LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING : NEET ಮರು ಪರೀಕ್ಷೆಗೂ ಮುನ್ನ ‘NTA’ ಮತ್ತೊಂದು ಎಡವಟ್ಟು ; ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ.!

ರೀ-ನೀಟ್ (RE-NEET UG 2026) ಪರೀಕ್ಷೆಗೆ ಮುನ್ನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತೊಂದು ಎಡವಟ್ಟಿನಿಂದ ಸುದ್ದಿಯಾಗಿದೆ. ನಾಗ್ಪುರದ ವಿದ್ಯಾರ್ಥಿಯೊಬ್ಬನ ಹಾಲ್ಟಿಕೆಟ್ನಲ್ಲಿ ಭಾರತದ ಬದಲು ಯುಎಇಯ ಅಬುಧಾಬಿಯನ್ನು ಪರೀಕ್ಷಾ ಕೇಂದ್ರವಾಗಿ ನಮೂದಿಸಲಾಗಿದ್ದು, ವಿದ್ಯಾರ್ಥಿ ಹಾಗೂ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಬಳಿಕ ಇದು ತಾಂತ್ರಿಕ ದೋಷದಿಂದ ಸಂಭವಿಸಿದ ತಪ್ಪು ಎಂದು NTA ಸ್ಪಷ್ಟನೆ ನೀಡಿದೆ.

ರೀ-ನೀಟ್ (RE-NEET UG 2026) ಪರೀಕ್ಷೆಗೆ ಮುನ್ನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತೊಂದು ಎಡವಟ್ಟಿನಿಂದ ಸುದ್ದಿಯಾಗಿದೆ. ನಾಗ್ಪುರದ ವಿದ್ಯಾರ್ಥಿಯೊಬ್ಬನಿಗೆ ನೀಡಲಾದ ಪ್ರವೇಶ ಪತ್ರದಲ್ಲಿ (Admit Card) ಪರೀಕ್ಷಾ ಕೇಂದ್ರವನ್ನು ಭಾರತದ ಬದಲು ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ಅಬುಧಾಬಿಯಲ್ಲಿ ತೋರಿಸಲಾಗಿದ್ದು, ಇದರಿಂದ ವಿದ್ಯಾರ್ಥಿ ಹಾಗೂ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.

ನಾಗ್ಪುರದ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬ ವಿದ್ಯಾರ್ಥಿ ಅಧಿಕೃತ ವೆಬ್ಸೈಟ್ನಿಂದ ತನ್ನ RE-NEET 2026 ಪ್ರವೇಶ ಪತ್ರ ಡೌನ್ಲೋಡ್ ಮಾಡಿದಾಗ ಈ ಎಡವಟ್ಟು ಬೆಳಕಿಗೆ ಬಂದಿದೆ. ಹಾಲ್ಟಿಕೆಟ್ನಲ್ಲಿ ಪರೀಕ್ಷಾ ಕೇಂದ್ರವಾಗಿ ಅಬುಧಾಬಿಯಲ್ಲಿರುವ ಭಾರತೀಯ ಶಾಲೆಯೊಂದನ್ನು ನಮೂದಿಸಲಾಗಿತ್ತು.ಅಬ್ದುಲ್ಲಾ ನಾಗ್ಪುರದಿಂದಲೇ ಅರ್ಜಿ ಸಲ್ಲಿಸಿದ್ದು, ಪರೀಕ್ಷಾ ಕೇಂದ್ರಕ್ಕಾಗಿ ನಾಗ್ಪುರ, ವರ್ಧಾ ಮತ್ತು ಭಂಡಾರಾ ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದನು. ಆದರೆ ಪ್ರವೇಶ ಪತ್ರದಲ್ಲಿ ವಿದೇಶಿ ಕೇಂದ್ರ ತೋರಿಸಿರುವುದು ಕುಟುಂಬಸ್ಥರಿಗೆ ಶಾಕ್ ನೀಡಿದೆ. ವಿಶೇಷವೆಂದರೆ ವಿದ್ಯಾರ್ಥಿಯ ಬಳಿ ಪಾಸ್ಪೋರ್ಟ್ ಕೂಡ ಇಲ್ಲದ ಕಾರಣ ವಿದೇಶಕ್ಕೆ ತೆರಳಿ ಪರೀಕ್ಷೆ ಬರೆಯುವುದು ಅಸಾಧ್ಯವಾಗಿದೆ.

ಈ ಕುರಿತು ಎನ್ಟಿಎ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ, ಇದು ತಾಂತ್ರಿಕ ದೋಷ (Technical Glitch)ದಿಂದ ಸಂಭವಿಸಿದ ತಪ್ಪು ಎಂದು ಸಂಸ್ಥೆ ಒಪ್ಪಿಕೊಂಡಿದೆ. ವಿದ್ಯಾರ್ಥಿಗೆ ಸರಿಯಾದ ಪರೀಕ್ಷಾ ಕೇಂದ್ರದೊಂದಿಗೆ ಹೊಸ ಪ್ರವೇಶ ಪತ್ರವನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಭರವಸೆ ನೀಡಿದೆ.

ಹಾಲ್ ಟಿಕೆಟ್ ನೋಡಿದ ತಕ್ಷಣ ನನ್ನ ಮಗ ಅಳಲು ಆರಂಭಿಸಿದ್ದ

ವಿದ್ಯಾರ್ಥಿಯ ತಂದೆ ಡಾ. ಮೊಹಮ್ಮದ್ ತಾಲಿಬ್, ಹಾಲ್ ಟಿಕೆಟ್ ನೋಡಿದ ತಕ್ಷಣ ನನ್ನ ಮಗ ಅಳಲು ಆರಂಭಿಸಿದ್ದ ನಮಗೆ ಭಾರೀ ಆಘಾತವಾಯಿತು,” ಎಂದು ತಿಳಿಸಿದ್ದಾರೆ.ಜೂನ್ 21ರಂದು ಮಧ್ಯಾಹ್ನ 2 ಗಂಟೆಯಿಂದ 5.15 ಗಂಟೆಯವರೆಗೆ ಪೆನ್-ಅಂಡ್-ಪೇಪರ್ ಮಾದರಿಯಲ್ಲಿ RE-NEET UG 2026 ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿನ ವೈಯಕ್ತಿಕ ಮಾಹಿತಿ, ಪರೀಕ್ಷಾ ಕೇಂದ್ರ ಹಾಗೂ ಇತರೆ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಎನ್ಟಿಎ ಸೂಚಿಸಿದೆ.
ವಿದ್ಯಾರ್ಥಿಯ ದೂರಿನ ಬಳಿಕ ಎನ್ಟಿಎ ತಪ್ಪನ್ನು ಒಪ್ಪಿಕೊಂಡಿದ್ದು, ಸರಿಯಾದ ಪರೀಕ್ಷಾ ಕೇಂದ್ರದೊಂದಿಗೆ ಹೊಸ ಪ್ರವೇಶ ಪತ್ರವನ್ನು ನೀಡುವುದಾಗಿ ಭರವಸೆ ನೀಡಿದೆ. ಜೂನ್ 21ರಂದು ನಡೆಯಲಿರುವ RE-NEET UG 2026 ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಹಾಲ್ಟಿಕೆಟ್ನಲ್ಲಿರುವ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಯಾವುದೇ ಗೊಂದಲ ಕಂಡುಬಂದರೆ ತಕ್ಷಣ ಎನ್ಟಿಎಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ