LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : 2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರೋದು ಶತಃಸಿದ್ಧ : HD ಕುಮಾರಸ್ವಾಮಿ ವಿಶ್ವಾಸ!

ಹಾಸನ : ರಾಜ್ಯಾದ್ಯಂತ ಸ್ಟಿಂಗ್ ಆಪರೇಷನ್ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು ಈಗಾಗಲೇ ಇದರ ಹಿಂದೆ ಯಾರಿದ್ದಾರೆ ಎಂದು ಬಹಿರಂಗಪಡಿಸಿ ಎಂದು ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಇದೀಗ ಎಚ್ ಡಿ ಕುಮಾರಸ್ವಾಮಿ ಮತ್ತೊಂದು ಸ್ಫೋಟಕವಾದ ಆರೋಪ ಮಾಡಿದ್ದು ಕೇವಲ ರಾಜಕಾರಣಿಗಳು ಅಷ್ಟೇ ಅಲ್ಲದೆ ಕೆಲವು ಪೋಲಿಸ್ ಅಧಿಕಾರಿಗಳ ಸ್ತಿಂಗ್ ಆಪರೇಷನ್ ಕೂಡ ನಡೆದಿದೆ ಎಂದು ಸ್ಪೋಟಕ ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ ತನಿಖೆ ನಡೆಸಲು ಇನ್ನೇನು ದಾಖಲೆ ಬೇಕು? ಪಕ್ಷದ ಕಾರ್ಯಕರ್ತೆಯನ್ನು ಕೂರಿಸಿಕೊಂಡು ಹೆಸರು ಹೇಳು ಅಂತಾರೆ ಸಿದ್ದರಾಮಯ್ಯ ಹೆಸರು ಹೇಳು, ಹೇಳು ಅಂತಾರೆ ಸಿದ್ದರಾಮಯ್ಯ ಎಷ್ಟೊತ್ತು ಇದ್ದರು ಅವರ ದೇಹದ ಗುರುತು ಇದೆಯಾ? ಈ ರೀತಿ ಕಾರ್ಯಕರ್ತೆಯೊಬ್ಬರನ್ನು ಪ್ರಶ್ನೆ ಮಾಡುತ್ತಾರೆ ಆ ವ್ಯಕ್ತಿಯನ್ನು ಟಚ್ ಮಾಡೋಕೆ ಆಗ್ತಿಲ್ಲ ಯಾಕೆ ಟಚ್ ಮಾಡೋಕೆ ಆಗುತ್ತಿಲ್ಲ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಆಪರೇಷನ್ ಮಾಡಿ ಇಟ್ಟುಕೊಂಡಿದ್ದಾರೆ. ಸಾಕಷ್ಟು ಪೊಲೀಸ್ ಅಧಿಕಾರಿಗಳ ಆಪರೇಷನ್ ಮಾಡಿದ್ದಾರೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದರು.

ಹಲವು ನಾಯಕರೇ ಸಿಂಗ್ ಆಪರೇಷನ್ ಆಗಿದೆ ಎಂದು ಮಾಜಿ ಸಚಿವ ಕೆಏನ್ ರಾಜಣ್ಣ ಹೇಳಿದ್ದಾರೆ ಆದರೆ ಕಾಂಗ್ರೆಸ್ ಹಿರಿಯ ಶಾಸಕರಾಗಿರುವ ಅವರ ಬಾಯಿಯನ್ನೇ ಇದೀಗ ಮುಚ್ಚಿಸಿದ್ದಾರೆ ಈ ಕಾಂಗ್ರೆಸ್ ಸರ್ಕಾರ ಎಲ್ಲಿಗೆ ಹೋಗುತ್ತಿದೆ ಒಬ್ಬರು ಮಾಜಿ ಪ್ರಧಾನಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೆ ಎಂದು ಎಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

ಆ ವ್ಯಕ್ತಿಗೆ ನಟ್ಟು ಬೋಲ್ಟು ಇಲ್ವಾ ಅಂತ ಅನಿಸುತ್ತದೆ. ಅವರಿಗೆ ಈ ಸರ್ಕಾರ ಗುಲಾಮಗಿರಿ ನಡೆಸುತ್ತಿದೆ. ಗ್ರಹ ಸಚಿವರ ನಡೆ ನೋಡಿದರೆ ಏನು ಹುನ್ನಾರ ನಡೆದಿದೆ. ನನ್ನನ್ನು ಪ್ರಚೋದಿಸಲು ಸಿಎಂ ರಿಂದ ನಿರ್ದೇಶನ ತೆಗೆದುಕೊಂಡು ಹೀಗೆ ಮಾಡುತ್ತಾ ಇದ್ದಾರೆ. ನನ್ನನ್ನು ಉತ್ತರಕುಮಾರ ಅನ್ನುತ್ತಾರೆ. ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆ ಅಂದಮೇಲೆ ಇನ್ನೇನು ದಾಖಲೆ ಬೇಕು? ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಯಾವತ್ತೂ ಮುಗಿದು ಹೋಗುತ್ತಿತ್ತು.

ಸಿದ್ದರಾಮಯ್ಯ ಜೊತೆ ರಾಜಕೀಯವಾಗಿ ದೊಡ್ಡ ಹೋರಾಟ ಮಾಡಿದ್ದೇನೆ ಆದರೆ ಈಗ ಸಿದ್ದರಾಮಯ್ಯರನ್ನು ಮುಗಿಸಲು ಏನೆಲ್ಲಾ ನಡೆದಿದೆ. ಯಾವಾಗಲೂ ಅಧಿಕಾರದಲ್ಲಿ ನೀವೇ ಇರುತ್ತೀರಾ? ಒಂದು ವರ್ಷ ಕಳೆಯಲಿ ಏನಾಗುತ್ತೆ ಅಧಿಕಾರ ದುರುಪಯೋಗ ಮಾಡಿಕೊಂಡು ಏನೇನು ಮಾಡಿದ್ದಾರೆ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ನನ್ನ ಮೇಲೆ ಆರೋಪ ಮಾಡಿದರು. ಆಗಲು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ನಾನು ಏಕಾಂಗಿಯಾಗಿದ್ದೆ.

ನಮ್ಮ ಕುಟುಂಬ ಮುಗಿಸಲು ಹೊರಟಿದ್ದೀರಾ ಎಂದ ಎಚ್ ಡಿ ಕುಮಾರಸ್ವಾಮಿ, ಹಾಸನಂಬೆ ದೇವಾಲಯದ ಬಾಗಿಲು ಶೀಘ್ರ ತೆರೆಯಲಿದೆ ದೇವಾಲಯದಲ್ಲಿ ಕುಳಿತು ಮಾತನಾಡುತ್ತೇನೆ. 2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಶತಸಿದ್ಧ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು ಎಚ್ ಡಿ ಕುಮಾರಸ್ವಾಮಿ ಇನ್ನೊಂದು ಮುಖ ಆಗ ತೋರಿಸುತ್ತೇನೆ ಸಿದ್ದರಾಮಯ್ಯ ಯಾಕೆ ಬಾಯಿ ಬಿಡುವುದಿಲ್ಲ ಅನ್ನೋದೇ ನನಗೆ ಆಶ್ಚರ್ಯವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆಉತ್ತರ ಪ್ರದೇಶದಲ್ಲಿ ಮೂರನೇ ಅವಧಿಗಾಗಿ ಬಿಜೆಪಿಯ ತಂತ್ರ: ಕಲ್ಯಾಣ ಯೋಜನೆ, ಮಹಿಳಾ ಮತ ಮತ್ತು ಯೋಗಿ ವರ್ಚಸ್ಸಿನ ಮೇಲೆ ಭರವಸೆಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಟಾಪ್ 5 ಕಂಪನಿಗಳು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ!