LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬರ ನಿರ್ವಹಣೆಗೆ ಕೆರೆಗಳ ಕಾಯಕಲ್ಪ: 7 ಜಿಲ್ಲೆಗಳ 500 ಕೆರೆಗಳ ಅಭಿವೃದ್ಧಿಗೆ 150 ಕೋಟಿ ಡಿಪಿಆರ್ ಸಿದ್ಧ - ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಗ್ರಾಮೀಣ ಭಾಗದಲ್ಲಿ ಅಂತರ್ಜಲ ವೃದ್ಧಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ 7 ಜಿಲ್ಲೆಗಳ ಬರೋಬ್ಬರಿ 500 ಕೆರೆಗಳಿಗೆ ಪುನಶ್ಚೇತನ ನೀಡಲು ಸರ್ಕಾರ ಮುಂದಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ 150 ಕೋಟಿ ರೂಪಾಯಿ ವೆಚ್ಚದ ವಿಸ್ತೃತ ಯೋಜನಾ ವರದಿ (DPR) ಸಿದ್ಧವಾಗಿದ್ದು, ಕಾಲಮಿತಿಯೊಳಗೆ ಕಾಮಗಾರಿ ಮುಗಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (CEO) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

​ವಿಕಾಸಸೌಧದಲ್ಲಿ ಜಿಲ್ಲಾ ಪಂಚಾಯತ್ ಸಿಇಓಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಬರ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದ ಸಚಿವರು, ಈ ಕೆರೆ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡುವಂತೆ ನಿರ್ದೇಶಿಸಿದರು.

​ಹಿಂಗಾರು ಮಳೆಗೆ ಮುನ್ನವೇ ಹೂಳೆತ್ತಲು ಸುವರ್ಣಾವಕಾಶ

​ಪ್ರಸ್ತುತ ಮಳೆಯ ಕೊರತೆಯಿಂದ ಬಹುತೇಕ ಕೆರೆಗಳು ಸಂಪೂರ್ಣ ಒಣಗಿಹೋಗಿವೆ. ಇದುವೇ ಕೆರೆಗಳ ಅಭಿವೃದ್ಧಿಗೆ ಸೂಕ್ತ ಕಾಲವಾಗಿದ್ದು, ಹಿಂಗಾರು ಆರಂಭವಾಗುವ ಮುನ್ನವೇ ಯುದ್ಧೋಪಾದಿಯಲ್ಲಿ ಕೆಲಸ ಆರಂಭಿಸಬೇಕು. ಕೆರೆಗಳಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವುದು, ಒಡೆದುಹೋಗಿರುವ ಏರಿಗಳ ದುರಸ್ತಿ ಮತ್ತು ಎತ್ತರಿಸುವುದು, ನೀರು ಹರಿದುಬರುವ ರಾಜಕಾಲುವೆ/ನಾಲೆಗಳ ದುರಸ್ತಿ ಹಾಗೂ ಕೆರೆಗಳ ಸುತ್ತ ಸೌಂದರ್ಯೀಕರಣ ಕಾಮಗಾರಿಗಳನ್ನು ವಿಬಿಜಿ ರಾಮ್ ಜಿ ಹಾಗೂ ವಿಶ್ವಬ್ಯಾಂಕ್ ನೆರವಿನಡಿ ತಕ್ಷಣ ಕೈಗೆತ್ತಿಕೊಳ್ಳಬೇಕು. ಇದರಿಂದ ಹಿಂಗಾರಿನಲ್ಲಿ ಬೀಳುವ ಮಳೆ ನೀರು ಸಂಗ್ರಹವಾಗಿ, ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಸಚಿವರು ವಿವರಿಸಿದರು.

​ಯಾವ ಜಿಲ್ಲೆಯಲ್ಲಿ ಎಷ್ಟು ಕೆರೆಗಳ ಪುನರುಜ್ಜೀವನ?

  • ​ತುಮಕೂರು: 96 ಕೆರೆಗಳು
  • ​ಚಿಕ್ಕಬಳ್ಳಾಪುರ: 90 ಕೆರೆಗಳು
  • ​ಕೋಲಾರ: 86 ಕೆರೆಗಳು
  • ​ಬೆಂಗಳೂರು ಗ್ರಾಮಾಂತರ: 68 ಕೆರೆಗಳು
  • ​ಬೆಂಗಳೂರು ನಗರ: 67 ಕೆರೆಗಳು
  • ​ಕಲಬುರಗಿ: 49 ಕೆರೆಗಳು
  • ​ಬೀದರ್: 44 ಕೆರೆಗಳು (ಒಟ್ಟು 500 ಕೆರೆಗಳು, ಇದರಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ 135 ಕೆರೆಗಳೂ ಸೇರಿವೆ).

​ಕಲುಷಿತ ನೀರು ಪೂರೈಸಿದರೆ ಅಧಿಕಾರಿಗಳೇ ಹೊಣೆ

​ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿರುವುದನ್ನು ಪಿಡಿಒ ಮತ್ತು ಸಿಇಒಗಳು ಖುದ್ದು ಖಾತರಿಪಡಿಸಿಕೊಳ್ಳಬೇಕು. ನೀರನ್ನು ಕಾಲಕಾಲಕ್ಕೆ ಲ್ಯಾಬ್ ಪರೀಕ್ಷೆಗೆ ಒಳಪಡಿಸಬೇಕು. ಎಲ್ಲಾದರೂ ಕಲುಷಿತ ನೀರು ಪೂರೈಕೆಯ ದೂರುಗಳು ಕೇಳಿಬಂದರೆ, ಜಲಮೂಲದಿಂದ ಹಿಡಿದು ಜನರ ಮನೆ ಬಾಗಿಲಿನ ನಲ್ಲಿಯವರೆಗೆ ತಪಾಸಣೆ ನಡೆಸಿ, ಎಲ್ಲೂ ಒಳಚರಂಡಿ ಅಥವಾ ತ್ಯಾಜ್ಯ ನೀರು ಮಿಶ್ರಣವಾಗದಂತೆ ಎಚ್ಚರವಹಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

​ಉದ್ಯೋಗ ಖಾತ್ರಿ ಚುರುಕುಗೊಳಿಸಿ: 15 ದಿನಗಳಲ್ಲಿ ಕೂಲಿ ಪಾವತಿಗೆ ಗಡುವು

  • ​ಗುಳೆ ಹೋಗುವುದಕ್ಕೆ ಬ್ರೇಕ್: ಬೆಂಗಳೂರು, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ಮಾನವ ದಿನಗಳ ಸೃಜನೆ ಕಡಿಮೆಯಿದೆ. ಈಗ ರಾಜ್ಯ ವಸತಿ ಯೋಜನೆಗಳನ್ನೂ ಉದ್ಯೋಗ ಖಾತ್ರಿ ವ್ಯಾಪ್ತಿಗೆ ತಂದಿರುವುದರಿಂದ ನಗರ ಹಾಗೂ ಪಟ್ಟಣ ಭಾಗಗಳಲ್ಲೂ ಹೇರಳ ಉದ್ಯೋಗಾವಕಾಶವಿದೆ. ಸ್ಥಳೀಯರಿಗೆ ಉದ್ಯೋಗ ನೀಡಿ ಜನರು ಊರು ಬಿಟ್ಟು ವಲಸೆ ಹೋಗುವುದನ್ನು ತಪ್ಪಿಸಬೇಕು.
  • ​ವಿಳಂಬವಿಲ್ಲದೆ ವೇತನ: ಕೆಲಸ ಮಾಡಿದ ಕಾರ್ಮಿಕರಿಗೆ ತಿಂಗಳುಗಟ್ಟಲೆ ವೇತನ ಬಾಕಿ ಉಳಿಸಿಕೊಂಡರೆ ಯೋಜನೆಯ ಉದ್ದೇಶವೇ ಹಾಳಾಗುತ್ತದೆ. ಕೆಲಸ ಮುಗಿದ 15 ದಿನಗಳ ಒಳಗಾಗಿ ಕಾರ್ಮಿಕರ ಖಾತೆಗೆ ಕೂಲಿ ಹಣ ಜಮೆಯಾಗಬೇಕು. ಈ ನಿಟ್ಟಿನಲ್ಲಿ ಪಿಡಿಒ ಹಾಗೂ ಖಜಾನೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸಿಇಒಗಳಿಗೆ ತಾಕೀತು ಮಾಡಿದರು.

​ಈ ಮಹತ್ವದ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳ ಜಿ.ಪಂ. ಸಿಇಒಗಳು ಭಾಗವಹಿಸಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆ