LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : ಸಾರ್ವಜನಿಕರೇ ಗಮನಿಸಿ ; ನಾಳೆಯಿಂದ ಬದಲಾಗಲಿದೆ ಈ 10 ಪ್ರಮುಖ ನಿಯಮಗಳು |New Rules From July 1

ಜೂನ್ ತಿಂಗಳು ಇಂದಿಗೆ ಅಂತ್ಯವಾಗಿದ್ದು, ನಾಳೆಯಿಂದ ಜುಲೈ ತಿಂಗಳು ಆರಂಭವಾಗಲಿದೆ. ಇದೇ ವೇಳೆ ಜುಲೈ 1ರಿಂದ ದೇಶಾದ್ಯಂತ ಹಲವು ಪ್ರಮುಖ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ದೈನಂದಿನ ಜೀವನ ಹಾಗೂ ಆರ್ಥಿಕ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಎಲ್‌ಪಿಜಿ, ಆಧಾರ್, ರೈಲ್ವೆ, ಆದಾಯ ತೆರಿಗೆ, ಕ್ರೆಡಿಟ್ ಕಾರ್ಡ್, ಪಾಸ್‌ಪೋರ್ಟ್ ಸೇವೆಗಳು, ಪೆಟ್ರೋಲ್-ಡೀಸೆಲ್, ವಾಹನಗಳ ಬೆಲೆ ಹಾಗೂ EPFO ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಒಟ್ಟಾರೆ, ಜುಲೈ 1ರಿಂದ ಜಾರಿಗೆ ಬರುವ ಈ 10 ಪ್ರಮುಖ ಬದಲಾವಣೆಗಳು ನಿಮ್ಮ ಜೇಬಿನ ಮೇಲೂ ಪರಿಣಾಮ ಬೀರಬಹುದು.

1. ಎಲ್‌ಪಿಜಿ ನಿಯಮಗಳಲ್ಲಿ ಬದಲಾವಣೆ

ಎಲ್‌ಪಿಜಿ ಮತ್ತು ಪಿಎನ್‌ಜಿ ಎರಡೂ ಸಂಪರ್ಕಗಳನ್ನು ಹೊಂದಿರುವವರು ತಮ್ಮ ಎಲ್‌ಪಿಜಿ ಸಂಪರ್ಕವನ್ನು ರದ್ದುಪಡಿಸಲು ಕೇಂದ್ರ ಸರ್ಕಾರ 90 ದಿನಗಳ ಗಡುವು ನೀಡಿತ್ತು. ಈ ಗಡುವು ಜೂನ್ 30ಕ್ಕೆ ಅಂತ್ಯಗೊಳ್ಳುತ್ತದೆ. ಹೀಗಾಗಿ ಜುಲೈ 1ರಿಂದ ನಿಯಮ ಪಾಲಿಸದವರಿಗೆ ಹೊಸ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್‌ನಲ್ಲಿ ತೊಂದರೆ ಎದುರಾಗಬಹುದು. ಜೊತೆಗೆ, KYC ಪೂರ್ಣಗೊಳಿಸದವರಿಗೂ ಗ್ಯಾಸ್ ಪಡೆಯಲು ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಈ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯೂ ಇದೆ.

2. ಎಲ್‌ಪಿಜಿ ಬೆಲೆ ಇಳಿಕೆಯಾಗುವ ಸಾಧ್ಯತೆ

ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ವಾಣಿಜ್ಯ ಹಾಗೂ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿತ್ತು. ಈಗ ಯುದ್ಧ ಪರಿಸ್ಥಿತಿ ಶಾಂತವಾಗಿದ್ದು, ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಕಚ್ಚಾ ತೈಲ ಸರಬರಾಜು ಸುಗಮವಾಗಿರುವುದರಿಂದ ಎಲ್‌ಪಿಜಿ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಸರ್ಕಾರ ನಿರೀಕ್ಷಿಸಿದೆ.

3. ಆಧಾರ್ ಕಾರ್ಡ್ ಅಪ್‌ಡೇಟ್

UIDAI ಈ ತಿಂಗಳಿಂದ ಆಧಾರ್ ಅಪ್‌ಡೇಟ್‌ಗೆ ಹೊಸ ಸೇವೆ ಆರಂಭಿಸಿದೆ. ಜುಲೈ 1ರಿಂದ ಆಧಾರ್ ಆ್ಯಪ್ ಮೂಲಕ ನಿಮ್ಮ ಇ-ಮೇಲ್ ವಿಳಾಸವನ್ನು ಉಚಿತವಾಗಿ ನವೀಕರಿಸಬಹುದು. ಈ ಹಿಂದೆ ಇದಕ್ಕಾಗಿ ₹75 ಶುಲ್ಕ ವಿಧಿಸಲಾಗುತ್ತಿತ್ತು.

4. ರೈಲ್ವೆ ನಿಯಮಗಳಲ್ಲಿ ಕಠಿಣ ಕ್ರಮ

ಜುಲೈ 1ರಿಂದ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರಿಗಾಗಿ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವ ಪ್ರಸ್ತಾವನೆಗೆ ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ವಿಧಿಸುವ ದಂಡ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ರೈಲ್ವೆ ನಿಲ್ದಾಣಗಳಲ್ಲಿ ಶಿಸ್ತು ಕಾಪಾಡಲು ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ.

5. ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಗಡುವು

2025-26 ಹಣಕಾಸು ವರ್ಷದ ITR-1 ಮತ್ತು ITR-2 ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2026 ಆಗಿದೆ. ಈ ಗಡುವಿನೊಳಗೆ ರಿಟರ್ನ್ ಸಲ್ಲಿಸದಿದ್ದರೆ ದಂಡ ಸೇರಿದಂತೆ ಕೆಲವು ತೆರಿಗೆ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ.

6. ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ

ವಿದೇಶಾಂಗ ಸಚಿವಾಲಯ ಜುಲೈ 1ರಿಂದ ಸಾಮಾನ್ಯ ಹಾಗೂ ತುರ್ತು ಪಾಸ್‌ಪೋರ್ಟ್ ಸೇವೆಗಳ ಶುಲ್ಕವನ್ನು ಹೆಚ್ಚಿಸಿದೆ. ಹೀಗಾಗಿ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರಿಗೆ ಹಿಂದಿಗಿಂತ ಹೆಚ್ಚು ಶುಲ್ಕ ಪಾವತಿಸಬೇಕಾಗಬಹುದು.

7. ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ

ಆಯ್ದ PhonePe SBI ಕ್ರೆಡಿಟ್ ಕಾರ್ಡ್‌ಗಳಿಗೆ SBI Cards ರಿವಾರ್ಡ್ ಪಾಯಿಂಟ್‌ಗಳ ನಿಯಮಗಳನ್ನು ಪರಿಷ್ಕರಿಸಿದೆ. ಹೊಸ ಮಿತಿಗಳು ಹಾಗೂ ಕೆಲವು ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳು ಲಭ್ಯವಿರುವುದಿಲ್ಲ.

ಇದೇ ವೇಳೆ, HDFC ಕ್ರೆಡಿಟ್ ಕಾರ್ಡ್ ಹೊಂದಿರುವವರು ಹಿಂದಿನ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ಕನಿಷ್ಠ ₹60,000 ಖರ್ಚು ಮಾಡಿದರೆ, ಪ್ರತಿ ತ್ರೈಮಾಸಿಕದಲ್ಲಿ ಮೂರು ಬಾರಿ ಉಚಿತ ದೇಶೀಯ ವಿಮಾನ ನಿಲ್ದಾಣ ಲೌಂಜ್ ಪ್ರವೇಶ ಸೌಲಭ್ಯ ಪಡೆಯಬಹುದು.

8. ಕಾರುಗಳ ಬೆಲೆ ಏರಿಕೆ

ಕಿಯಾ ಸೇರಿದಂತೆ ಕೆಲವು ವಾಹನ ತಯಾರಿಕಾ ಕಂಪನಿಗಳು ಜುಲೈ ತಿಂಗಳಿಂದ ವಾಹನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿವೆ. ಕಿಯಾ ಸುಮಾರು 2% ಹಾಗೂ ಟಾಟಾ ಮೋಟಾರ್ಸ್ ತನ್ನ ICE ಮತ್ತು EV ಮಾದರಿಗಳ ಬೆಲೆಯನ್ನು 1.5% ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.

9. ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ನಿಯಮಗಳಲ್ಲಿ ಬದಲಾವಣೆ

ಜುಲೈ 1ರಿಂದ ದೊಡ್ಡ ವಾಣಿಜ್ಯ ಬಳಕೆದಾರರು ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಂದ ಇಂಧನ ಖರೀದಿಸುವುದಕ್ಕೆ ಇದ್ದ ತಾತ್ಕಾಲಿಕ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ಹೀಗಾಗಿ ಸಾರಿಗೆ ಸಂಸ್ಥೆಗಳು, ಕಾರ್ಖಾನೆಗಳು ಹಾಗೂ ಕೈಗಾರಿಕೆಗಳು ಹಿಂದಿನಂತೆ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಬಹುದು.

10. EPFO 3.0 ಅಪ್‌ಡೇಟ್

ಕೇಂದ್ರ ಸರ್ಕಾರ EPFO 3.0 ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ EPFO ವೆಬ್‌ಸೈಟ್‌ನ ಹಲವು ಸೇವೆಗಳನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. EPFO 3.0 ಜಾರಿಯಾದರೆ, PF ಸದಸ್ಯರು UPI ಹಾಗೂ ATM ಮೂಲಕವೂ ತಮ್ಮ PF ಹಣವನ್ನು ಹಿಂಪಡೆಯುವ ಸೌಲಭ್ಯ ಪಡೆಯುವ ಸಾಧ್ಯತೆ ಇದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ