LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS: ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ಕೋರಿದ ವಿಜಯ್

ನವದೆಹಲಿ: ಸರ್ಕಾರ ರಚನೆಗೆ ನಟ, ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್ ಕಾಂಗ್ರೆಸ್ ಬೆಂಬಲ ಕೋರಿದ್ದಾರೆ ಎಂದು ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಜನಾದೇಶವು ಜಾತ್ಯಾತೀತ ಸರ್ಕಾರಕ್ಕೆ ಹಾಗೂ ಸಂವಿಧಾನವನ್ನು ಅಕ್ಷರಶಃ ರಕ್ಷಿಸಲು ಬದ್ಧವಾಗಿದೆ ಎಂಬುದು ಸ್ಪಷ್ಟವಾಗಿದೆ. ಸರ್ಕಾರ ರಚನೆಯಿಂದ ಬಿಜೆಪಿಯನ್ನು ದೂರವಿಡಲು ದೃಢ ನಿಶ್ಚಯ ಹೊಂದಿದ್ದೇವೆ. ಅದರಂತೆ ಚುನಾವಣೆ ತೀರ್ಪಿನಲ್ಲಿ ಪ್ರತಿಫಲಿಸುವ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಟಿವಿಕೆ ಮುಖ್ಯಸ್ಥ ವಿಜಯ್ ಅವರ ಮನವಿಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ವರಿಷ್ಠರು ತಮಿಳುನಾಡು ಕಾಂಗ್ರೆಸ್ ಕಮಿಟಿಗೆ ನಿರ್ದೇಶನ ನೀಡಿದ್ದಾರೆ ಎಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯ ಬಳಿಕ ವೇಣುಗೋಪಾಲ್ ಹೇಳಿದ್ದಾರೆ.

ನಾಳೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸಾಧ್ಯತೆ

ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದಿಂದ ಸರ್ಕಾರ ರಚನೆಯಾಗಲಿದ್ದು, ನಾಳೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ತಮಿಳುನಾಡು ಮುಖ್ಯಮಂತ್ರಿಯ ಪ್ರತಿಜ್ಞಾವಿಧಿ ಸ್ವೀಕಾರಕ್ಕೆ ಸಮಯ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ.

ಇಂದು ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರಳೇಕರ್ ಚೆನ್ನೈಗೆ ಆಗಮಿಸಲಿದ್ದಾರೆ. ತಮಿಳುನಾಡಿನ ಪ್ರಭಾರ ರಾಜ್ಯಪಾಲರಾಗಿರುವ ರಾಜೇಂದ್ರ ಅರಳೇಕರ್ ಚೆನ್ನೈಗೆ ಆಗಮಿಸಲಿದ್ದು, ನಾಳೆ ವಿಜಯ್ ಗೆ ಪ್ರಮಾಣ ವಚನ ಬೋಧಿಸುವ ಸಾಧ್ಯತೆ ಇದೆ. ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ವಿಜಯ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯ ಸಂಪರ್ಕದಲ್ಲಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಣ ಡಬಲ್ ಆಗುವ ಅವಕಾಶ ! ಸರ್ಕಾರದ ಈ ಉಳಿತಾಯ ಯೋಜನೆಗಳ ಬಗ್ಗೆ ನಿಮಗೆ ಗೊತ್ತೇ?8.86 ಎಕರೆ ಭೂ ಹಗರಣ ಪ್ರಕರಣ: ಹೇಮಂತ್ ಸೊರೆನ್‌ಗೆ ಹೈಕೋರ್ಟ್‌ನಲ್ಲೂ ತಡೆ ಇಲ್ಲ; PMLA ವಿಚಾರಣೆ ಮುಂದುವರಿಕೆಸಂಸತ್ತೇ ಸುಪ್ರೀಂ, ಕಸ್ತೂರಿ ರಂಗನ್ ವರದಿ ತಿದ್ದುಪಡಿ ಮಾಡಿ: ಮಾಜಿ ಸಚಿವ ಕಿಮ್ಮಾನೆ ರತ್ನಾಕರ್ ಆಗ್ರಹರಾಜ್ಯದಲ್ಲಿ ಶೀಘ್ರವೇ 'ರಾಜಕೀಯ ವ್ಯವಹಾರಗಳ ಸಮಿತಿ' ರಚನೆ; ತುಳು ಭಾಷೆ ಸ್ಥಾನಮಾನಕ್ಕೆ ಬಿ.ಕೆ. ಹರಿಪ್ರಸಾದ್ ಸ್ವಾಗತರೈತರಿಗೆ ಯಾವುದೇ ಹೊಸ ನೋಟಿಸ್ ನೀಡುವಂತಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ‘ಮದ್ಯ’ ನಿಷೇಧದಿಂದ ಒಳಿತಿಗಿಂತ ಹಾನಿಯೇ ಹೆಚ್ಚು; ಸುಪ್ರೀಂಕೋರ್ಟ್‌ ಮಹತ್ವದ ಅಭಿಪ್ರಾಯಅಂತರರಾಜ್ಯ ಮಂಡಳಿ ನಿಯಮಕ್ಕೆ ತಿದ್ದುಪಡಿ: ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೆ ದೆಹಲಿ, ಜಮ್ಮು-ಕಾಶ್ಮೀರ, ಪುದುಚೇರಿ ಎಲ್‌ಜಿಗಳಿಗೆ ಸಭೆಯಲ್ಲಿ ಅವಕಾಶಟಿಎಂಸಿ ಹೆಸರು–ಚಿಹ್ನೆ ವಿವಾದ ಸುಪ್ರೀಂ ಕೋರ್ಟ್‌ಗೆ: ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಮಮತಾ ಬಣ ಅರ್ಜಿಶಾಲೆಯ ಮೆಟ್ಟಿಲಿನಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿನಿ ಸಾವು; ಆಘಾತಕಾರಿ ವೀಡಿಯೋ ವೈರಲ್ |WATCH VIDEOಸಿಎಂ ಆಸ್ತಿ ಕೊಟ್ಟರೆ ರಾಜ್ಯದ ರೈತರ ಸಾಲ ಮನ್ನಾ ಮಾಡಬಹುದು : ಕೇಂದ್ರ ಸಚಿವ HD ಕುಮಾರಸ್ವಾಮಿ ಹೇಳಿಕೆ!