ಬೆಂಗಳೂರು : ಬೆಂಗಳೂರಲ್ಲಿ ಕುಡಿದು ಗಲಾಟೆ ಮಾಡಿದ ಐಎಎಸ್ ಅಧಿಕಾರಿ ವಿರುದ್ಧ ಇದೀಗ ಎಫ್ ಆರ್ ದಾಖಲಾಗಿದೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಐಎಎಸ್ ಅಧಿಕಾರಿ ವಿಕಾಸ ಮರ್ಮಠ ಗೆಳೆಯರಾದ ನಿತೇಶ ಅಭೈ ಉದಯ್ ಸಿಂಗ್ ರೋಷನ್ ವಿರುದ್ಧ ಕೇಸ್ ದಾಖಲಾಗಿದೆ.
ಕಾವುರ್ ಪಬ್ ಸ್ನೇಹಿತರ ಜೊತೆ ಹೋಗಿದ್ದ ವಿಕಾಸ್ ಮರ್ಮಠ ರಾತ್ರಿ 1.30ರ ವೇಳೆ ಪಬ್ ಪರಿಶೀಲನೆ ಮಾಡಲು ಹೋಗಿದ್ದ ಸಿಸಿಬಿ ಪೊಲೀಸರು. ಈ ವೇಳೆ ಐಡಿ ಕಾರ್ಡ್ ಕೇಳಿದಕ್ಕೆ ವಿಕಾಸ್ ಕೋಪಗೊಂಡು ಬೈದಿದ್ದ ಪ್ರಶ್ನೆ ಮಾಡಲು ಹೋದಾಗ ಇನ್ಸ್ಪೆಕ್ಟರ್ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದರು. ನಾನು IAS ಅಧಿಕಾರಿ ಏನು ಮಾಡ್ತೀನಿ ನೋಡಿ ಎಂದು ಅವಾಜ್ ಹಾಕಿದ್ದಾನೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಆಂಧ್ರದ ಕುಪ್ಪಂನಲ್ಲಿ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡ್ತಿದ್ದಾನೆ.