ಬೆಂಗಳೂರು: ಆಭರಣ ಪ್ರೇಮಿಗಳಿಗೆ ಮತ್ತು ಮದುವೆ ಶಾಪಿಂಗ್ ಮಾಡೋರಿಗೆ ಇದು ಬಂಪರ್ ಲಾಟರಿ, ಆದ್ರೆ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಬಿಗ್ ಶಾಕ್ ಜೂನ್ 16 ರಿಂದ ಆರಂಭವಾದ ಚಿನ್ನದ ಬೆಲೆಯ ಇಳಿಕೆ ಹಾದಿ, ಜೂನ್ 19ರ ಇಂದು ಅಕ್ಷರಶಃ ಪಾತಾಳಕ್ಕೆ ಕುಸಿದಿದೆ. ಕೇವಲ ಒಂದೇ ದಿನದಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹3,650 ಕಡಿತಗೊಂಡಿದ್ದರೆ, ಇತ್ತ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹10,000 ಇಳಿಕೆಯಾಗಿ ಮಾರ್ಕೆಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ
ಇಂದಿನ ಚಿನ್ನದ ರೇಟ್ (Gold Rate Today)
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜೂನ್ 19ರ ಶುಕ್ರವಾರದ ಇಂದಿನ ನಿಖರ ರೇಟ್ ಕಾರ್ಡ್ ಈ ಕೆಳಗಿನಂತಿದೆ:
24 ಕ್ಯಾರೆಟ್ ಶುದ್ಧ ಚಿನ್ನ (Pure Gold Rate):
1 ಗ್ರಾಂ ಬೆಲೆ: ₹365 ರಷ್ಟು ಭಾರಿ ಇಳಿಕೆ ಕಂಡು ಈಗ ₹14,586 ದಾಖಲಾಗಿದೆ.
10 ಗ್ರಾಂ ಬೆಲೆ: ಬರೋಬ್ಬರಿ ₹3,650 ಕುಸಿತ ಕಂಡು ಈಗ ₹1,45,860 ತಲುಪಿದೆ.
22 ಕ್ಯಾರೆಟ್ ಆಭರಣ ಚಿನ್ನ (Jewellery Gold Rate):
1 ಗ್ರಾಂ ಬೆಲೆ: ₹335 ಇಳಿಕೆಯಾಗಿದ್ದು, ಈಗ ₹13,370 ಆಗಿದೆ.
10 ಗ್ರಾಂ ಬೆಲೆ: ಒಟ್ಟಾರೆಯಾಗಿ ₹3,350 ಕಡಿತಗೊಂಡು ಈಗ ₹1,33,700 ಕ್ಕೆ ಬಂದು ನಿಂತಿದೆ.
ಬೆಳ್ಳಿ ಬೆಲೆ
ಬೆಳ್ಳಿ ಪ್ರೇಮಿಗಳಿಗಂತೂ ಇಂದು ಹಬ್ಬವೇ ಸರಿ ಒಂದೇ ದಿನಕ್ಕೆ ಕೆಜಿಗೆ ಬರೋಬ್ಬರಿ ₹10,000 ಇಳಿಕೆಯಾಗಿದೆ. ಸದ್ಯ ಮಾರ್ಕೆಟ್‌ನಲ್ಲಿ 1 ಗ್ರಾಂ ಬೆಳ್ಳಿಗೆ ₹250 ಇದ್ದು, 1 ಕೆಜಿ ಬೆಳ್ಳಿ ಬೆಲೆ ₹2,50,000 ದಾಖಲಾಗಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಈ ರೇಂಜ್‌ಗೆ ದಿಢೀರ್ ಕುಸಿಯಲು ಮಾರುಕಟ್ಟೆ ತಜ್ಞರು ಈ ಕೆಳಗಿನ ಪ್ರಮುಖ ಕಾರಣಗಳನ್ನು ನೀಡಿದ್ದಾರೆ:
ಷೇರುಪೇಟೆಯ ಅಬ್ಬರ: ಮುಂಬಯಿ ಷೇರುಪೇಟೆ (BSE/NSE) ಸತತ 4 ದಿನಗಳಿಂದ ಭರ್ಜರಿ ಏರುಗತಿಯಲ್ಲಿ ಮುನ್ನುಗ್ಗುತ್ತಿದೆ. ಜಾಗತಿಕ ಮಾರುಕಟ್ಟೆಗಳ ನಡೆ ಕೂಡ ಸಕಾರಾತ್ಮಕವಾಗಿದೆ.
ಹೂಡಿಕೆದಾರರ ಶಿಫ್ಟ್: ಇಕ್ವಿಟಿ ಮಾರುಕಟ್ಟೆ ಹೆಚ್ಚು ಲಾಭದಾಯಕ ಎಂದೆನಿಸಿದ್ದರಿಂದ ಹೂಡಿಕೆದಾರರು ಚಿನ್ನ, ಬೆಳ್ಳಿಯ ಮೇಲಿದ್ದ ತಮ್ಮ ಹೂಡಿಕೆಯನ್ನು ಹಿಂಪಡೆದು ಶೇರ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡುತ್ತಿದ್ದಾರೆ. ಇದರಿಂದಾಗಿ ಸತತ 4ನೇ ದಿನವೂ ಚಿನ್ನದ ಬೇಡಿಕೆ ಸಂಪೂರ್ಣ ಕುಸಿದಿದೆ.