ಬೆಂಗಳೂರು: ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಮಾಡಲಾಗಿದೆ. ಸರಾಸರಿ ಶೇಕಡ 60ರಷ್ಟು ಹೆಚ್ಚಳ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯದ 81ಕ್ಕೂ ಹೆಚ್ಚು ಉದ್ಯೋಗ ವಲಯಗಳಲ್ಲಿರುವ ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇಕಡ 60ರಷ್ಟು ಹೆಚ್ಚಳ ಮಾಡಿ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಇದರಿಂದ ಒಂದು ಕೋಟಿಗೂ ಅಧಿಕ ಅಸಂಘಟಿತ, ನಿಗದಿತ ವಲಯದ ಕಾರ್ಮಿಕರಿಗೆ ಅನುಕೂಲವಾಗಲಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ವೈಜ್ಞಾನಿಕವಾಗಿ ವೇತನ ಪರಿಷ್ಕರಿಸಲಾಗಿದೆ. ಕಾರ್ಮಿಕ ವಲಯದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಇದೇ ಮೊದಲ ಬಾರಿಗೆ ಎಲ್ಲಾ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆ ಅಡಿ ತರಲಾಗಿದೆ. ವೇತನ ಲೆಕ್ಕಾಚಾರವನ್ನು ಸುಲಭವಾಗಿಸಲು 4 ವಲಯಗಳ ವರ್ಗೀಕರಣವನ್ನು 3 ವಲಯಗಳಿಗೆ ಪರಿಷ್ಕರಿಸಲಾಗಿದೆ.
ವಲಯ 3ರ ಕುಶಲರಹಿತ ಕಾರ್ಮಿಕರ ಕನಿಷ್ಠ ವೇತನ ಮಾಸಿಕ ವೇತನ 19,300 ರೂ.ಗೆ ನಿಗದಿಪಡಿಸಲಾಗಿದೆ. ವಲಯ 1ರ ಕೌಶಲ್ಯ ಕಾರ್ಮಿಕರ ಕನಿಷ್ಠ ವೇತನ 31,100 ರೂ.ಗೆ ನಿಗದಿಪಡಿಸಲಾಗಿದೆ.