ಬೆಂಗಳೂರು : ನಗರದಲ್ಲಿ ಅಕ್ರಮ ಹವಾಲಾ ವಹಿವಾಟು ನಡೆಸುತ್ತಿದ್ದ ಬೆಟ್ಟಿಂಗ್ ಆಪ್ ಕಂಪನಿಗಳ ವಿರುದ್ಧ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಇಂದು ದಿಢೀರ್ ದಾಳಿ ನಡೆಸಿ ಪರಿಶೀಲನೆ ಮುಂದುವರಿಸಿದ್ದಾರೆ. ರಾಜಧಾನಿಯ ಮೂರು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಬೆಟ್ಟಿಂಗ್ ಆಪ್ಗಳ ಮೂಲಕ ವಿದೇಶಗಳಿಗೆ ಮತ್ತು ಇತರೆಡೆಗೆ ನಡೆಯುತ್ತಿದ್ದ ಹಣ ವರ್ಗಾವಣೆ ಹಾಗೂ ಶಂಕಿತ ಹವಾಲಾ ಜಾಲದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಆನ್ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಆಪ್ಗಳ ಹೆಸರಿನಲ್ಲಿ ಭಾರೀ ಪ್ರಮಾಣದ ಹಣಕಾಸು ವಂಚನೆ ಮತ್ತು ತೆರಿಗೆ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ದಾಳಿ ಹಾಗೂ ಶೋಧ ಕಾರ್ಯ ಮುಂದುವರಿದಿದ್ದು, ಈ ಅಕ್ರಮ ಜಾಲದ ಹಿಂದೆ ಯಾರಿದ್ದಾರೆ ಮತ್ತು ಎಷ್ಟು ಮೊತ್ತದ ಹವಾಲಾ ಹಣ ಚಲಾವಣೆಯಾಗಿದೆ ಎಂಬ ಕುರಿತು ಇಲಾಖೆಯಿಂದ ಅಧಿಕೃತ ವಿವರಗಳು ಹೊರಬರಬೇಕಿದೆ.