LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬರಗಾಲದ ಕರಿಛಾಯೆ: ಕಲ್ಯಾಣ ಕರ್ನಾಟಕದಲ್ಲಿ ಕುಸಿದ ಭತ್ತದ ನಾಟಿ : ಕ್ವಿಂಟಾಲ್‌ ಅಕ್ಕಿಗೆ 8,200 ರೂ. |

ಬಳ್ಳಾರಿ : ರಾಜ್ಯಾದ್ಯಂತ ತಲೆದೂರಿರುವ ತೀವ್ರ ಬರಗಾಲ ಮತ್ತು ಮಳೆಯ ಕೊರತೆಯು ಕೃಷಿ ಕ್ಷೇತ್ರವನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಅದರಲ್ಲೂ ಭತ್ತದ ಕಣಜವೆಂದೇ ಹೆಸರಾಗಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿತ್ತನೆ ಗುರಿ ಸಂಪೂರ್ಣವಾಗಿ ಕುಸಿದಿದ್ದು, ಇದರ ನೇರ ಪರಿಣಾಮವಾಗಿ ಇತಿಹಾಸದಲ್ಲೇ ಕಾಣದ ರೀತಿಯಲ್ಲಿ ಭತ್ತ ಹಾಗೂ ಅಕ್ಕಿಯ ಬೆಲೆ ಗಗನಕ್ಕೇರಿದೆ. ಸದ್ಯ ಮಾರುಕಟ್ಟೆಯಲ್ಲಿ ಆರ್‌ಎನ್‌ಆರ್ ಸೋನಾ ಭತ್ತದ ಬೆಲೆ ಕ್ವಿಂಟಾಲ್‌ಗೆ 5,300 ರೂ.ಗೆ ಜಿಗಿದಿದ್ದರೆ, ಉತ್ತಮ ಗುಣಮಟ್ಟದ ಅಕ್ಕಿಯ ದರವು 8,200 ರೂ. ತಲುಪಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಹಾಗೂ ಕೊಪ್ಪಳ ತಾಲೂಕಿನ ಗಂಗಾವತಿ ಪ್ರದೇಶಗಳಲ್ಲಿ ಈ ಬಾರಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಪ್ರಕ್ರಿಯೆ ಗಣನೀಯವಾಗಿ ಕುಸಿದಿದೆ. ತುಂಗಭದ್ರಾ ಜಲಾಶಯದ ಕಾಲುವೆಗಳ ಕಡೇ ಭಾಗಕ್ಕೆ ನೀರು ಹರಿಯದ ಕಾರಣ, ಆರಂಭದಲ್ಲಿ ಹಾಕಿಕೊಳ್ಳಲಾಗಿದ್ದ 98 ಸಾವಿರ ಹೆಕ್ಟೇರ್ ನಾಟಿ ಗುರಿಯು ಕೇವಲ 44 ಸಾವಿರ ಹೆಕ್ಟೇರ್‌ಗೆ ಸೀಮಿತಗೊಂಡಿದೆ. ಮುಂಬರುವ ದಿನಗಳಲ್ಲಿ ಉಳಿದ ಜಮೀನುಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ದೊರೆಯದಿದ್ದರೆ ರೈತರಿಗೆ ನಿರೀಕ್ಷಿತ ಫಸಲು ಕೈಸೇರುವುದು ಅತ್ಯಂತ ದುಸ್ತರವಾಗಲಿದೆ.

ಈ ಪ್ರದೇಶದ ರೈತರು ಪ್ರಮುಖವಾಗಿ ಆರ್‌ಎನ್‌ಆರ್ ಮತ್ತು ಕಾವೇರಿ ಸೋನಾ ತಳಿಗಳನ್ನು ನೆಟ್ಟಿದ್ದು, ಮಾರುಕಟ್ಟೆಯಲ್ಲಿ ಇವುಗಳಿಗೆ ಅಭೂತಪೂರ್ವ ಬೇಡಿಕೆ ಸೃಷ್ಟಿಯಾಗಿದೆ. ಪ್ರಸ್ತುತ ಆರ್‌ಎನ್‌ಆರ್ ಸೋನಾ ಕ್ವಿಂಟಾಲ್‌ಗೆ 5,300 ರೂ. ಹಾಗೂ ಕಾವೇರಿ ತಳಿ 5,100 ರೂ. ದರದಲ್ಲಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಬೆಲೆ ಕೇವಲ 2,000 ರೂ. ಇತ್ತು. ವಿಶೇಷವೆಂದರೆ, ಕಟಾವಿಗೆ ಇನ್ನೂ ಒಂದೂವರೆ ತಿಂಗಳಿಗೂ ಹೆಚ್ಚಿನ ಕಾಲವಿರುವುದರಿಂದ ಬೆಲೆಯು ಕ್ವಿಂಟಾಲ್‌ಗೆ 10,000 ರೂ. ತಲುಪಬಹುದು ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಯಲ್ಲಿ ಬೆಲೆ 5,000 ರೂ. ದಾಟಿದ್ದರಿಂದ ಸರ್ಕಾರಿ ಖರೀದಿ ಕೇಂದ್ರಗಳನ್ನು ತೆರೆಯುವ ಅಗತ್ಯವಿಲ್ಲ ಎಂದು ಕೃಷಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಒಂದೆಡೆ ಬರಗಾಲದ ಹೊಡೆತದಿಂದ ರೈತರಿಗೆ ನಿರೀಕ್ಷಿತ ಫಸಲು ಸಿಗದೆ ಆರ್ಥಿಕ ಸಂಕಷ್ಟ ಎದುರಾಗಿದ್ದರೆ, ಮತ್ತೊಂದೆಡೆ ಅಕ್ಕಿ ಬೆಲೆ ಏರಿಕೆಯು ಸಾಮಾನ್ಯ ಜನರ ಬದುಕಿಗೆ ಗಂಭೀರ ಹೊರೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿ ಕೆಜಿಗೆ 85 ರಿಂದ 100 ರೂ. ವರೆಗೆ ಮಾರಾಟವಾಗುತ್ತಿದ್ದು, 26 ಕೆಜಿ ಬ್ಯಾಗ್‌ಗೆ 2,200 ರಿಂದ 2,600 ರೂ. ವರೆಗೆ ಪಡೆಯಲಾಗುತ್ತಿದೆ. ಭತ್ತದ ಬೆಲೆ ಮತ್ತಷ್ಟು ಹೆಚ್ಚಳವಾಗುತ್ತಿರುವುದರಿಂದ ಗ್ರಾಹಕರಿಗೆ ದರ ಏರಿಕೆಯ ಬಿಸಿ ತೀವ್ರವಾಗಿ ತಟ್ಟಲಿದ್ದು, ಸರ್ಕಾರದ ಕಡೆಯಿಂದ ವಿಶೇಷ ಮಾರುಕಟ್ಟೆ ನಿಯಂತ್ರಣ ಕ್ರಮಗಳು ಮತ್ತು ತುರ್ತು ಮುಂಜಾಗ್ರತಾ ಹೆಜ್ಜೆಗಳ ಅಗತ್ಯವಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆಉತ್ತರ ಪ್ರದೇಶದಲ್ಲಿ ಮೂರನೇ ಅವಧಿಗಾಗಿ ಬಿಜೆಪಿಯ ತಂತ್ರ: ಕಲ್ಯಾಣ ಯೋಜನೆ, ಮಹಿಳಾ ಮತ ಮತ್ತು ಯೋಗಿ ವರ್ಚಸ್ಸಿನ ಮೇಲೆ ಭರವಸೆಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಟಾಪ್ 5 ಕಂಪನಿಗಳು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ!