LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BSNL Best Plan : ಜಿಯೋ, ಏರ್‌ಟೆಲ್‌ಗೆ BSNL ಟಕ್ಕರ್ ! ಕಡಿಮೆ ದರದಲ್ಲಿ ಹೆಚ್ಚು ಡೇಟಾ, ಅನ್’ಲಿಮಿಟೆಡ್ ಕರೆ ಸೌಲಭ್ಯ

ಬೆಂಗಳೂರು: ಜಿಯೋ, ಏರ್‌ಟೆಲ್ ಸೇರಿದಂತೆ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸವಾಲು ಹಾಕುವ ರೀತಿಯಲ್ಲಿ BSNL ತನ್ನ ಗ್ರಾಹಕರಿಗಾಗಿ ಮತ್ತೊಂದು ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿರುವ ಈ ಯೋಜನೆ ಗ್ರಾಹಕರ ಗಮನ ಸೆಳೆಯುತ್ತಿದೆ.

ಸರ್ಕಾರಿ ಸ್ವಾಮ್ಯದ BSNL ಆರ್ಥಿಕ ಸ್ಥಿತಿಯೂ ಈಗ ಸುಧಾರಿಸಿದೆ. ಸುಮಾರು 17 ವರ್ಷಗಳ ಬಳಿಕ ಕಂಪನಿಯು ಒಂದು ತ್ರೈಮಾಸಿಕದಲ್ಲಿ ಲಾಭ ದಾಖಲಿಸಿದೆ. ಈ ನಡುವೆ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರಗಳನ್ನು ಹೆಚ್ಚಿಸುತ್ತಿರುವಾಗ, BSNL ಕಡಿಮೆ ಬೆಲೆಯಲ್ಲಿ ಉತ್ತಮ ಸೌಲಭ್ಯಗಳನ್ನು ನೀಡುತ್ತಿರುವುದರಿಂದ ಕಂಪನಿಯ ಚಂದಾದಾರರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ದೇಶಾದ್ಯಂತ 4G ಜಾಲವನ್ನು ವೇಗವಾಗಿ ವಿಸ್ತರಿಸುತ್ತಿರುವ BSNL, ಶೀಘ್ರದಲ್ಲೇ 5G ಸೇವೆಗಳನ್ನು ಆರಂಭಿಸಲು ಸಹ ಸಿದ್ಧತೆ ನಡೆಸುತ್ತಿದೆ.

BSNL ₹199 ರೀಚಾರ್ಜ್ ಪ್ಲ್ಯಾನ್‌ನಲ್ಲಿ ಏನೆಲ್ಲಾ ಸಿಗುತ್ತದೆ?

ಕಡಿಮೆ ಬೆಲೆಯಲ್ಲಿ ಹೆಚ್ಚು ಡೇಟಾ ಬೇಕೆಂದು ಹುಡುಕುತ್ತಿರುವವರಿಗೆ BSNLನ ₹199 ಪ್ರೀಪೇಯ್ಡ್ ಪ್ಲ್ಯಾನ್ ಉತ್ತಮ ಆಯ್ಕೆಯಾಗಬಹುದು.

  • ಪ್ರತಿದಿನ 2GB ಹೈ-ಸ್ಪೀಡ್ ಡೇಟಾ
  • ಡೇಟಾ ಮುಗಿದ ಬಳಿಕವೂ ಇಂಟರ್ನೆಟ್: 2GB ಬಳಕೆ ಮುಗಿದ ನಂತರ ವೇಗ 40 kbpsಗೆ ಇಳಿಯುತ್ತದೆ. ಆದರೆ ಇಂಟರ್ನೆಟ್ ಸೇವೆ ಮುಂದುವರಿಯುತ್ತದೆ.
  • ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್: ಯಾವುದೇ ನೆಟ್‌ವರ್ಕ್‌ಗೆ ಮಿತಿಯಿಲ್ಲದ ಉಚಿತ ಕರೆ.
  • ಪ್ರತಿದಿನ 100 ಉಚಿತ SMS
  • 28 ದಿನಗಳ ವ್ಯಾಲಿಡಿಟಿ

ಜಿಯೋ, ಏರ್‌ಟೆಲ್, Vi ಜೊತೆ ಹೋಲಿಕೆ

BSNL ಕೇವಲ ₹199ಕ್ಕೆ ಪ್ರತಿದಿನ 2GB ಡೇಟಾ ನೀಡುತ್ತಿರುವಾಗ, ಇತರ ಖಾಸಗಿ ಕಂಪನಿಗಳ 28 ದಿನಗಳ ಯೋಜನೆಗಳ ದರ ಹೀಗಿದೆ:

  • ಜಿಯೋ ಮತ್ತು ಏರ್‌ಟೆಲ್: 28 ದಿನಗಳಿಗೆ 1.5GB ದಿನಸಿ ಡೇಟಾಗಾಗಿ ಸುಮಾರು ₹299.
  • Vi (ವೊಡಾಫೋನ್ ಐಡಿಯಾ): ದಿನಕ್ಕೆ 2GB ಡೇಟಾ ನೀಡಿದರೂ ಅದರ ಬೆಲೆ ₹408.

ಅಂದರೆ, BSNL ಕೇವಲ ₹199ಕ್ಕೆ ದಿನಕ್ಕೆ 2GB ಡೇಟಾ ನೀಡುತ್ತಿರುವುದರಿಂದ, ಜಿಯೋ ಹಾಗೂ ಏರ್‌ಟೆಲ್‌ಗಿಂತ ಸುಮಾರು ₹100 ಕಡಿಮೆ ಬೆಲೆಯಲ್ಲಿಯೇ ಹೆಚ್ಚು ಡೇಟಾ ಲಭ್ಯವಾಗುತ್ತದೆ. Vi ಜೊತೆ ಹೋಲಿಸಿದರೆ, ಅದರ ಬೆಲೆ ಅರ್ಧಕ್ಕಿಂತಲೂ ಕಡಿಮೆ.

ಖರ್ಚು-ಪ್ರಯೋಜನದ ದೃಷ್ಟಿಯಿಂದ BSNL ಮುಂಚೂಣಿ

ಹೆಚ್ಚು ಡೇಟಾ, ಅನ್ಲಿಮಿಟೆಡ್ ಕರೆ ಹಾಗೂ ಕಡಿಮೆ ಬೆಲೆಯ ರೀಚಾರ್ಜ್ ಬೇಕಾದ ಗ್ರಾಹಕರಿಗೆ BSNLನ ₹199 ಪ್ಲ್ಯಾನ್ ಅತ್ಯಂತ ಮೌಲ್ಯಯುತ ಆಯ್ಕೆಯಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳ ದುಬಾರಿ ಯೋಜನೆಗಳ ನಡುವೆ, ಈ ಪ್ಲ್ಯಾನ್ ಗ್ರಾಹಕರಿಗೆ ಉತ್ತಮ ಉಳಿತಾಯದ ಜೊತೆಗೆ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ