LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING : ಈಜಿಪ್ಟ್‌ನಲ್ಲಿ ಭೀಕರ ರೈಲು ಅಪಘಾತ; 7 ಮಂದಿ ಸಾವು, 125ಕ್ಕೂ ಹೆಚ್ಚು ಜನರಿಗೆ ಗಾಯ!

ಕೈರೋ: ಈಜಿಪ್ಟ್ ರಾಜಧಾನಿ ಕೈರೋ ನಗರದ ಹೊರವಲಯದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 125ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಈಜಿಪ್ಟ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾನುವಾರ (ನವೆಂಬರ್ 8) ಗಿಜಾ ಪ್ರಾಂತ್ಯದ ಅಲ್-ಅಯ್ಯತ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಗಿಜಾದಿಂದ ಫಯೂಮ್‌ಗೆ ತೆರಳುತ್ತಿದ್ದ ರೈಲು, ಕೈರೋದಿಂದ ದಕ್ಷಿಣ ಈಜಿಪ್ಟ್‌ನ ಅಸ್ವಾನ್‌ಗೆ ಪ್ರಯಾಣಿಸುತ್ತಿದ್ದ ಮತ್ತೊಂದು ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಸ್ವಾನ್‌ಗೆ ತೆರಳುತ್ತಿದ್ದ ರೈಲು ಹಳಿ ತಪ್ಪಿ ಪಕ್ಕದ ಗ್ರಾಮೀಣ ರಸ್ತೆಗೆ ಉರುಳಿದೆ.

ಸ್ಥಳಕ್ಕೆ 70ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. 70ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಕ್ರೇನ್‌ಗಳ ನೆರವಿನಿಂದ ಹಳಿ ತಪ್ಪಿದ ಬೋಗಿಗಳನ್ನು ತೆರವುಗೊಳಿಸುವ ಕಾರ್ಯವೂ ನಡೆದಿದೆ.

ಅಪಘಾತದ ತೀವ್ರತೆಗೆ ಹಲವು ಬೋಗಿಗಳು ಮಗುಚಿಬಿದ್ದಿದ್ದು, ಅವುಗಳೊಳಗೆ ಪ್ರಯಾಣಿಕರು ಸಿಲುಕಿಕೊಂಡಿದ್ದರು. ಸ್ಥಳೀಯರು, ರಕ್ಷಣಾ ಸಿಬ್ಬಂದಿ ಹಾಗೂ ರೈಲ್ವೆ ಕಾರ್ಮಿಕರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಬೋಗಿಗಳ ಅಡಿಯಲ್ಲಿ ಸಿಲುಕಿದ್ದ ಪ್ರಯಾಣಿಕರು

ಅಪಘಾತವನ್ನು ಕಣ್ಣಾರೆ ಕಂಡ 31 ವರ್ಷದ ಅಬ್ದೆಲ್ ವಹೆದ್ ಮೊಹಮ್ಮದ್ ಮಾತನಾಡಿ, ಮಧ್ಯಾಹ್ನ ಸುಮಾರು 1:30ರ ವೇಳೆಗೆ ಅಪಘಾತ ಸಂಭವಿಸಿದೆ. ಅಸ್ವಾನ್‌ಗೆ ತೆರಳುತ್ತಿದ್ದ ರೈಲು ನಿಂತಿದ್ದಾಗ ಫಯೂಮ್‌ಗೆ ಹೋಗುತ್ತಿದ್ದ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಬೋಗಿಗಳು ಮಗುಚಿಬಿದ್ದಿವೆ ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಪ್ರತ್ಯಕ್ಷದರ್ಶಿ ಅಹ್ಮದ್ ಮೂಸಾ ಪ್ರಕಾರ, ಮಗುಚಿಬಿದ್ದ ಬೋಗಿಯೊಳಗೆ ಹಲವರು ಒಬ್ಬರ ಮೇಲೊಬ್ಬರು ಬಿದ್ದಿದ್ದರು. ರಕ್ಷಣಾ ಸಿಬ್ಬಂದಿ ಬೋಗಿಯ ಕೆಳಭಾಗವನ್ನು ಅಗೆದು ಪ್ರಯಾಣಿಕರನ್ನು ಹೊರತೆಗೆಯಲು ಪ್ರಯತ್ನಿಸಿದರು. ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿರುವುದನ್ನು ತಾವು ಕಂಡಿದ್ದಾಗಿ ಅವರು ಹೇಳಿದ್ದಾರೆ.

ತುರ್ತು ತನಿಖೆಗೆ ಅಧ್ಯಕ್ಷರ ಆದೇಶ

ಘಟನೆ ಕುರಿತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಪಘಾತದ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿರ್ಲಕ್ಷ್ಯ ತೋರಿರುವುದು ತನಿಖೆಯಲ್ಲಿ ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಹಾಗೂ ರೈಲು ಸಂಚಾರವನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನಗಳು ಮುಂದುವರಿದಿವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾವಾಜಾ ಹೇಳಿಕೆ ಶೇಕಡಾ ನೂರರಷ್ಟು ಸತ್ಯ: ತನಿಖೆಯ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಪ್ರಶ್ನೆ ಎತ್ತಿದ ಡೇವಿಡ್ ವಾರ್ನರ್ಪಿಸ್ತಾ ಗ್ರೀನ್ ಲೆಹೆಂಗಾದಲ್ಲಿ ಮಿಂಚಿದ ನಟಿ ಆಲಿಯಾ ಭಟ್: ದೀಪಾವಳಿ ಹಬ್ಬದಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದ ಸ್ಟಾರ್ ನಟಿಮಗನ ಸಿನಿಮಾದಿಂದ ನಿರ್ದೇಶಕನಿಗೆ ಗೇಟ್ ಪಾಸ್: ಕಾರಣ ತಿಳಿಸಿದ ನಟಿ ಪ್ರಿಯಾಂಕಾ ಉಪೇಂದ್ರಸ್ಯಾಂಡಲ್‌ವುಡ್ ಬ್ಲಾಕ್‌ಬಸ್ಟರ್ ‘ಪ್ರೇಮದ ಊರಲಿ’ ಸಿನಿಮಾದ ‘ಏರುಪೇರು ಹೃದಯ’ ವೀಡಿಯೊ ಸಾಂಗ್ ರಿಲೀಸ್ದೀಪಾವಳಿ ಹಬ್ಬದ ಹೊತ್ತಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳು ಹೇಗಿವೆ?ಹಬ್ಬದ ಬೆನ್ನಲ್ಲೇ ಷೇರುಮಾರುಕಟ್ಟೆ ಕುಸಿತ: ಸೆನ್ಸೆಕ್ಸ್ 700 ಅಂಕಗಳು ಹಾಗೂ ನಿಫ್ಟಿ 80 ಅಂಕಗಳಷ್ಟು ಕುಸಿತ: ಕಾರಣವೇನು?ಪಟಾಕಿಯಿಂದ ದಟ್ಟ ಹೊಗೆ: ಚೆನ್ನೈ ಏರ್​ಪೋರ್ಟ್​​ನಲ್ಲಿ 26 ವಿಮಾನ ಹಾರಾಟ ವಿಳಂಬ; ಒಂದು ವಿಮಾನದ ಮಾರ್ಗ ಬದಲಾವಣೆಜೆನ್ಸನ್ ಹುವಾಂಗ್ ಜೊತೆ ಸಂಪರ್ಕ ಹೊಂದಿರುವ ಆಲಿಸ್ ಹುವಾಂಗ್ ಯಾರು?ಮೂಕುತಿ ಅಮ್ಮನ್ 2 ಬಾಕ್ಸ್‌ಆಫೀಸ್ ಕಲೆಕ್ಷನ್: ವಾರಾಂತ್ಯದಲ್ಲಿ ಗಳಿಕೆ ಹೆಚ್ಚಿಸಿಕೊಂಡ ನಯನತಾರಾ ಸಿನಿಮಾಕ್ಯಾನ್ಸರ್ ರೋಗಿಗಳಿಗೆ ಔಷಧಿಗಳ ಬೆಲೆ ಇಳಿಕೆ