LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BSNL ಗ್ರಾಹಕರಿಗೆ ಭರ್ಜರಿ ಗುಡ್‌ನ್ಯೂಸ್! ₹51ಕ್ಕೆ ಅನ್‌ಲಿಮಿಟೆಡ್ ಕಾಲ್, 2GB ಡೇಟಾ, 28 ದಿನ ವ್ಯಾಲಿಡಿಟಿ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ. ಅತ್ಯಂತ ಕಡಿಮೆ ಬೆಲೆಗೆ ಮತ್ತೊಂದು ಹೊಸ ರೀಚಾರ್ಜ್ ಪ್ಲಾನ್‌ ಅನ್ನು ಪರಿಚಯಿಸಿದೆ. ಈ ₹51 ರೀಚಾರ್ಜ್ ಪ್ಲಾನ್ನಲ್ಲಿ ಗ್ರಾಹಕರಿಗೆ ಹಲವು ಪ್ರಯೋಜನಗಳು ದೊರೆಯಲಿವೆ.

ಹೌದು. BSNLಕೇವಲ ₹51ಕ್ಕೆ 28 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 2GB ಡೇಟಾ ಹಾಗೂ 100 SMS ಸೌಲಭ್ಯ ನೀಡುವ ವಿಶೇಷ ಆಫರ್‌ ಅನ್ನು BSNL ಘೋಷಿಸಿದೆ. ಆದರೆ ಈ ಆಫರ್ ಹೊಸದಾಗಿ BSNL ಸಂಪರ್ಕ ಪಡೆಯುವ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, 2026ರ ಅಕ್ಟೋಬರ್ 31ರವರೆಗೆ ಪಡೆಯಬಹುದು.

₹51 ರೀಚಾರ್ಜ್ ಪ್ಲಾನ್‌ನಲ್ಲಿ ಏನೇನು ಸಿಗಲಿದೆ?

BSNL ಬಳಕೆದಾರರು ₹51ಕ್ಕೆ ರೀಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಪಡೆಯಬಹುದು. ಇದರ ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್, ಪ್ರತಿದಿನ 2GB ಡೇಟಾ ಹಾಗೂ ದಿನಕ್ಕೆ 100 SMS ಸೌಲಭ್ಯ ದೊರೆಯಲಿದೆ.

₹51 ಆಫರ್ ಎಷ್ಟು ದಿನ ಲಭ್ಯ?

ಅನ್‌ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 2GB ಡೇಟಾ ನೀಡುವ ಈ ₹51 ರೀಚಾರ್ಜ್ ಪ್ಲಾನ್‌ ಅನ್ನು ಗ್ರಾಹಕರು 2026ರ ಅಕ್ಟೋಬರ್ 31ರವರೆಗೆ ಪಡೆಯಬಹುದು.

ಈ ₹51 ರೀಚಾರ್ಜ್ ಪ್ಲಾನ್‌ನೊಂದಿಗೆ ಉಚಿತ ಸಿಮ್ ಕಾರ್ಡ್ ಪಡೆಯುವ ಅವಕಾಶವೂ ಇದೆ. ಆದರೆ ಈ ಸೌಲಭ್ಯ ಹೊಸ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ಹೊಸದಾಗಿ BSNL ಸಂಪರ್ಕ ಪಡೆಯುವವರಿಗೆ ಈ ಆಫರ್ ಲಭ್ಯವಾಗಲಿದೆ.

ಆಫರ್ ಪಡೆಯುವುದು ಹೇಗೆ?

BSNL ಬಳಕೆದಾರರು ತಮ್ಮ ಸಮೀಪದ BSNL ಕಸ್ಟಮರ್ ಸರ್ವಿಸ್ ಸೆಂಟರ್ ಅಥವಾ ಅಧಿಕೃತ ರಿಟೇಲರ್ ಮೂಲಕ ಈ ಆಫರ್ ಪಡೆಯಬಹುದು. ₹51 ಆಫರ್‌ಗೆ ಸಂಬಂಧಿಸಿದ ಮಾಹಿತಿಯನ್ನು BSNL ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿಯೂ ಹಂಚಿಕೊಂಡಿದೆ.

₹2,399 ವಾರ್ಷಿಕ ಪ್ಲಾನ್‌ನಲ್ಲೂ ಹೆಚ್ಚುವರಿ ಪ್ರಯೋಜನ

BSNL ವಾರ್ಷಿಕ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡುವ ಗ್ರಾಹಕರಿಗೂ ಹೆಚ್ಚುವರಿ ಪ್ರಯೋಜನ ನೀಡುತ್ತಿದೆ. ₹2,399 ವಾರ್ಷಿಕ ರೀಚಾರ್ಜ್ ಪ್ಲಾನ್ ಮೂಲಕ ಹೆಚ್ಚುವರಿಯಾಗಿ 15 ದಿನಗಳ ವ್ಯಾಲಿಡಿಟಿ ಪಡೆಯಬಹುದು.

ಸಾಮಾನ್ಯವಾಗಿ ₹2,399 ಪ್ಲಾನ್‌ನಲ್ಲಿ 365 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಆದರೆ ಈ ಆಫರ್‌ನಿಂದ ಹೆಚ್ಚುವರಿ 15 ದಿನಗಳು ದೊರೆಯಲಿದ್ದು, ಒಟ್ಟು 380 ದಿನಗಳ ವ್ಯಾಲಿಡಿಟಿ ಸಿಗಲಿದೆ.

₹2,399 ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ನಲ್ಲಿ 380 ದಿನಗಳವರೆಗೆ ಪ್ರತಿದಿನ 2GB ಡೇಟಾ, ಅನ್‌ಲಿಮಿಟೆಡ್ ಕರೆಗಳು ಹಾಗೂ ದಿನಕ್ಕೆ 100 SMS ಸೌಲಭ್ಯ ದೊರೆಯಲಿದೆ. ಈ ಹೆಚ್ಚುವರಿ ವ್ಯಾಲಿಡಿಟಿ ಆಫರ್ 2026ರ ಅಕ್ಟೋಬರ್ 1ರಿಂದ 15ರವರೆಗೆ ಲಭ್ಯವಿರಲಿದೆ.

ಒಟ್ಟಿನಲ್ಲಿ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ಕರೆ ಸೌಲಭ್ಯ ಬಯಸುವವರಿಗೆ BSNLನ ಈ ಆಫರ್ ಗಮನ ಸೆಳೆಯುವಂತಿದೆ. ₹51ರ ಪ್ಲಾನ್‌ನಲ್ಲಿ 28 ದಿನಗಳ ವ್ಯಾಲಿಡಿಟಿ ಸೇರಿದಂತೆ ಹಲವು ಪ್ರಯೋಜನಗಳಿದ್ದು, ಹೊಸದಾಗಿ BSNL ಸಂಪರ್ಕ ಪಡೆಯಲು ಬಯಸುವವರು ಈ ಆಫರ್‌ನ ಲಾಭ ಪಡೆಯಬಹುದು. ಆಫರ್ ಅವಧಿ ಮತ್ತು ಅನ್ವಯವಾಗುವ ಷರತ್ತುಗಳನ್ನು ಗಮನಿಸಿ ರೀಚಾರ್ಜ್ ಮಾಡುವುದು ಉತ್ತಮ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆ