LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’: 125 ಕೋಟಿ ರೂ. ಕಲೆಕ್ಷನ್

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಬಿಡುಗಡೆಯಾದ ಮೊದಲ ದಿನವೇ 125 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ‘ಧುರಂಧರ್ 2’ ಬಳಿಕ ಮೊದಲ ದಿನವೇ 100 ಕೋಟಿ ಗಳಿಸಿದ ಈ ವರ್ಷದ ಎರಡನೇ ಭಾರತೀಯ ಸಿನಿಮಾ ಟ್ಯಾಕ್ಸಿಕ್ ಆಗಿದೆ.

ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿರುವ ಟಾಕ್ಸಿಕ್ ವಿಶ್ವದಾದ್ಯಂತ 125 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಟ್ಯಾಕ್ಸಿಕ್ 90 ರಿಂದ 95 ಕೋಟಿ ರೂ. ಕಲೆಕ್ಷನ್ ಮಾಡಿದೆ. ಯಾವುದೇ ಪ್ರೀಮಿಯರ್ ಶೋ ,ಸೆಲೆಬ್ರಿಟಿ ಶೋಗಳಿಲ್ಲದೆ ಆರು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟಾಕ್ಸಿಕ್ ಕನ್ನಡ ಭಾಷೆಯಲ್ಲಿ 20 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ.

ಹಿಂದಿ ಭಾಷೆಯಲ್ಲಿ 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ತೆಲುಗು ಭಾಷೆಯಲ್ಲಿ 11 ಕೋಟಿ ರೂ,ಗೂ ಅಧಿಕ ಗಳಿಕೆ ಕಂಡಿದೆ. ‘ಧುರಂಧರ್ 2’ 140.6 ಕೋಟಿ ರೂ. ಗಳಿಕೆ ಮೂಲಕ ಮೊದಲ ದಿನವೇ ಅತ್ಯಧಿಕ ಗಳಿಕೆ ದಾಖಲಿಸಿದ್ದು, ಎರಡನೇ ಸ್ಥಾನದಲ್ಲಿ ‘ಟಾಕ್ಸಿಕ್’ 125 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡಿರುವ ಟಾಕ್ಸಿಕ್ ಗಳಿಕೆಯಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.

ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರದಲ್ಲಿ ಯಶ್, ನಯನತಾರ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
SHOCKING: ನೇಪಾಳದಲ್ಲಿ ಭೀಕರ ಪ್ರವಾಹಕ್ಕೆ ಕುಸಿದು ಬಿದ್ದ ಕಟ್ಟಡಗಳು, ಕೊಚ್ಚಿ ಹೋದ ಸೇತುವೆಗಳು ; ಭಯಾನಕ ವೀಡಿಯೋ ವೈರಲ್ |WATCH VIDEOಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಭಾರತ ಮಾನವೀಯ ನೆರವು: ಔಷಧ ಸಹಿತ 10 ಟನ್ ಪರಿಹಾರ ಸಾಮಗ್ರಿ ರವಾನೆ‘ಆಧಾರ್ ಕಾರ್ಡ್’ ಫೋಟೋವನ್ನು ಎಷ್ಟು ಬಾರಿ ಬದಲಾಯಿಸಬಹುದು..? ಕೇಂದ್ರದ ನಿಯಮಗಳೇನು ತಿಳಿಯಿರಿಮನಕಲಕುವ ಘಟನೆ : ತಮ್ಮನ ಮೃತದೇಹಕ್ಕೆ ರಾಖಿ ಕಟ್ಟಿದ ಅಕ್ಕ, ಕಣ್ಣೀರಿಟ್ಟ ಜನ.!SHOCKING: ಪಶ್ಚಿಮ ಬಂಗಾಳ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 10 ನವಜಾತ ಶಿಶುಗಳು ಸಾವುಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಯಶ್‌ ‘ಟಾಕ್ಸಿಕ್’; ಗಳಿಸಿದ್ದೆಷ್ಟು ಗೊತ್ತಾ?ನಕಲಿ ಸೌಂದರ್ಯವರ್ಧಕಗಳ ಹಾವಳಿ: ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ನಕಲಿ ಕಾಸ್ಮೆಟಿಕ್ಸ್ ವಿರುದ್ಧ FDA ಕಠಿಣ ಕ್ರಮBREAKING : ಬೆಂಗಳೂರಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ; ಪುನೀತ್ ಕೆರೆಹಳ್ಳಿ ಸೇರಿದಂತೆ ಮೂವರು ಅರೆಸ್ಟ್ಕರೆ ಮಾಡಿ ಕರೆಸಿಕೊಂಡು ವ್ಯಕ್ತಿಯ ಬರ್ಬರ ಹತ್ಯೆಕಾವೇರಿ ಕೊಳ್ಳದಲ್ಲಿ ವರ್ಷಧಾರೆ: ಜಲಾಶಯಗಳಿಗೆ ಭರಪೂರ ಒಳಹರಿವು