ಮೆಕ್ಸಿಕೋ ನಗರ: ಮೆಕ್ಸಿಕೋದಲ್ಲಿ ಶುಕ್ರವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ದಕ್ಷಿಣ ಕರಾವಳಿಯಲ್ಲಿ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ.
ಮೆಕ್ಸಿಕೋದ ಪ್ರಮುಖ ಪೆಸಿಫಿಕ್ ಬಂದರು ಮತ್ತು ಮೀನುಗಾರಿಕಾ ಪಟ್ಟಣವಾದ ಪೋರ್ಟೊ ಮಡೆರೊ ಕರಾವಳಿಯಲ್ಲಿ ಭೂಕಂಪ ಸಂಭವಿಸಿದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಪ್ರಕಾರ, ಅಕ್ವಿಲ್ಸ್ ಸೆರ್ಡಾನ್‌ನ ನೈಋತ್ಯಕ್ಕೆ 48 ಕಿ.ಮೀ ದೂರದಲ್ಲಿ 7.3 ತೀವ್ರತೆಯ ಪ್ರಾಥಮಿಕ ಭೂಕಂಪ ಸಂಭವಿಸಿದೆ.