಕೆಳಗಿಳಿಸಲು ಸಾಧ್ಯವಿಲ್ಲ! ಈ ರೂಲ್ಸ್ ನಿಮಗೆ ಗೊತ್ತಾ..?ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯಬೇಬಿ ಕೇರ್ ಸೆಂಟರ್ ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ವಿಡಿಯೋ ವೈರಲ್: ಮೂವರು ಸಿಬ್ಬಂದಿಗೆ ನೋಟಿಸ್ ಜಾರಿಕೆಪಿಎಸ್‌ಸಿ ಅಧ್ಯಕ್ಷರಿಂದ ಅಧಿಕಾರ ದುರುಪಯೋಗದ ಗಂಭೀರ ಆರೋಪ; ತನಿಖೆ ನಡೆಸಬೇಕೆಂದು ಸಿಎಂಗೆ ಪತ್ರ ಬರೆದ ಜೋಶಿಹನಿಟ್ರ್ಯಾಪ್ ಮಾಡಿ ಸಹೋದ್ಯೋಗಿಯನ್ನೇ ಕಿಡ್ನ್ಯಾಪ್ ಮಾಡಿದ ದುರುಳರು: 8 ಆರೋಪಿಗಳು ಆರೆಸ್ಟ್1 ವರ್ಷದ FDಗೆ ₹5 ಲಕ್ಷ ಹೂಡಿಕೆ ಮಾಡ್ತೀರಾ? ಯಾವ ಬ್ಯಾಂಕ್ ಹೆಚ್ಚು ರಿಟರ್ನ್ಸ್ ಕೊಡುತ್ತದೆ ನೋಡಿಇನ್‌ಸ್ಟಾಮಾರ್ಟ್‌ಗೆ ಹೊಸ ಬಾಸ್: ನೂತನ ಮುಖ್ಯ ವಾಣಿಜ್ಯ ಅಧಿಕಾರಿಯಾಗಿ ಗೌತಮ್ ಸ್ವರೂಪ್ ನೇಮಕಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ನಿಂದ ಗುಡ್ ನ್ಯೂಸ್ ಡ್ಯಾಡ್ ಚಿತ್ರತಂಡದ ಭಾವುಕ ಪೋಸ್ಟ್ ವೈರಲ್