LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING : ಹಬ್ಬದ ನಡುವೆಯೆ ರಾಜ್ಯದ ಜನತೆಗೆ ದರ ಏರಿಕೆ ಶಾಕ್ : ಶೀಘ್ರ KSRTC ಬಸ್ ಟಿಕೆಟ್ ದರ ಶೇ.17ರಷ್ಟು ಏರಿಕೆ!

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಆರ್ಥಿಕ ಹೊರೆ ತಗ್ಗಿಸಲು ಬಸ್ ಪ್ರಯಾಣ ದರವನ್ನು ಕನಿಷ್ಠ ಶೇ.25ರಷ್ಟು ಹೆಚ್ಚಿಸಬೇಕೆಂದು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ ಹಾಗೂ ಬಿಡಿಭಾಗಗಳ ವೆಚ್ಚದಿಂದಾಗಿ ಸಾರಿಗೆ ನಿಗಮಗಳಿಗೆ ವಾರ್ಷಿಕ ಸುಮಾರು 8,000 ಕೋಟಿ ರೂಪಾಯಿ ನಷ್ಟವಾಗುತ್ತಿದ್ದು, ನಿಗಮಗಳನ್ನು ಸದೃಢಗೊಳಿಸಲು ಈ ದರ ಪರಿಷ್ಕರಣೆ ಅನಿವಾರ್ಯ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಸಮಿತಿಯು ಶೇ.25ರಷ್ಟು ಏರಿಕೆಗೆ ಶಿಫಾರಸು ಮಾಡಿದ್ದರೂ, ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆ ತಡೆಯಲು ಸರ್ಕಾರವು ಶೇ.15ರಿಂದ ಶೇ.17ರಷ್ಟು ಮಾತ್ರ ದರ ಹೆಚ್ಚಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ನಿಗಮಗಳಿಗೆ ಶೇ.13ರಿಂದ 15ರಷ್ಟು ಹಾಗೂ ಬಿಎಂಟಿಸಿಗೆ ಶೇ.17ರಷ್ಟು ದರ ಹೆಚ್ಚಳ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ.

ಶಕ್ತಿ ಯೋಜನೆ ಜಾರಿಯ ನಂತರ ನಿಗಮಗಳಿಗೆ ಹಣದ ಹರಿವು ಕಡಿಮೆಯಾಗಿರುವುದು ಮತ್ತು ಸರ್ಕಾರದಿಂದ ಬರಬೇಕಿರುವ ಕೋಟ್ಯಂತರ ರೂ.ಗಳ ಬಾಕಿ ಅನುದಾನ ವಿಳಂಬವಾಗುತ್ತಿರುವುದರಿಂದ ನಿಗಮಗಳ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ವೇಳೆ ದರ ಏರಿಕೆಯನ್ನು ವಿಳಂಬ ಮಾಡಿದರೆ ನಿಗಮಗಳ ನಿರ್ವಹಣೆಯೇ ಕಷ್ಟವಾಗಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅತುಲ್ ತಿವಾರಿ ಸಮಿತಿಯ ವರದಿ ಮಂಡನೆಯಾಗಿ ಅಂತಿಮ ತೀರ್ಮಾನ ಹೊರಬೀಳಲಿದೆ. ಸದ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನವೆಂಬರ್ ಮೊದಲ ವಾರದಲ್ಲಿ ಬಸ್ ಪ್ರಯಾಣ ದರ ಹೆಚ್ಚಳದ ಅಧಿಕೃತ ಆದೇಶ ಹೊರಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆಉತ್ತರ ಪ್ರದೇಶದಲ್ಲಿ ಮೂರನೇ ಅವಧಿಗಾಗಿ ಬಿಜೆಪಿಯ ತಂತ್ರ: ಕಲ್ಯಾಣ ಯೋಜನೆ, ಮಹಿಳಾ ಮತ ಮತ್ತು ಯೋಗಿ ವರ್ಚಸ್ಸಿನ ಮೇಲೆ ಭರವಸೆಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಟಾಪ್ 5 ಕಂಪನಿಗಳು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ!