LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : ‘ಸ್ವಿಗ್ಗಿ’ ಜೊತೆ ಕೈಜೋಡಿಸಿದ HPCL ; ಇನ್ಮುಂದೆ 10 ನಿಮಿಷದಲ್ಲೇ ಮನೆ ಬಾಗಿಲಿಗೆ LPG ಸಿಲಿಂಡರ್ !

ಬೆಂಗಳೂರು: ಅಡುಗೆ ಅನಿಲ (LPG) ಸಿಲಿಂಡರ್ಗಾಗಿ ಗಂಟೆಗಳ ಕಾಲ ಅಥವಾ ದಿನಗಟ್ಟಲೆ ಕಾಯಬೇಕಾದ ದಿನಗಳು ಇನ್ನು ಬಹುತೇಕ ಮುಗಿಯಲಿವೆ. ಹಾಲು, ತರಕಾರಿ, ದಿನಸಿ ವಸ್ತುಗಳನ್ನು 10 ನಿಮಿಷಗಳಲ್ಲಿ ಮನೆಗೆ ತಲುಪಿಸುತ್ತಿರುವ ಕ್ವಿಕ್ ಕಾಮರ್ಸ್ ಸೇವೆಗಳು ಇದೀಗ LPG ಸಿಲಿಂಡರ್ಗಳನ್ನೂ ಅದೇ ವೇಗದಲ್ಲಿ ಗ್ರಾಹಕರ ಮನೆಬಾಗಿಲಿಗೆ ತಲುಪಿಸಲು ಮುಂದಾಗಿವೆ.

ಹೌದು. ಈ ನಿಟ್ಟಿನಲ್ಲಿ ಪ್ರಮುಖ ಇ-ಕಾಮರ್ಸ್ ಸಂಸ್ಥೆ ಸ್ವಿಗ್ಗಿ ಇನ್ಸ್ಟಾಮಾರ್ಟ್ (Swiggy Instamart), ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಜೊತೆ ಕೈಜೋಡಿಸಿದೆ. ಈ ಒಪ್ಪಂದದಡಿ ಆನ್-ಡಿಮಾಂಡ್ LPG ಸಿಲಿಂಡರ್ ಡೆಲಿವರಿ ಸೇವೆಯನ್ನು ಅಧಿಕೃತವಾಗಿ ಆರಂಭಿಸಲಾಗಿದೆ. ದೇಶದಲ್ಲೇ ಈ ರೀತಿಯ ಸೇವೆ ಇದೇ ಮೊದಲ ಬಾರಿಗೆ ಲಭ್ಯವಾಗುತ್ತಿದೆ.

ಸಾಮಾನ್ಯವಾಗಿ LPG ಸಿಲಿಂಡರ್ ಬುಕ್ ಮಾಡಿದರೆ 24 ರಿಂದ 48 ಗಂಟೆಗಳವರೆಗೆ ಕಾಯಬೇಕಾಗುತ್ತದೆ. ಆದರೆ ಸ್ವಿಗ್ಗಿ-HPCL ಸಹಭಾಗಿತ್ವದಿಂದ ಈ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಆರಂಭಿಕ ಹಂತದಲ್ಲಿ ಮನೆ ಹಾಗೂ ವಾಣಿಜ್ಯ ಬಳಕೆಗೆ ಸೂಕ್ತವಾದ 5 ಕೆಜಿ FTL LPG ಸಿಲಿಂಡರ್ಗಳು ಮತ್ತು ಸಾಮಾನ್ಯ ರಿಫಿಲ್ ಸೇವೆಯನ್ನು ಕ್ವಿಕ್ ಕಾಮರ್ಸ್ ಡೆಲಿವರಿ ಜಾಲಕ್ಕೆ ಸೇರಿಸಲಾಗುತ್ತಿದೆ.

ಅಡುಗೆ ಮಧ್ಯೆ ಗ್ಯಾಸ್ ಮುಗಿದು ಸಂಕಷ್ಟಕ್ಕೆ ಸಿಲುಕುವ ಗೃಹಿಣಿಯರು, ಒಂಟಿಯಾಗಿ ವಾಸಿಸುವವರು, ವಿದ್ಯಾರ್ಥಿಗಳು ಹಾಗೂ ಸಣ್ಣ ಹೋಟೆಲ್ಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ರೂಪಿಸಲಾಗಿದೆ.

‘HP Navya’ 10 ಕೆಜಿ ಕಾಂಪೋಸಿಟ್ ಸಿಲಿಂಡರ್’ಗೂ ಡೆಲಿವರಿ
ಸ್ವಿಗ್ಗಿ ಇನ್ಸ್ಟಾಮಾರ್ಟ್ ಮಂಗಳವಾರ ಈ ಕುರಿತು ಪ್ರಕಟಣೆ ಹೊರಡಿಸಿದ್ದು, HPCL ಇತ್ತೀಚೆಗೆ ಪರಿಚಯಿಸಿರುವ ‘HP Navya’ 10 ಕೆಜಿ ಕಾಂಪೋಸಿಟ್ LPG ಸಿಲಿಂಡರ್ ಕೂಡ ಈ ಸೇವೆಯಡಿ ಗ್ರಾಹಕರಿಗೆ ತಲುಪಿಸಲಾಗುವುದು ಎಂದು ತಿಳಿಸಿದೆ.

ಮೊದಲು ಬೆಂಗಳೂರಿನಲ್ಲಿ ಆರಂಭ
ಈ ಕ್ವಿಕ್ ಕಾಮರ್ಸ್ LPG ಡೆಲಿವರಿ ಸೇವೆ ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ ಆರಂಭವಾಗಲಿದೆ. ಸ್ವಿಗ್ಗಿ ಇನ್ಸ್ಟಾಮಾರ್ಟ್ ಆ್ಯಪ್ ಮೂಲಕ ಗ್ರಾಹಕರು 5 ಕೆಜಿ ಮೆಟಲ್ LPG ಸಿಲಿಂಡರ್ ಹಾಗೂ 10 ಕೆಜಿ HP Navya ಕಾಂಪೋಸಿಟ್ ಸಿಲಿಂಡರ್ ಅನ್ನು ಆರ್ಡರ್ ಮಾಡಬಹುದು.

ಗೃಹ ಬಳಕೆಯ LPG ಸಂಪರ್ಕ ಕಡ್ಡಾಯವಿಲ್ಲ
ಈ ಸೇವೆಯ ಮತ್ತೊಂದು ವಿಶೇಷತೆ ಎಂದರೆ, ಸಿಲಿಂಡರ್ ಆರ್ಡರ್ ಮಾಡಲು ಗೃಹ ಬಳಕೆಯ LPG ಸಂಪರ್ಕ (Domestic LPG Connection) ಕಡ್ಡಾಯವಿಲ್ಲ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಣ್ಣ ಕುಟುಂಬಗಳಿಗೆ ಇದು ಹೆಚ್ಚು ಉಪಯುಕ್ತವಾಗಲಿದೆ.ಮೊದಲ ಬಾರಿಗೆ ಸಿಲಿಂಡರ್ ಖರೀದಿಸುವವರು ಗುರುತಿನ ಪರಿಶೀಲನೆ ಹಾಗೂ ಅಗತ್ಯ ದಾಖಲೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಂತರದ ಆರ್ಡರ್ಗಳನ್ನು ರಿಫಿಲ್ ಎಂದು ಪರಿಗಣಿಸಲಾಗುತ್ತದೆ. ಹೊಸ ಸಿಲಿಂಡರ್ ಪಡೆಯುವಾಗ ಖಾಲಿ ಸಿಲಿಂಡರ್ ಹಿಂತಿರುಗಿಸಬೇಕು.

HP Navya ಸಿಲಿಂಡರ್ ವಿಶೇಷತೆಗಳು
HPCL ಪರಿಚಯಿಸಿರುವ HP Navya ಸಿಲಿಂಡರ್ ಸಾಮಾನ್ಯ ಉಕ್ಕಿನ ಸಿಲಿಂಡರ್ಗಳಿಗಿಂತ ಹಗುರವಾಗಿದ್ದು, ತುಕ್ಕು ಹಿಡಿಯುವುದಿಲ್ಲ. ಪಾರದರ್ಶಕ ವಿನ್ಯಾಸ ಹೊಂದಿರುವುದರಿಂದ ಒಳಗೆ ಉಳಿದಿರುವ ಗ್ಯಾಸ್ ಪ್ರಮಾಣವನ್ನು ಸುಲಭವಾಗಿ ನೋಡಬಹುದು. ಅಪಾರ್ಟ್ಮೆಂಟ್ಗಳು, ಸಣ್ಣ ಕುಟುಂಬಗಳು ಹಾಗೂ ಹೆಚ್ಚುವರಿ LPG ಸಿಲಿಂಡರ್ ಅಗತ್ಯವಿರುವ ಮನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಿಲಿಂಡರ್ ವಿನ್ಯಾಸಗೊಳಿಸಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ