LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING: IPLಗೆ ನಿವೃತ್ತಿ ಘೋಷಿಸಿದ ಧೋನಿ: CSK ಮೆಂಟರ್ ಆಗಿ ನೇಮಕ

ಚೆನ್ನೈ: ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ (IPL)ಗೆ ನಿವೃತ್ತಿ ಘೋಷಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಟೀಂ ಮೆಂಟರ್ ಆಗಿ ನೇಮಕ ಮಾಡಿದೆ.

2008 ರಿಂದ ಐಪಿಎಲ್ ಆಡುತ್ತಿರುವ 45 ವರ್ಷದ ಧೋನಿ, 2027ರ ಆಟಗಾರರ ರಿಟೆನ್ಷನ್‌ಗೂ ಮುನ್ನ ತಮ್ಮ ನಿವೃತ್ತಿಯನ್ನು ಅಧಿಕೃತಗೊಳಿಸಿದ್ದಾರೆ. ಫಿಟ್‌ನೆಸ್ ಸಮಸ್ಯೆಯಿಂದಾಗಿ ಕಳೆದ 2026ರ ಆವೃತ್ತಿಯಿಂದ ಹೊರಗುಳಿದಿದ್ದ ಧೋನಿ, ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಆಟಗಾರನಾಗಿ ತಮ್ಮ ಸುದೀರ್ಘ ಪಯಣಕ್ಕೆ ತೆರೆ ಎಳೆದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರು ಕಳೆದ ಐಪಿಎಲ್ 2026ರ ಸಂಪೂರ್ಣ ಆವೃತ್ತಿಯಿಂದ ಮೀನಖಂಡದ ಗಾಯ ಮತ್ತು ಫಿಟ್‌ನೆಸ್ ಸಮಸ್ಯೆಯಿಂದಾಗಿ ಹೊರಗುಳಿದಿದ್ದರು. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಮತ್ತು ತಂಡವನ್ನು ಭವಿಷ್ಯಕ್ಕಾಗಿ ಸಜ್ಜುಗೊಳಿಸುವ ಉದ್ದೇಶದಿಂದ, 2027ರ ಆವೃತ್ತಿಗೆ ಆಟಗಾರನಾಗಿ ಮುಂದುವರಿಯದಿರಲು ಅವರು ನಿರ್ಧರಿಸಿದ್ದಾರೆ. 2025ರ ಮೇ 25ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯವು ಮೈದಾನದಲ್ಲಿ ಆಟಗಾರನಾಗಿ ಅವರ ಕೊನೆಯ ಪಂದ್ಯವಾಗಿ ದಾಖಲಾಗಿದೆ.

2008ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನ ಸೇರಿಕೊಂಡ ಮಹಿ ಈವರೆಗೆ ಚೆನ್ನೈ ಪರ 272 ಪಂದ್ಯಗಳನ್ನಾಡಿದ್ದಾರೆ. ನಾಯಕನಾಗಿ 5 ಬಾರಿ ಟ್ರೋಫಿ ತಂದುಕೊಟ್ಟ ದಾಖಲೆಯನ್ನೂ ಬರೆದಿದ್ದಾರೆ. 38.3 ಸರಾಸರಿಯಲ್ಲಿ 5,439 ರನ್‌ ಗಳಿಸಿದ್ದಾರೆ. ಇದರಲ್ಲಿ 264 ಸಿಕ್ಸ್‌, 24 ಅರ್ಧಶತಕಗಳೂ ಸೇರಿವೆ.

2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ 2025ರವರೆಗೆ ಒಟ್ಟು 18 ಆವೃತ್ತಿಗಳಲ್ಲಿ (16 ಆವೃತ್ತಿ ಸಿಎಸ್‌ಕೆ ಮತ್ತು 2 ಆವೃತ್ತಿ ರೈಸಿಂಗ್ ಪುಣೆ ಸೂಪರ್‌ಜೈಂಟ್) ಧೋನಿ ಆಡಿದ್ದಾರೆ. ತಮ್ಮ ಶಾಂತ ಸ್ವಭಾವ, ಚಾಣಾಕ್ಷ ನಾಯಕತ್ವ ಮತ್ತು ಅಪ್ರತಿಮ ಫಿನಿಶಿಂಗ್ ಶೈಲಿಯಿಂದ ಅವರು ಐಪಿಎಲ್‌ ನಲ್ಲಿ ಹೆಚ್ಚು ಗಮನ ಸೆಳೆದಿದ್ದರು.

ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2010, 2011, 2018, 2021 ಮತ್ತು 2023ರಲ್ಲಿ ಒಟ್ಟು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿ ದಾಖಲೆ ಬರೆದಿದೆ. ಕೇವಲ ಆಟಗಾರನಾಗಿ ಮಾತ್ರವಲ್ಲದೆ, ಚೆನ್ನೈ ನಗರದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಧೋನಿ, ಈಗ ಮೆಂಟರ್ ರೂಪದಲ್ಲಿ ಸಿಎಸ್‌ಕೆ ತಂಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ರಷ್ಯಾದಲ್ಲಿ ಮಿಲಿಟರಿ ಸಾರಿಗೆ ವಿಮಾನ ಪತನ; ವಿಮಾನದಲ್ಲಿದ್ದ ಎಲ್ಲಾ 17 ಮಂದಿ ದುರ್ಮರಣ!ಡಿ. 15 ರಿಂದ ಕಾರು, ಬೈಕ್ ವಿಮೆ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ನಾಲ್ಕು ವಿಭಾಗಗಳಲ್ಲಿ ವಿಮಾ ಕವರ್: ಇಲ್ಲಿದೆ ಮುಖ್ಯ ಮಾಹಿತಿಮುಂಬೈನಲ್ಲಿ ಇ-ರಿಕ್ಷಾ ಚಾಲಕರಾದ ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಂ: ಹಿಂಬದಿ ಸೀಟಿನಲ್ಲಿ ಕೇಟ್ ಮಿಡಲ್ ಟನ್ ಸವಾರಿಸತ್ಯಂ ಶಿವಂ ಸುಂದರಂ’; ಶಿವ-ಪಾರ್ವತಿ ಫೋಟೋ ಹಂಚಿಕೊಂಡು ಬಿಜೆಪಿಗೆ ರಾಹುಲ್ ಗಾಂಧಿ ತಿರುಗೇಟು! ಏನಿದು ವಿವಾದ?ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್ಎಫ್ ಯೋಧನನ್ನು ವಶಕ್ಕೆ ಪಡೆದ ಬಾಂಗ್ಲಾದೇಶ ಗಡಿ ಕಾವಲು ಪಡೆ ಅಮಾನವೀಯ ವರ್ತನೆ: ಕೆಲವೇ ಗಂಟೆಗಳಲ್ಲಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ನೆಲದ ಮೇಲೆ ಭಾರತದ ಧ್ವಜ ಕಂಡು ತಕ್ಷಣ ಎತ್ತಿಕೊಂಡ ಪ್ರಧಾನಿ ಮೋದಿ.! ಟ್ರಂಪ್ ಪ್ರತಿಕ್ರಿಯೆ ವೈರಲ್ |WATCH VIDEOIPL 2027 Mini Auction: ಯಾವ ತಂಡದಿಂದ ಯಾರೆಲ್ಲ ಔಟ್? ಇಲ್ಲಿದೆ 10 ಫ್ರಾಂಚೈಸಿಗಳ ಆಟಗಾರರ ಪಟ್ಟಿಪೆಟ್ರೋಲ್, ಡೀಸೆಲ್ ವಿಚಾರದಲ್ಲಿ ಕೇಂದ್ರದ ಮಹತ್ವದ ನಿರ್ಧಾರ; ಹೊಸ ತೆರಿಗೆಗಳು ಜಾರಿ, ಅಧಿಕೃತ ಘೋಷಣೆ!ಸದ್ದಿಲ್ಲದೇ OTTಗೆ ಎಂಟ್ರಿ ಕೊಟ್ಟ ಕನ್ನಡದ ಸೂಪರ್ ಹಿಟ್ ಸಿನಿಮಾ ‘ಪ್ರೇಮದ ಊರಲಿ’! ಮನೆಯಲ್ಲೇ ವೀಕ್ಷಿಸಿಮೊಟ್ಟ ಮೊದಲ FIVA ವರ್ಲ್ಡ್ ವೆಹಿಕಲ್ ಹೆರಿಟೇಜ್ ಅವಾರ್ಡ್ ಪಡೆದ ಭಾರತದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಾರುತಿ 800