ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಇದೀಗ 80s ರೆಟ್ರೋ ಲುಕ್‌ನದ್ದೇ ಹಾವಳಿ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಸಾಮಾನ್ಯ ಫೋಟೋಗಳನ್ನು AI ಬಳಸಿ 1980ರ ದಶಕದ ಸ್ಟೈಲ್‌ಗೆ ಬದಲಾಯಿಸಿ, ರೆಟ್ರೋ ಅವತಾರದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿಭಿನ್ನ ಕೇಶವಿನ್ಯಾಸ, ವಿಂಟೇಜ್ ಉಡುಗೆ ಹಾಗೂ ಹಳೆಯ ಸಿನಿಮಾಗಳ ಫೀಲ್ ನೀಡುವ ಈ ಫೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಹೊಸ ಟ್ರೆಂಡ್ ಸೃಷ್ಟಿಸಿವೆ.
ಸೋಶಿಯಲ್ ಮೀಡಿಯಾದಲ್ಲಿ ಇದೀಗ 1980ರ ದಶಕದ ರೆಟ್ರೋ ಲುಕ್‌ನ AI ಫೋಟೋಗಳು ಭಾರೀ ವೈರಲ್ ಆಗುತ್ತಿವೆ. ಸಾಮಾನ್ಯ ಫೋಟೋಗಳನ್ನು ChatGPT ಸಹಾಯದಿಂದ 80ರ ದಶಕದ ಸಿನಿಮಾ ಸ್ಟೈಲ್, ಫ್ಯಾಷನ್ ಮತ್ತು ಹಳೆಯ ಕಾಲದ ಫೋಟೋಗ್ರಫಿ ಲುಕ್‌ಗೆ ಪರಿವರ್ತಿಸಲಾಗುತ್ತಿದೆ.
ಈ ಟ್ರೆಂಡ್‌ನಲ್ಲಿ ಬಳಕೆದಾರರ ಮುಖದ ಪ್ರಮುಖ ಲಕ್ಷಣಗಳನ್ನು ಉಳಿಸಿಕೊಂಡು, ಕೇಶವಿನ್ಯಾಸ, ಬಟ್ಟೆ, ಆಭರಣ, ಹಿನ್ನೆಲೆ, ಬೆಳಕು ಮತ್ತು ಫೋಟೋದ ಟೆಕ್ಸ್ಚರ್ ಅನ್ನು 1980ರ ಶೈಲಿಗೆ ಬದಲಿಸಲಾಗುತ್ತದೆ. ಹಳೆಯ ಸಿನಿಮಾಗಳ ಪೋಸ್ಟರ್ ಅಥವಾ ಮ್ಯಾಗಜಿನ್ ಕವರ್‌ಗಳಲ್ಲಿರುವಂತೆ ಸಾಫ್ಟ್ ಫೋಕಸ್, ಫಿಲ್ಮ್ ಗ್ರೇನ್ ಮತ್ತು ವಿಂಟೇಜ್ ಬಣ್ಣಗಳನ್ನು ಕೂಡ ಸೇರಿಸಲಾಗುತ್ತದೆ.
ಸೆಲೆಬ್ರಿಟಿಗಳಿಗೂ 80s ಕ್ರೇಜ್
ಈ AI ಟ್ರೆಂಡ್‌ಗೆ ಹಲವು ಸೆಲೆಬ್ರಿಟಿಗಳು ಕೂಡ ಕೈಜೋಡಿಸಿದ್ದಾರೆ. ನಟಿಯರಾದ ತಮನ್ನಾ ಭಾಟಿಯಾ, ದೀಪಿಕಾ, ಲಿನ್ ಲೈಶ್ರಾಮ್ ಮತ್ತು ಅನಿತಾ ಹಸನಂದಾನಿ ಸೇರಿದಂತೆ ಹಲವರು ತಮ್ಮ ರೆಟ್ರೋ ಅವತಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಹಾಲಿವುಡ್‌ನಲ್ಲೂ ಈ ಟ್ರೆಂಡ್ ಜೋರಾಗಿದ್ದು, ಟಾಮ್ ಕ್ರೂಸ್, ಬ್ರಾಡ್ ಪಿಟ್ ಮತ್ತು ಲಿಯೊನಾರ್ಡೊ ಡಿಕ್ಯಾಪ್ರಿಯೊ ಅವರನ್ನು 80ರ ದಶಕದ ಆಕ್ಷನ್ ಹೀರೋಗಳಂತೆ AI ಮೂಲಕ ಮರುಕಲ್ಪನೆ ಮಾಡಲಾಗಿದೆ.
ಮಲಯಾಳಂ ಚಿತ್ರರಂಗದ ದಿಲೀಪ್ ಮತ್ತು ಕಾವ್ಯಾ ಮಾಧವನ್ ಕೂಡ ಈ ರೆಟ್ರೋ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ AI ಫೋಟೋಗಳಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಳೆಯ ಕಾಲದ ನೆನಪು ಮತ್ತೆ ಜೀವಂತ
AI ಮೂಲಕ ಸೃಷ್ಟಿಯಾಗುತ್ತಿರುವ ಈ ಚಿತ್ರಗಳು ಕೇವಲ ಫೋಟೋ ಎಡಿಟಿಂಗ್ ಟ್ರೆಂಡ್ ಆಗಿರದೆ, 80ರ ದಶಕದ ಫ್ಯಾಷನ್ ಮತ್ತು ಸಿನಿಮಾ ಸಂಸ್ಕೃತಿಯ ನೆನಪುಗಳನ್ನು ಮತ್ತೆ ಜೀವಂತಗೊಳಿಸುತ್ತಿವೆ. ತಮ್ಮ ನೆಚ್ಚಿನ ನಟ-ನಟಿಯರನ್ನು ಹಳೆಯ ಕಾಲದ ಲುಕ್‌ನಲ್ಲಿ ನೋಡಿ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ChatGPT ಮೂಲಕ 80s ರೆಟ್ರೋ ಫೋಟೋ ಮಾಡುವುದು ಹೇಗೆ?
-
ChatGPT ತೆರೆಯಿರಿ.
-
ನಿಮ್ಮ ಸ್ಪಷ್ಟವಾದ ಫೋಟೋವನ್ನು ಅಪ್‌ಲೋಡ್ ಮಾಡಿ.
-
ಫೋಟೋವನ್ನು 1980ರ ದಶಕದ ರೆಟ್ರೋ ಸ್ಟೈಲ್‌ನಲ್ಲಿ ಪರಿವರ್ತಿಸುವಂತೆ Prompt ನೀಡಿ.
-
80s ಫ್ಯಾಷನ್, ಹಳೆಯ ಸಿನಿಮಾ ಲುಕ್, ವಿಂಟೇಜ್ ಸ್ಟುಡಿಯೋ ಬ್ಯಾಕ್‌ಗ್ರೌಂಡ್, ಫಿಲ್ಮ್ ಗ್ರೇನ್, ಸಾಫ್ಟ್ ಲೈಟಿಂಗ್ ಮುಂತಾದ ವಿವರಗಳನ್ನು Promptನಲ್ಲಿ ಸೇರಿಸಿ.
-
ಬೇಕಾದ ಬದಲಾವಣೆಗಳನ್ನು ಮತ್ತೆ ಸೂಚಿಸಿ ಫೋಟೋವನ್ನು ಎಡಿಟ್ ಮಾಡಿಸಬಹುದು.
ಉದಾಹರಣೆ Prompt:
“ಈ ಫೋಟೋದಲ್ಲಿರುವ ವ್ಯಕ್ತಿಯ ಮುಖದ ವೈಶಿಷ್ಟ್ಯಗಳನ್ನು ಸಾಧ್ಯವಾದಷ್ಟು ಹಾಗೆಯೇ ಉಳಿಸಿಕೊಂಡು, 1980ರ ದಶಕದ ಭಾರತೀಯ ಸಿನಿಮಾ ಸ್ಟೈಲ್‌ನಲ್ಲಿ ರೆಟ್ರೋ ಫೋಟೋವನ್ನಾಗಿ ಪರಿವರ್ತಿಸಿ. 80s ಫ್ಯಾಷನ್, ಕ್ಲಾಸಿಕ್ ಹೇರ್‌ಸ್ಟೈಲ್, ವಿಂಟೇಜ್ ಸ್ಟುಡಿಯೋ ಹಿನ್ನೆಲೆ, ಸಾಫ್ಟ್ ಲೈಟಿಂಗ್ ಮತ್ತು ಹಳೆಯ ಫಿಲ್ಮ್ ಗ್ರೇನ್ ಎಫೆಕ್ಟ್ ಸೇರಿಸಿ.”ಈ ಹೊಸ ಟ್ರೆಂಡ್‌ಗೆ ಸೆಲೆಬ್ರಿಟಿಗಳು ಸೇರಿದಂತೆ ಹಲವರು ಕೈಜೋಡಿಸಿದ್ದು, ತಮ್ಮ 80s ಅವತಾರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮಾಜಿ ಇಂಗ್ಲೆಂಡ್ ನಾಯಕ ನಾಸಿರ್ ಹುಸೇನ್, ಸಹ ಆಟಗಾರರಾದ ಸ್ಟುವರ್ಟ್ ಬ್ರಾಡ್ ಮತ್ತು ಇಯಾನ್ ಮಾರ್ಗನ್ ಅವರ AI ಮೂಲಕ ಸೃಷ್ಟಿಸಲಾದ 1980ರ ದಶಕದ ಲುಕ್‌ಗಳಿಗೆ ನೀಡಿದ ಹಾಸ್ಯಭರಿತ ಹಾಗೂ ಮುಕ್ತ ಪ್ರತಿಕ್ರಿಯೆಗಳು ಇದೀಗ ವೈರಲ್ ಆಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ 80ರ ದಶಕದ AI ಟ್ರೆಂಡ್‌ನಲ್ಲಿ ಕ್ರಿಕೆಟಿಗರೂ ಭಾಗಿಯಾಗಿದ್ದಾರೆ.
https://www.instagram.com/stuartbroad/p/DdEI1qejIoE/