LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG BREAKING: ಬೆಂಗಳೂರಲ್ಲಿ 'ನಕಲಿ ಔಷಧಿ ಜಾಲ'ಕ್ಕೆ 'FDA ಸರ್ಜಿಕಲ್ ಸ್ಟ್ರೈಕ್': 16 ಫಾರ್ಮಸಿ ಲೈಸೆನ್ಸ್ ರದ್ದು!

ಬೆಂಗಳೂರು: ರಾಜ್ಯದಲ್ಲಿ ನಕಲಿ ಜೀವರಕ್ಷಕ ಔಷಧಿಗಳ ಮರು-ಪ್ಯಾಕಿಂಗ್ ಮತ್ತು ಮರು-ಲೇಬಲಿಂಗ್ ಮಾಡುತ್ತಿದ್ದ ಅಂತರರಾಜ್ಯ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ (ಎಫ್‌ಡಿಎ) ಔಷಧ ಜಾರಿ ವಿಭಾಗದ ಅಧಿಕಾರಿಗಳು ಭೇದಿಸಿದ್ದಾರೆ.

ಬಿಡದಿ ಸಮೀಪದ ಕುರುಬರಕೇರನಹಳ್ಳಿಯ ಫಾರ್ಮ್‌ಹೌಸ್ ಒಂದರ ಮೇಲೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ ₹5,05,49,575 (ಐದು ಕೋಟಿ ಐದು ಲಕ್ಷದ ನಲವತ್ತೊಂಬತ್ತು ಸಾವಿರದ ಐದು ನೂರ ಎಪ್ಪತ್ತೈದು ರೂಪಾಯಿ) ಮೌಲ್ಯದ ನಕಲಿ ಔಷಧಿಗಳು ಹಾಗೂ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಡಿಮೆ ಬೆಲೆಯ ಔಷಧಕ್ಕೆ ಎಂಎನ್‌ಸಿ ಕಂಪನಿಗಳ ನಕಲಿ ಲೇಬಲ್

ಆರೋಪಿಗಳು ಹೊರರಾಜ್ಯಗಳಿಂದ ತೀರಾ ಕಡಿಮೆ ಬೆಲೆಯ ಔಷಧಗಳನ್ನು ತರಿಸಿಕೊಂಡು, ಹೊಸ ವಯಲ್ಸ್‌ಗಳಲ್ಲಿ ತುಂಬಿಸಿ 'ಫೈಜರ್' (Pfizer) ನಂತಹ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳ ದುಬಾರಿ ಜೀವರಕ್ಷಕ ಆ್ಯಂಟಿಬಯೋಟಿಕ್ ಹೆಸರಿನಲ್ಲಿ ನಕಲಿ ಲೇಬಲ್ ಹಾಗೂ ಸೀಲ್‌ಗಳನ್ನು ಅಂಟಿಸುತ್ತಿದ್ದರು. ಸಾರ್ವಜನಿಕರನ್ನು ಯಾಮಾರಿಸಲು ಇವರು ಬಳಸುತ್ತಿದ್ದ ಲೇಬಲ್‌ಗಳಲ್ಲಿದ್ದ ಕ್ಯೂಆರ್/ಬಾರ್ ಕೋಡ್‌ಗಳು ನಿಷ್ಕ್ರಿಯವಾಗಿದ್ದವು. ಜತೆಗೆ, ದಾಳಿ ವೇಳೆ ಅವಧಿ ಮುಗಿದ (Expired) ಔಷಧಿಗಳೂ ಪತ್ತೆಯಾಗಿದ್ದು, ಅವುಗಳನ್ನೂ ಮರುಬಳಕೆಗೆ ತರಲು ಯತ್ನಿಸಲಾಗಿತ್ತು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

ಜೀವಾವಧಿ ಶಿಕ್ಷೆಯ ಎಚ್ಚರಿಕೆ: ಬ್ಯಾಚ್‌ಗಳು ಬ್ಲಾಕ್

ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940ರ ಸೆಕ್ಷನ್ 17B (ನಕಲಿ ಔಷಧಿ ತಯಾರಿ ಮತ್ತು ಮಾರಾಟ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 27ರ ಪ್ರಕಾರ ಈ ಅಪರಾಧಕ್ಕೆ ಕನಿಷ್ಠ 10 ವರ್ಷದಿಂದ ಹಿಡಿದು ಜೀವಾವಧಿ ಸಜೆ ಹಾಗೂ ಭಾರಿ ದಂಡ ವಿಧಿಸಲು ಅವಕಾಶವಿದೆ. ಜಪ್ತಿ ಮಾಡಲಾದ ದಾಸ್ತಾನನ್ನು ಬೆಂಗಳೂರು ದಕ್ಷಿಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಮಾದರಿಗಳನ್ನು ಸರ್ಕಾರಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಸಾರ್ವಜನಿಕರಿಗೆ ಮಾರಾಟವಾಗುವುದನ್ನು ತಡೆಯಲು ಎಫ್‌ಡಿಎ ಪೋರ್ಟಲ್‌ನಲ್ಲಿ ಈ ಬ್ಯಾಚ್ ಸಂಖ್ಯೆಗಳನ್ನು ತಕ್ಷಣವೇ ಬ್ಲಾಕ್ ಮಾಡಲಾಗಿದೆ.

ವಶಪಡಿಸಿಕೊಂಡ ₹5.05 ಕೋಟಿ ಮೌಲ್ಯದ ಪ್ರಮುಖ ಸ್ವತ್ತುಗಳು:

  • ಸೆಫಿಯಾವಿಜೆಂಟ್ 2.5 ಇಂಜೆಕ್ಷನ್ (CEFIAVIGENT 2.5): 5,640 ವಯಲ್ಸ್ – ₹3,38,34,360

  • ಹಿಜ್ಲಾಮ್ ಇಂಜೆಕ್ಟೇಬಲ್ಸ್ (HIZLAM): 1,531 ವಯಲ್ಸ್ – ₹52,24,537

  • ಅವಧಿ ಮುಗಿದ ಔಷಧಿಗಳು (Expired Drugs): 30 ಬಾಕ್ಸ್ – ₹35,00,000

  • ಝಾವಿಟಾಜ್ ಇಂಜೆಕ್ಷನ್ (Xavitaz): 470 ವಯಲ್ಸ್ – ₹27,49,500

  • ಎಂಬ್ಲಾವಿಯೋ (EMBLAVEO - Pfizer): 264 ವಯಲ್ಸ್ – ₹20,59,200

  • ಝವಿಸೆಫ್ಟಾ ಇಂಜೆಕ್ಷನ್ (Zavicefta): 165 ವಯಲ್ಸ್ – ₹5,45,490

  • ಟಿಜಿಂಟ್ ಐವಿ (TIGYNT IV) ಹಾಗೂ ಟಿಗ್ವ್‌ನೆಟ್ (Tigvnet): ತಲಾ 44 ವಯಲ್ಸ್ – ಒಟ್ಟು ₹4,13,798

  • ಅಜ್ಟ್ರಿಯೋ (Aztreo 190 ವಯಲ್ಸ್): ₹1,48,960 ಮತ್ತು ಟ್ರೆಜಾಮ್ (Trezam 50 ವಯಲ್ಸ್): ₹1,00,000

  • ಯಂತ್ರೋಪಕರಣ ಹಾಗೂ ಸಾಮಗ್ರಿಗಳು: ಇಂಜೆಕ್ಷನ್ ಫಿಲ್ಲಿಂಗ್ ಯಂತ್ರ (₹7,00,000), ನಕಲಿ ಲೇಬಲ್/ಸ್ಟ್ಯಾಂಪ್ (₹14,00,000) ಹಾಗೂ ಪ್ಯಾಕಿಂಗ್ ಸಾಮಗ್ರಿಗಳು (₹75,000).

16 ಮಳಿಗೆಗಳ ಪರವಾನಗಿ ರದ್ದು, ನೆಲಮಂಗಲ ಫೈಜರ್ ಸಿ&ಎಫ್ ಸೇರಿ 8 ಅಮಾನತು

ಈ ಜಾಲದ ಮೂಲಕ ಅಕ್ರಮ ವಹಿವಾಟು ನಡೆಸುತ್ತಿದ್ದ ಒಟ್ಟು 24 ಸಂಸ್ಥೆಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ:

ಪರವಾನಗಿ ರದ್ದಾದ 16 ಸಂಸ್ಥೆಗಳು:

  1. ಅವೆಸ್ಕೊ ಹೆಲ್ತ್‌ಕೇರ್ (ಪ್ರಭಾಕರ್ ರೆಡ್ಡಿ ಲೇಔಟ್, ಬೆಂಗಳೂರು)

  2. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ (ಇಬ್ರಾಹಿಂ ಸಾಹಿಬ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಬೆಂಗಳೂರು)

  3. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ (ರೆಹೇಜಾ ಚೇಂಬರ್ಸ್, ಮ್ಯೂಸಿಯಂ ರಸ್ತೆ, ಬೆಂಗಳೂರು)

  4. ಪಟೇಲ್ ಮೆಡಿ ಟ್ರೇಡ್ (ಗುಬ್ಬಲಾಳ, ಬೆಂಗಳೂರು)

  5. ರಾಜರಾಜೇಶ್ವರಿ ಫಾರ್ಮಾ (ಆರ್‌ಆರ್ ನಗರ, ಬೆಂಗಳೂರು)

  6. ಎನ್.ಎಸ್. ಫಾರ್ಮಾ (ಹೊಸೂರು, ಹುಬ್ಬಳ್ಳಿ)

  7. ಸೂರ್ಯ ಸ್ಪೆಷಾಲಿಟಿ ಫಾರ್ಮಾ (ಕುಮಾರಸ್ವಾಮಿ ಲೇಔಟ್, ಬೆಂಗಳೂರು)

  8. ಎಸ್‌ಡಬ್ಲ್ಯೂಎಸ್ ಫಾರ್ಮಾ (ಕೆ.ಜಿ. ಹಳ್ಳಿ, ಬೆಂಗಳೂರು)

  9. ಕೃಪಾ ಹೆಲ್ತ್‌ಕೇರ್ (ಮಿನರ್ವ ಸರ್ಕಲ್, ಲಾಲ್‌ಬಾಗ್ ಫೋರ್ಟ್ ರೋಡ್, ಬೆಂಗಳೂರು)

  10. ಸೇಂಟ್ ಫಿಲೋಮಿನಾ ಹಾಸ್ಪಿಟಲ್ ಡ್ರಗ್ ಸೆಂಟರ್ (ವಿವೇಕನಗರ, ಬೆಂಗಳೂರು)

  11. ಸಾಗರ್ ಫಾರ್ಮಾ - ಸಾಗರ್ ಹೆಲ್ತ್‌ಕೇರ್ (ಕುಮಾರಸ್ವಾಮಿ ಲೇಔಟ್, ಬೆಂಗಳೂರು)

  12. ಝೈಮಸ್ ಫಾರ್ಮಾ (ಕನಕಪುರ ಮುಖ್ಯರಸ್ತೆ, ರಘುವನಹಳ್ಳಿ, ಬೆಂಗಳೂರು)

  13. ಫಾರ್ಚೂನ್ ಮೆಡಿಕಲ್ ಸೊಲ್ಯೂಷನ್ಸ್ (ಬಿಎಸ್‌ಕೆ 3ನೇ ಹಂತ, ಬೆಂಗಳೂರು)

  14. ಎಕ್ಸೆಲ್‌ಕೇರ್ ಫಾರ್ಮಾ (ಬಿಎಸ್‌ಕೆ 2ನೇ ಹಂತ, ಬೆಂಗಳೂರು)

  15. ಪಟೇಲ್ ಮೆಡಿಕಲ್ಸ್ (ಪದ್ಮನಾಭನಗರ, ಬೆಂಗಳೂರು)

  16. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ (ಚಾಮರಾಜಪೇಟೆ, ಬೆಂಗಳೂರು).

ಪರವಾನಗಿ ಅಮಾನತುಗೊಂಡ 8 ಸಂಸ್ಥೆಗಳು:

  1. ಮೆಡ್ ಫಾರ್ಮಾ (ದೊಡ್ಡಕಮ್ಮನಹಳ್ಳಿ, ಬೆಂಗಳೂರು)

  2. ಸೂರ್ಯ ಸ್ಪೆಷಾಲಿಟಿ ಹಾಸ್ಪಿಟಲ್ (ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಬೆಂಗಳೂರು)

  3. ಸಾಗರ್ ಫಾರ್ಮಾ - ಯೂನಿಟ್ 2, ಸಾಗರ್ ಹಾಸ್ಪಿಟಲ್ (ತಿಲಕನಗರ, ಬೆಂಗಳೂರು)

  4. ವಿವಾಂತ ಫಾರ್ಮಾಸ್ಯುಟಿಕಲ್ಸ್ (ಜಯನಗರ 9ನೇ ಬ್ಲಾಕ್, ಬೆಂಗಳೂರು)

  5. ಮಾರುತಿ ಮೆಡಿಕಲ್ಸ್ (ವಿಜಯನಗರ, ಬೆಂಗಳೂರು)

  6. ವಿವಾ ಫಾರ್ಮಾ (ಕ್ಲಬ್ ರಸ್ತೆ, ಬೆಳಗಾವಿ)

  7. ಹೈ-5 ಫಾರ್ಮಾ (ಕೆ.ಜಿ. ಹಳ್ಳಿ, ಬೆಂಗಳೂರು)

  8. ಫೈಜರ್ ಲಿಮಿಟೆಡ್ ಸಿ&ಎಫ್ ವೇರ್‌ಹೌಸ್ (ಕೆಂಪನಲಿಂಗನಹಳ್ಳಿ, ನೆಲಮಂಗಲ, ಬೆಂಗಳೂರು ಗ್ರಾಮಾಂತರ).

ಸಾರ್ವಜನಿಕರಿಗೆ ಎಚ್ಚರಿಕೆ

ರೋಗಿಗಳು ಮತ್ತು ಸಾರ್ವಜನಿಕರು ಜೀವರಕ್ಷಕ ಔಷಧಗಳನ್ನು ಮಾನ್ಯತೆ ಪಡೆದ ಪರವಾನಗಿ ಮಳಿಗೆಗಳಿಂದಲೇ ಅಧಿಕೃತ ತೆರಿಗೆ ಬಿಲ್ ಪಡೆದು ಖರೀದಿಸಬೇಕು. ಔಷಧಿ ಪ್ಯಾಕಿಂಗ್‌ನಲ್ಲಿ ಯಾವುದೇ ಸಂಶಯ ಕಂಡುಬಂದಲ್ಲಿ ಅಥವಾ ಲೇಬಲ್ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಆಗದಿದ್ದರೆ ಕೂಡಲೇ ಔಷಧ ನಿಯಂತ್ರಣ ಇಲಾಖೆಯ ಗಮನಕ್ಕೆ ತರುವಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆ.24ರಂದು ಸಿಎಂ ಡಿಕೆ ಶಿವಕುಮಾರ್ ಗಂಗಾಪೂಜೆ: ಚಿತ್ರದುರ್ಗದಲ್ಲಿ ಸಿದ್ಧತೆ ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿ, ಟಿ.ರಘುಮೂರ್ತಿBIG NEWS: 'KSRP ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ' ಸುಗಮ: ಒಎಂಅರ್ ಪ್ರತಿ ವೆಬ್ ಸೈಟ್ ಗೆ 'KEA ಅಪ್ ಲೋಡ್'BIG BREAKING: ಬೆಂಗಳೂರಲ್ಲಿ 'ನಕಲಿ ಔಷಧಿ ಜಾಲ'ಕ್ಕೆ 'FDA ಸರ್ಜಿಕಲ್ ಸ್ಟ್ರೈಕ್': 16 ಫಾರ್ಮಸಿ ಲೈಸೆನ್ಸ್ ರದ್ದು!ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಮದ್ದೂರು ಗಣೇಶೋತ್ಸವ: ಕೇಸರಿ ಶಾಲು ಧರಿಸಿ ಮಸೀದಿ ಮುಂದೆ ಪೂಜೆಪ್ರಜಾಸೇವೆ ಆಂದೋಲನ : ಕೆಲವು ಅರ್ಜಿಗಳಿಗೆ ಸ್ಥಳದಲ್ಲೆ ಪರಿಹಾರ: ಮದ್ದೂರು ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ಮದ್ದೂರು ನಗರದ ಕೊಲ್ಲಿ ವೃತ್ತದಲ್ಲಿ ಶ್ರೀ ಜಗಜ್ಯೋತಿ ಬಸವಣ್ಣನವರ ಪ್ರತಿಮೆ ನಿರ್ಮಾಣ: ಮದ್ದೂರು ಶಾಸಕ ಕೆ.ಎಂ.ಉದಯ್ಬರ, ಕಸ್ತೂರಿ ರಂಗನ್ ವರದಿ ಚರ್ಚೆಗೆ ವಿಶೇಷ ಅಧಿವೇಶನ: ವಿಪಕ್ಷಗಳ ಸಹಕಾರ ಕೋರಿದ ಸಚಿವ ಎನ್. ಚಲುವರಾಯಸ್ವಾಮಿSHOCKING: ಮದುವೆ ಆಗಲು ಹುಡುಗಿ ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆBREAKING: ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: ವ್ಯಕ್ತಿಯ ಮೇಲೆ ಎರಡು ಸುತ್ತು ಫೈರಿಂಗ್, ಆರೋಪಿ ಪರಾರಿರೈತರ ಹಿತರಕ್ಷಣೆಗೆ ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಸೂಕ್ತ ನಿರ್ಣಯ ಅಂಗೀಕಾರ: ಸಿಎಂ