LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡಿಕೆಶಿ ಡೀಲ್ ಕೊಟ್ಟಿದ್ದಾರೆ: HDK ಗಂಭೀರ ಆರೋಪ!

ಬೆಂಗಳೂರು: ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರ ಕುಟುಂಬವನ್ನು ಮುಗಿಸಲು ಹಾಲಿ ಮುಖ್ಯಮಂತ್ರಿ ₹600 ಕೋಟಿಯಷ್ಟು ಬೃಹತ್ ಮೊತ್ತದ ಡೀಲ್ ಕೊಟ್ಟಿರುವ ವಿಷಯದಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರು; ಒಂದು ಕುಟುಂಬವನ್ನು ಮುಗಿಸಲು ₹600 ಕೋಟಿ ಮೊತ್ತದ ಡೀಲ್ ಕೊಟ್ಡಿರುವ ವಿಚಾರದ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಉತ್ತರಿಸಿದರು.

ಅದು ಬೇರೆ ಯಾರೂ ಅಲ್ಲ. ಈಗಿನ ಮಹಾನ್ ಮುಖ್ಯಮಂತ್ರಿಗಳೇ ಒಂದು ಕುಟುಂಬವನ್ನು ಮುಗಿಸಲು ಹೇಳಿರುವುದು. ಅದು ದೇವೇಗೌಡರ ಕುಟುಂಬವೇ ಆಗಿದೆ. ನಮ್ಮ ಕುಟುಂಬವನ್ನು ಮುಗಿಲುಸಲು ಈ ಮುಖ್ಯಮಂತ್ರಿ ನಡೆಸಿರುವ ಕುತಂತ್ರ ಒಂದೆರಡಲ್ಲ. ಅನೇಕ ಕುತಂತ್ರಗಳನ್ನು ಅವರು ಮಾಡಿದ್ದು ಅದರಲ್ಲಿ ₹600 ಕೋಟಿ ಸುಫಾರಿ ಡೀಲ್ ಕೂಡ ಒಂದು. ಅವರು ಈ ಕೃತ್ಯ ಎಸಗಿದ್ದಾರೆ ಎಂಬುದರಲ್ಲಿ ಎರಡು ಮಾತೇ ಇಲ್ಲ. ಸಂಶಯವೇ ಇಲ್ಲ ಎಂದರು ಕೇಂದ್ರ ಸಚಿವರು.

ಅದರಿಂದಲೇ ಇದೆಲ್ಲವನ್ನು ತನಿಖೆ ಮಾಡಬೇಕು ಎಂದು ನಾನು ಹೇಳಿದ್ದು. ಸ್ಟಿಂಗ್ ಮಾಡಿದ ಪಾತಕಿಗಳನ್ನು ಬಂಧಿಸಿ ಎಂದರೆ ಅವರಿಗೆ ಸುರಕ್ಷಿತವಾಗಿ ನಿರೀಕ್ಷಣಾ ಸಿಗುವಂತೆ ಮಾಡಿ, ಅದಕ್ಕೆ ಸಂಬಂಧ ಇಲ್ಲದವರನ್ನು ಕಾಡುತ್ತಿದ್ದಾರೆ. ಇವರ ಪಾಪದ ಕೊಡ ತುಂಬಿದೆ. ಆ ಭಗವಂತನೇ ಇದೆಲ್ಲವನ್ನು ಹೊರಗೆ ತರುತ್ತಿದ್ದಾನೆ ಎಂದು ಅವರು ಹೇಳಿದರು.

ಕರ್ನಾಟಕ ದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳ ನಡುವೆ ಒಂದು ಸೂಕ್ಷ್ಮ ವಿಚಾರದ ತನಿಖೆ ನಡೆಯುತ್ತಿದೆ. ಇನ್ನೂ ಐದು ದಿನ ಸಮಯ ಕೊಡುತ್ತೇನೆ. ಏನು ಮಾಡುತ್ತಾರೋ ನೋಡೋಣ. ನಮ್ಮ ಯುವಕರು ಭಯಪಡುವುದು ಬೇಡ. ಅವರಿಗೆ ನಾನು ಹೇಳುವುದು ಇಷ್ಟೇ, ಪೊಲೀಸರ ತನಿಖೆಗೆ ಸಹಕರಿಸಿ. ಅವರು ಕರೆದಾಗ ಹೋಗಿ. ಕೇಳಿದ ಉಪಕರಣಗಳನ್ನು ಕೊಡಿ. ಆಗ ಇವರ ತನಿಖೆ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂದು ತಿಳಿಯುತ್ತಿದೆ. ನನಗೂ ಒಳಗೆ ಏನು ನಡೆಯುತ್ತಿದೆ ಎಂಬ ಮಾಹಿತಿ ಇದೆ. ಸಿದ್ದರಾಮಯ್ಯ ಅವರು ಹಾಗೂ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಕೂಡ ಗಮನಿಸಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಈ ತನಿಖೆಯ ಬಗ್ಗೆ ಸಿದ್ದರಾಮಯ್ಯ ಅವರಲ್ಲಿ ಕೂಡ ಅನುಮಾನ ಇದೆ. ಒಬ್ಬ ವ್ಯಕ್ತಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಈ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಬಗ್ಗೆ ಅಸಲಿ ಅಪರಾಧಿಗಳನ್ನು ಹಿಡಿಯಬೇಕಲ್ಲವೇ? ಮೂಲವನ್ನು ಹುಡುಕುವುದು ಬಿಟ್ಟು ಇವರು ಬಲವನ್ನು ಬಡಿಯುತ್ತಾ ಕೂತಿದ್ದಾರೆ ಎಂದು ಕೇಂದ್ರ ಸಚಿವರು ಟೀಕಿಸಿದರು.

ವಿಕ್ಕಿ ಸಾವು ಮುಚ್ಚಿ ಹಾಕಲು ಸರಕಾರ, ಪೊಲೀಸರು ಶಾಮೀಲು

ವಿಕಾಸ್ (ವಿಕ್ಕಿ) ಅನುಮಾಸ್ಪದ ಸಾವಿನ ಬಗ್ಗೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸ್ಟಿಂಗ್ ಮಾಡಿದ ಆ ವ್ಯಕ್ತಿಯ ಸಂಸ್ಥೆಯಲ್ಲಿ ಆಗಿರುವ ಘಟನೆ ಬಗ್ಗೆ ಗೃಹ ಸಚಿವರು ದಾಖಲೆ ಕೇಳುತ್ತಾರೆ. ಲಿಫ್ಟ್ ಬಿದ್ದು ಈ ಸಾವು ಆಗಿದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಸರಿಯಾದ ತನಿಖೆ ನಡೆಸದೆ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕುವುದರಲ್ಲಿ ಸರಕಾರ ಸೇರಿ ಪೊಲೀಸರು ಕೂಡ ಶಾಮೀಲಾಗಿದ್ದಾರೆ ಎಂದು ಸಚಿವರು ಗಂಭೀರ ಆರೋಪ ಮಾಡಿದರು.

ಸ್ಟಿಂಗ್ ಪಿನ್ ನಡೆಸುತ್ತಿರುವ ಮಾಧ್ಯಮ ಸಂಸ್ಥೆಯಲ್ಲಿ ಅನೇಕ ಅಕ್ರಮಗಳು, ಅಪರಾಧಗಳು ನಡೆದಿವೆ. ಎಷ್ಟೋ ಕೊಲೆಗಳು ಕೂಡ ಆಗಿವೆ. ಕೋಲಾರ ಬಳಿ ಒಬ್ಬ ಡ್ರೈವರ್ ಕೊಲೆ ಆಗಿದೆ. ಆ ಆ ಪ್ರಕರಣದ ಮಾಹಿತಿಗಳು ನನಗೆ ಬರುತ್ತಿವೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಅಂತಹ ಕೊಲೆಗಡಕರನ್ನು ರಾಜವಾದ ಶಿವಾಜಿ ತಿರುಗಾಡಲು ಬಿಟ್ಟು ನಮ್ಮ ಹುಡುಗರ ಬೆನ್ನು ಬಿದ್ದಿದ್ದಾರೆ. ಅವರನ್ನು ತನಿಖೆ ಮಾಡಿ, ನಮ್ಮ ಹುಡುಗರನ್ನು ಕೂಡ ತನಿಖೆ ಮಾಡಿ. ಏನಿದೆಯೋ ಎಲ್ಲಾ ಹೊರಗೆ ಬರಲಿ. ನಾನೇ ಸ್ಟಿಂಗ್ ಮಾಡಿದ್ದು, ಏನೀಗ? ನಾನು ಕಿಂಗ್ ಆಫ್ ಸ್ಟಿಂಗ್! ಎಂದು ಕೊಚ್ಚಿಕೊಂಡ ಕಿಡಿಗೇಡಿಯನ್ನು ಹಾಗೆಯೇ ಬಿಟ್ಟಿದ್ದೀರಿ! ಯಾಕೆ? ಎಂದು ಸಚಿವರು ಪ್ರಶ್ನಿಸಿದರು.

ಯತೀಂದ್ರ ಅವರು ಏನು ಹೇಳಿದ್ದಾರೆ ಎಂಬುದನ್ನು ಗೃಹ ಮಂತ್ರಿ ಕೇಳಿಲ್ಲವೇ? ಸಿದ್ದರಾಮಯ್ಯ ಅವರು ಹೇಳಿದ್ದನ್ನು ಕೂಡ ಅವರು ಕೇಳಿರಬೇಕಲ್ಲವೇ? ಕಾಂಗ್ರೆಸ್ ಪಕ್ಷದ ನಾಯಕಿ ಒಬ್ಬರು ಸ್ಟಿಂಗ್ ನಲ್ಲಿ ಇದ್ದಾರೆ ಎಂದು ಅವರು ಹೇಳಿಲ್ಲವೇ? ಇಷ್ಟೆಲ್ಲಾ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು ಸ್ಟಿಂಗ್ ಆಪರೇಷನ್ ವೀಡಿಯೊಗಳನ್ನು ನೋಡಿರುವುದಿಲ್ಲವೇ? ಹಾಗಾದರೆ ಅವರು ಯಾರನ್ನು, ಯಾರ ಒತ್ತಡ, ಆದೇಶದ ಮೇರೆಗೆ ರಕ್ಷಣೆ ಮಾಡುತ್ತಿದ್ದಾರೆ? ಎಂಬುದನ್ನು ಹೇಳಬೇಕಲ್ಲವೇ? ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಈಗ ನಿರೀಕ್ಷಣಾ ಜಾಮೀನು ತೆಗೆದುಕೊಂಡಿದಾರೆ ಒಬ್ಬರು. ಅವರಿಗೆ ನಿರೀಕ್ಷಣಾ ಜಾಮೀನು ಸಿಗದ ರೀತಿಯಲ್ಲಿ ಪೋಲೀಸ್ ಇಲಾಖೆ ಏನಾದರೂ ಪ್ರಯತ್ನ ಪಟ್ಟಿದ್ದಾರಾ? ನಾನು ಯಾರನ್ನು ಹೆದರಿಸಲು ಈ ಮಾತನ್ನು ಹೇಳುತ್ತಿಲ್ಲ. ಪ್ರಾಮಾಣಿಕವಾಗಿ ತನಿಖೆ ಮಾಡಿ ಎಂದಷ್ಟೇ ಹೇಳುತ್ತಿದ್ದೇನೆ. ನಾನು ಮುಂದಿನ ಐದು ದಿನಗಳ ಕಾಲ ನವದೆಹಲಿಗೆ ತೆರಳುತ್ತಿದ್ದೇನೆ. ಈ ಸರಕಾರಕ್ಕೆ ಐದು ದಿನ ಸಮಯ ಕೊಡುತ್ತೇನೆ. ನೋಡೋಣ ಯಾವ ರೀತಿ ತನಿಖೆ ಮಾಡುತ್ತಾರೆ ಎಂದು ಸಚಿವರು ಹೇಳಿದರು.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಬೇಕು ಅಂತ ನಾನು ಹೇಳಿದ್ದಲ್ಲ. ಅವರು ಹಿರಿಯರು ಇದ್ದಾರೆ. ಅಗತ್ಯಬಿದ್ದರೆ ಭೇಟಿ ಮಾಡುತ್ತೇನೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನವರೇ ಸೇರಿಕೊಂಡು ಮುಗಿಸಲು ಹೊರಟಿದ್ದಾರೆ. ಅದೆಲ್ಲ ತನಿಖೆ ಆಗಲಿ. ನಮ್ಮ ಕಾರ್ಯಕರ್ತರು ಕೈಗೆ ಸಿಗದಂತೆ ತಪ್ಪಿಸಿಕೊಂಡಿದ್ದಾರೆ ಎಂದು ಮೀಡಿಯಾದಲ್ಲಿ ವರದಿಯಾಗಿದೆ. ಯಾರೂ ತಪ್ಪಿಸಿಕೊಳ್ಳುವ ಪ್ರಶ್ನೆ ಇಲ್ಲ. ಬಂದು ನಿಮ್ಮನ್ನು ಭೇಟಿ ಮಾಡುತ್ತಾರೆ. ತನಿಖೆಯನ್ನು ಹಳ್ಳ  ಹಿಡಿಸಲು ಪ್ರಯತ್ನ ಮಾಡ್ತಿದ್ದಾರೆ. ನಮ್ಮ ವಾರ್ ರೂಂ ನಲ್ಲಿ ಕೆಲಸ ಮಾಡುವ ಹುಡುಗರಿಗೆ ಹೇಳಿದ್ದೇನೆ. ಯಾರು ಕೂಡ ಹೆದರುವ ಅಗತ್ಯ ಇಲ್ಲ ಎಂದರು ಕೇಂದ್ರ ಸಚಿವರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆಉತ್ತರ ಪ್ರದೇಶದಲ್ಲಿ ಮೂರನೇ ಅವಧಿಗಾಗಿ ಬಿಜೆಪಿಯ ತಂತ್ರ: ಕಲ್ಯಾಣ ಯೋಜನೆ, ಮಹಿಳಾ ಮತ ಮತ್ತು ಯೋಗಿ ವರ್ಚಸ್ಸಿನ ಮೇಲೆ ಭರವಸೆಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಟಾಪ್ 5 ಕಂಪನಿಗಳು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ!