ನವದೆಹಲಿ: ಚುನಾವಣಾ ಆಯೋಗದ 'ವಿಶೇಷ ಇಂಟೆನ್ಸಿವ್ ರಿವಿಷನ್' (SIR) ಪ್ರಕ್ರಿಯೆ ಹಾಗೂ ಆಯೋಗದ ವಿವಾದಾತ್ಮಕ ನಿರ್ಧಾರಗಳನ್ನು ಪ್ರಶ್ನಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ 'ಇಂಡಿಯಾ' (INDIA) ಒಕ್ಕೂಟದ ಪ್ರಮುಖ ನಾಯಕರು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿರುವ ಒಟ್ಟು 13 ಅರ್ಜಿಗಳ ವಿಚಾರಣೆಯು ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್, ನ್ಯಾಯಮೂರ್ತಿ ಜಯಮಾಲ್ಯ ಬಾಗ್ಜಿ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರನ್ನು ಒಳಗೊಂಡ ವಿಶೇಷ ತ್ರಿವಳಿ ನ್ಯಾಯಪೀಠವು ಈ ಅರ್ಜಿಗಳ ವಿಚಾರಣೆ ನಡೆಸಲಿದೆ.
ಚುನಾವಣಾ ಆಯೋಗದ ಏಕಪಕ್ಷೀಯ ಧೋರಣೆ ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳ ಸಾಮೂಹಿಕ ಕಡಿತವನ್ನು ವಿರೋಧಿಸಿರುವ ವಿಪಕ್ಷ ನಾಯಕರು, SIR ಪ್ರಕ್ರಿಯೆಗೆ ತಡೆ ನೀಡುವಂತೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಕೋರಿ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈಗಾಗಲೇ ಈ ಅರ್ಜಿಗಳ ಕೆಲವು ತಾಂತ್ರಿಕ ದೋಷಗಳನ್ನು ಎತ್ತಿ ತೋರಿಸಿರುವ ಸುಪ್ರೀಂ ಕೋರ್ಟ್, ಇಂದಿನ ವಿಚಾರಣೆಯಲ್ಲಿ ಈ ಅರ್ಜಿಗಳ ಸಿಂಧುತ್ವ ಹಾಗೂ ಅಂತರ ತಡೆ ಕೋರಿರುವ ಮನವಿಯ ಕುರಿತು ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.