LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING : ಬೆಂಗಳೂರಲ್ಲಿ ನಕಲಿ ಔಷಧ ಮಾರಾಟ ದಂಧೆಗೆ ಬ್ರೇಕ್; 24 ಫಾರ್ಮಾಗಳ ಲೈಸೆನ್ಸ್ ಕ್ಯಾನ್ಸಲ್ ಮಾಡಿದ FDA!

ಬೆಂಗಳೂರು: ಜೀವ ರಕ್ಷಕ ಔಷಧಗಳ ಹೆಸರಿನಲ್ಲಿ ನಕಲಿ ಮಾತ್ರೆಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದ ಬೃಹತ್ ಜಾಲವೊಂದನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (FDA) ಇತ್ತೀಚೆಗೆ ಭೇದಿಸಿದೆ. ನಕಲಿ ಔಷಧಿ ಮಾರಾಟ ಮತ್ತು ವಿತರಣೆಯಲ್ಲಿ ಭಾಗಿಯಾಗಿದ್ದ ಒಟ್ಟು 24 ಫಾರ್ಮಾ ವ್ಯಾಪಾರಿಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ಜಾಲಕ್ಕೆ ತಕ್ಕ ಪಾಠ ಕಲಿಸಲು ಅಧಿಕಾರಿಗಳು ಮುಂದಾಗಿದ್ದು, ರಾಜ್ಯದ ವೈದ್ಯಕೀಯ ಹಾಗೂ ಫಾರ್ಮಾ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ನಕಲಿ ಔಷಧ ಜಾಲವನ್ನು ಮಟ್ಟಹಾಕುವ ಕಾರ್ಯಾಚರಣೆಯ ಭಾಗವಾಗಿ ಅಧಿಕಾರಿಗಳು 16 ಔಷಧ ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗಳ ಪರವಾನಗಿಯನ್ನು (ಲೈಸೆನ್ಸ್) ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ. ಉಳಿದ 8 ವ್ಯಾಪಾರಿಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ನಕಲಿ ಔಷಧಿಗಳ ಮಾರಾಟದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದ ಔಷಧ ಮಾರಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಎಫ್‌ಡಿಎ ಅಧಿಕಾರಿಗಳು, ಈ ಕಠಿಣ ನಿರ್ಧಾರ ಕೈಗೊಳ್ಳುವ ಮೂಲಕ ಮುನ್ನೆಚ್ಚರಿಕೆಯ ಸಂದೇಶ ನೀಡಿದ್ದಾರೆ.

ಈ ಅಕ್ರಮ ಜಾಲದ ಕಾರ್ಯಾಚರಣೆಯು ಅಗಸ್ಟ್ 18 ರಂದು ಬೆಳಕಿಗೆ ಬಂದಿತ್ತು. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪದ ಕುರುಬರಕೇರನಹಳ್ಳಿಯಲ್ಲಿರುವ ಫಾರ್ಮ್‌ಹೌಸ್ ಒಂದರ ಮೇಲೆ ಎಫ್‌ಡಿಎಯ ಡ್ರಗ್ ಎನ್‌ಫೋರ್ಸ್‌ಮೆಂಟ್ ವಿಭಾಗದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದರು. ಹೊರನೋಟಕ್ಕೆ ಸಾಮಾನ್ಯ ತೋಟದ ಮನೆಯಂತೆ ಕಾಣುತ್ತಿದ್ದ ಈ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅತ್ಯಂತ ಗೌಪ್ಯವಾಗಿ ನಕಲಿ ಔಷಧಗಳ ಮರು-ಪ್ಯಾಕೇಜಿಂಗ್ ಮತ್ತು ಮರು-ಲೇಬಲಿಂಗ್ ಪ್ರಕ್ರಿಯೆ ನಡೆಯುತ್ತಿತ್ತು. ಇದು ಎಫ್‌ಡಿಎ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪತ್ತೆದಾರಿಕೆ ಕಾರ್ಯಾಚರಣೆಯಾಗಿದೆ.

ಈ ದಂಧೆಯ ಹಿಂದಿದ್ದ ಕಿಡಿಗೇಡಿಗಳು ನೆರೆಯ ರಾಜ್ಯಗಳಿಂದ ಅಗ್ಗದ ದರದ ಜೆನೆರಿಕ್ ಔಷಧಿಗಳನ್ನು ಕದ್ದುಮುಚ್ಚಿ ತಂದು, ಅವುಗಳನ್ನು ಹೊಸ ಬಾಟಲಿ ಹಾಗೂ ಕವರ್‌ಗಳಲ್ಲಿ ಮರು-ಪ್ಯಾಕ್ ಮಾಡುತ್ತಿದ್ದರು. ನಂತರ ಬಹುರಾಷ್ಟ್ರೀಯ ಕಂಪನಿಗಳ ದುಬಾರಿ ಹಾಗೂ ಜೀವ ರಕ್ಷಕ ಔಷಧಗಳ ನಕಲಿ ಲೇಬಲ್‌ಗಳು ಮತ್ತು ನಕಲಿ ಕ್ಯೂಆರ್ ಕೋಡ್‌ಗಳನ್ನು ಅಂಟಿಸಿ ಅಸಲಿ ಔಷಧಗಳಂತೆ ಬಿಂಬಿಸುತ್ತಿದ್ದರು. ಅಷ್ಟೇ ಅಲ್ಲದೆ, ಅವಧಿ ಮುಗಿದ ನೂರಾರು ಬಾಕ್ಸ್ ಮಾತ್ರೆಗಳಿಗೆ ಹೊಸ ರೂಪ ನೀಡಿ ಮಾರುಕಟ್ಟೆಗೆ ತಳ್ಳಲು ಸಿದ್ಧಪಡಿಸಿಟ್ಟಿದ್ದುದನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಈ ಪ್ರಕರಣವನ್ನು ರಾಜ್ಯ ಆರೋಗ್ಯ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, 1940ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಕಾಯ್ದೆಯ ಸೆಕ್ಷನ್ 17B ಅಡಿಯಲ್ಲಿ ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಗಂಭೀರ ಅಪರಾಧವಾಗಿದ್ದು, ಸೆಕ್ಷನ್ 27 ರ ಪ್ರಕಾರ ಅಪರಾಧ ಸಾಬೀತಾದರೆ ತಪ್ಪಿತಸ್ಥರಿಗೆ ಕನಿಷ್ಠ 10 ವರ್ಷಗಳಿಂದ ಹಿಡಿದು ಜೀವಾವಧಿ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

16 ಫಾರ್ಮಸಿಗಳ ಲೈಸನ್ಸ್ ರದ್ದು

1. ಅವೆಸ್ಕೊ ಹೆಲ್ತ್‌ಕೇರ್

2. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ

3. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ

4. ಪಟೇಲ್ ಮೆಡಿ ಟ್ರೇಡ್

5. ರಾಜರಾಜೇಶ್ವರಿ ಫಾರ್ಮಾ

6. ಸೂರ್ಯ ಸ್ಪೆಷಾಲಿಟಿ ಫಾರ್ಮಾ

7. ಎಸ್‌ಡಬ್ಲ್ಯೂಎಸ್ ಫಾರ್ಮಾ

8. ಕೃಪಾ ಹೆಲ್ತ್‌ಕೇರ್

9. ಸೆಂಟ್ ಫಿಲೋಮಿನಾ ಹಾಸ್ಪಿಟಲ್ ಡ್ರಗ್ ಸೆಂಟರ್

10. ಸಾಗರ್ ಫಾರ್ಮಾ

11. ಝೈಮಸ್ ಫಾರ್ಮಾ

12. ಫಾರ್ಚೂನ್ ಮೆಡಿಕಲ್ ಸೊಲ್ಯೂಷನ್ಸ್

13. ಎಕ್ಸೆಲ್ಲೇರ್ ಫಾರ್ಮಾ

14. ಪಟೇಲ್ ಮೆಡಿಕಲ್

15. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ

16. ಎನ್.ಎಸ್. ಫಾರ್ಮಾ - ಹುಬ್ಬಳ್ಳಿ

ಲೈಸನ್ಸ್ ಅಮಾನತುಗೊಂಡಿರುವ ಫಾರ್ಮಸಿಗಳು

1. ಮೆಡ್ ಫಾರ್ಮಾ

2. ಸೂರ್ಯ ಸ್ಪೆಷಾಲಿಟಿ ಹಾಸ್ಪಿಟಲ್

3. ಸಾಗರ್ ಫಾರ್ಮಾ

4. ವಿವಾಂತ ಫಾರ್ಮಾಸ್ಯುಟಿಕಲ್ಸ್

5. ಮಾರುತಿ ಮೆಡಿಕಲ್ಸ್

6. ಹೈ-5 ಫಾರ್ಮಾ

7. ಫೈಜರ್ ಲಿಮಿಟೆಡ್

8. ವಿವಾ ಫಾರ್ಮಾ - ಬೆಳಗಾವಿ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
Rain In Bengaluru: ಬೆಂಗಳೂರಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು, ವಾಹನ ಸವಾರರ ಪರದಾಟರಾಜ್ಯದ ರೈತರು, ಜನರ ರಕ್ಷಣೆಗೆ ಬದ್ಧ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್BREAKING : KPSC ಹಗರಣ : ತನಿಖೆಗೆ ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚಿಸಿ ಹೈಕೋರ್ಟ್ ಆದೇಶ ವಿಶೇಷ ಅಧಿವೇಶನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಕಣ್ಣೀರಿನ ಕಥೆ ಬಿಚ್ಚಿಟ್ಟ ಶಾಸಕ ಗೋಪಾಲಕೃಷ್ಣ ಬೇಳೂರು!ಕೊಪ್ಪಳ : ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು!ಮೈಸೂರು ದಸರಾ 2026: 'ಆನ್‌ಲೈನ್‌'ನಲ್ಲಿ ಜಂಬೂಸವಾರಿ ಟಿಕೆಟ್, 'ಗೋಲ್ಡ್ ಕಾರ್ಡ್' ಬುಕಿಂಗ್ ಆರಂಭ, ಹೀಗೆ ಖರೀದಿಸಿ!ಇನ್ನೊಂದು ತಿಂಗಳಲ್ಲಿ ಮೇಷ ಸೇರಿ ಈ 5 ರಾಶಿಯವರಿಗೆ ಅತ್ಯಂತ ಕೆಟ್ಟ ಕಾಲ, ಶನಿಯಿಂದ ನಷ್ಟ ಕಟ್ಟಿಟ್ಟ ಬುತ್ತಿ!ವಿಶೇಷ ಅಧಿವೇಶನ ಆರಂಭದಲ್ಲೇ 'ವಂದೇ ಮಾತರಂ' ಜಟಾಪಟಿ: ಕಸ್ತೂರಿ ರಂಗನ್ ಚರ್ಚೆ ವೇಳೆ ಭಾರಿ ಗದ್ದಲಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳ ಕುರಿತು ಚರ್ಚಿಸಿ ವಸ್ತುನಿಷ್ಠ ನಿಲುವು ತಾಳಲು ಸದನಕ್ಕೆ ಡಿಸಿಎಂ ಮನವಿಬೆಂಗಳೂರು ನಕಲಿ ಔಷಧ ಜಾಲ: ಕರ್ತವ್ಯ ಲೋಪ ಹಿನ್ನೆಲೆ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಸಸ್ಪೆಂಡ್!